More

    ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಲಕ್ಕಿ ಅಲಿಗೆ ಉತ್ತರಿಸಿದ್ದು ಹೀಗೆ…

    ಬೆಂಗಳೂರು: ಇಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿತ್ತು. ಖ್ಯಾತ ಗಾಯಕರೊಬ್ಬರ ಜಾಗವನ್ನು ಭೂಮಾಫಿಯಾದವರು ಕಬಳಿಸಿದ್ದು, ಅದಕ್ಕೆ ರೋಹಿಣಿ ಸಿಂಧೂರಿ ಕೈಜೋಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಖ್ಯಾತ ಗಾಯಕ ಲಕ್ಕಿ ಅಲಿ ಅವರೇ ಈ ಆರೋಪವನ್ನು ಮಾಡಿದ್ದರು. ಇದೀಗ ಲಕ್ಕಿ ಅಲಿಗೆ ರೋಹಿಣಿ ಸಿಂಧೂರಿ ಉತ್ತರ ನೀಡಿದ್ದಾರೆ.

    ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಪೊಲೀಸರು ಕ್ರಮ ಜರುಗಿಸುತ್ತಿಲ್ಲ ಎಂದು ಬೇಸರಗೊಂಡ ಲಕ್ಕಿ ಅಲಿ ಸೋಷಿಯಲ್ ಮೀಡಿಯಾ ಮೂಲಕ ಡಿಜಿಪಿ ಪ್ರವೀಣ್​ ಸೂದ್ ಅವರಿಗೆ ಮನವಿ ಮಾಡಿಕೊಂಡಿದ್ದರು. ನಾನು ಮಕ್ಸೂದ್ ಮಹಮೂದ್​ ಅಲಿ, ದಿವಂಗತ ಹಿರಿಯ ನಟ ಮಹಮೂದ್ ಅಲಿ ಅವರ ಪುತ್ರ, ನಾನು ಲಕ್ಕಿ ಅಲಿ ಎಂದೂ ಕರೆಯಲ್ಪಡುತ್ತಿದ್ದೇನೆ ಎಂದು ಪರಿಚಯಿಸಿಕೊಂಡಿರುವ ಅವರು, ಸದ್ಯ ನಾನು ದುಬೈನಲ್ಲಿದ್ದು, ಇದು ತುರ್ತು ಪ್ರಕರಣ ಎಂದು ನ್ಯಾಯಕ್ಕಾಗಿ ಡಿಜಿಪಿ ಅವರಲ್ಲಿ ಮೊರೆ ಇಟ್ಟಿದ್ದರು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಿಸಿರುವ ರೋಹಿಣಿ ಸಿಂಧೂರಿ, ಆರೋಪವನ್ನು ಅಲ್ಲಗಳೆದಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ರೋಹಿಣಿ ಸಿಂಧೂರಿ ಪ್ರಕಟಿಸಿದ್ದಾರೆ.

    ಪತ್ರಿಕಾ ಪ್ರಕಟಣೆಯಲ್ಲಿ ‘ಶ್ರೀ ಮಕ್ಸೂದ್ ಎಂ ಅಲಿ ಅಲಿಯಾಸ್​ ಲಕ್ಕಿ ಅಲಿಯವರ ಆರೋಪ ಸುಳ್ಳು ಮತ್ತು ಆಧಾರರಹಿತ ಆಗಿದ್ದು ನಾನು ಇದರಿಂದ ಆಶ್ಚರ್ಯ ಹಾಗೂ ಆಘಾತಕ್ಕೊಳಗಾಗಿದ್ದೇನೆ. ಈ ಪ್ರಕರಣದಲ್ಲಿ ನಾನು ಯಾವುದೇ ಪಾತ್ರ ಹೊಂದಿಲ್ಲ. ಆದರೂ ದುರುದ್ದೇಶದಿಂದ ನನ್ನನ್ನು ಈ ವಿಷಯದಲ್ಲಿ ಅನಗತ್ಯವಾಗಿ ಎಳೆಯಲಾಗುತ್ತಿದೆ. OS ಸಂಖ್ಯೆ 5592/2016 ರಲ್ಲಿ ಲಕ್ಕಿ ಅಲಿ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ಇದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ವಿಷಯವು ನ್ಯಾಯದ ಅಧೀನವಾಗಿ ಉಳಿದಿದೆ. ನಾನು ಶ್ರೀ ಅಲಿ ಅವರ ಕಲೆಯನ್ನು ಗೌರವಿಸುತ್ತೇನೆ. ಆದರೆ ನ್ಯಾಯಾಲಯಗಳು ಈ ವಿಷಯವನ್ನು ಕೈಗೆತ್ತಿಕೊಂಡಿರುವಾಗ ಇದು ಸಂಪೂರ್ಣವಾಗಿ ಅನಗತ್ಯ ಎಂದು ನಾನು ಭಾವಿಸುತ್ತೇನೆ. ನನ್ನ ಹೆಸರನ್ನು ಹಾಳು ಮಾಡಲು ಮತ್ತು ಸಾರ್ವಜನಿಕರ ಅನುಕಂಪ ಗಳಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ. ನಾನು ಎಲ್ಲಾ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗುತ್ತಿದ್ದೇನೆ’ ಎಂದು ಬರೆದಿದ್ದಾರೆ.

    ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಲಕ್ಕಿ ಅಲಿಗೆ ಉತ್ತರಿಸಿದ್ದು ಹೀಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts