More

    ಕಿಟಕಿ ತೆರದಿಟ್ಟು ಕಾರು ಚಲಾಯಿಸಿದರೆ ಹೆಚ್ಚು ಮೈಲೇಜ್​ ಸಿಗುತ್ತಾ..?

    ಬೆಂಗಳೂರು: ಕಾರು ಎಷ್ಟು ಮೈಲೇಜ್​ ಕೊಡುತ್ತೆ ಎನ್ನುವ ವಿಷಯ ಇನ್ನೂ ಅನೇಕರು ಕಾರು ಖರೀದಿಸುವ ಮುನ್ನ ಆಲೋಚಿಸುವ ವಿಷಯವಾಗಿದೆ. ಕಾರಿನಲ್ಲಿರುವ AC, ಎಂಜಿನ್​ ಮೇಲೆ ಹೆಚ್ಚಿನ ಒತ್ತಡ ಹಾಕಿ ಇಂಧನ ಖಾಲಿ ಮಾಡುತ್ತೆ ಎನ್ನುವುದು ಅನೇಕರಿಗೆ ಈಗಾಗಲೇ ಗೊತ್ತಿರುವ ಸಂಗತಿ. ಹೀಗಾಗಿ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಕಿಟಕಿ ತೆರೆದಿಟ್ಟೇ ಅನೇಕರು ಕಾರು ಚಲಾಯಿಸುತ್ತಾರೆ.

    ಇಲ್ಲೊಬ್ಬ ಅರುಣ್ ಪನ್ವಾರ್ ಎನ್ನುವ ವ್ಲಾಗರ್​ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕಾರಿನ ಮೈಲೇಜ್​ ಸಂಬಂಧಿಸಿದ ವಿಡಿಯೋ ಒಂದನ್ನು ಅಪ್‌ಲೋಡ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಅರುಣ್​ ಮತ್ತು ಆತನ ಸ್ನೇಹಿತರು ಯಾವುದೋ ಕೆಲಸದ ನಿಮಿತ್ತ ಚಿಕ್ಕ ರಸ್ತೆ ಪ್ರವಾಸದಲ್ಲಿದ್ದರು.
    ಅವರಲ್ಲಿ ಒಬ್ಬರು ಕಿಯಾ ಸೆಲ್ಟೋಸ್ ಕಾರು ಎಸಿ ಇದ್ದಾಗ ಹೆಚ್ಚು ಮೈಲೇಜ್​ ಕೊಡುತ್ತೋ ಅಥವಾ ಆಫ್​ ಇದ್ದಾಗ ಇಲ್ಲದೆಯೇ ಹೆಚ್ಚು ಮೈಲೇಜ್​ ಕೊಡುತ್ತೋ ಎಂದು ಪರೀಕ್ಷಿಸಲು ಪರೀಕ್ಷೆಯನ್ನು ಪ್ರಸ್ತಾಪಿಸಿದರು. ವ್ಲಾಗರ್ ತಮ್ಮ ಸ್ಥಳದಿಂದ ಸುಮಾರು 100 ಕಿಮೀ ದೂರದಲ್ಲಿರುವ ಸ್ಥಳಕ್ಕೆ ವಾಹನ ಚಾಲನೆ ಮಾಡುತ್ತಿದ್ದರು. ಅವರು ಪ್ರವಾಸವನ್ನು ಪ್ರಾರಂಭಿಸುವ ಮೊದಲು ಟ್ಯಾಂಕ್​ ಪೂರ್ತಿ ಡೀಸೆಲ್ ತುಂಬುತ್ತಾರೆ ಮತ್ತು ಟ್ರಿಪ್ ಮೀಟರ್ ಅನ್ನು 0ಗೆ ತಂದಿರಿಸುತ್ತಾರೆ.

    ಈ ಟ್ರಿಪ್​ನಲ್ಲಿ AC ಆನ್ ಆಗಿದ್ದು ಎಲ್ಲಾ ಕಿಟಕಿಗಳನ್ನು ಹಾಕಲಾಗಿತ್ತು. ಚಾಲಕನು ಸರಾಸರಿ 100 ಕಿಮೀ ವೇಗದಲ್ಲಿ ಚಾಲನೆ ಮಾಡುತ್ತಾನೆ. ತಲುಪಬೇಕಾದ ಸ್ಥಳ ತಲುಪಿದ ನಂತರ ಪರೀಕ್ಷಿಸಿದಾಗ 6.94 ಲೀಟರ್ ಡೀಸೆಲ್ ಖರ್ಚಾಗಿತ್ತು. ಅಂದರೆ ಕಾರು ಪ್ರತೀ ಲೀಟರ್​ಗೆ 18.29 ಕಿಮೀ ಓಡಿತ್ತು.

    ಈ ಪ್ರಯೋಗದ ಮುಂದಿನ ಹಂತಕ್ಕಾಗಿ ಕಾರನ್ನು ಮತ್ತೇ ಫುಲ್​ ಟ್ಯಾಂಕ್​ ಮಾಡಲಾಯಿತು. ಈ ಬಾರಿ ಕಾರಿನ ಕಿಟಕಿಗಳನ್ನು ತೆರೆದಿಟ್ಟು ಚಲಾಯಿಸಲಾಯಿತು. ಆಗ ಅನೇಕ ಬಾರಿ ಧೂಳು ಕಾರಿನ ಒಳಗೆ ಹೋಯಿತು. 100 ಕಿಮೀ ಯಾನದ ಕಡೆಗೆ ಟ್ಯಾಂಕ್​ ಪರೀಕ್ಷಿಸಿದಾಗ ಕಾರು ಒಟ್ಟು 6.83 ಲೀಟರ್​ ಡಿಸೇಲ್​ ಖರ್ಚು ಮಾಡಿತ್ತು. ಅಂದರೆ ಸುಮಾರು 18.53 ಮೈಲೇಜ್​ ನೀಡಿತ್ತು.

    ನೀವು ಹೆಚ್ಚಿನ ವೇಗದಲ್ಲಿ ಪ್ರಯಾಣಿಸುವಾಗ ಕಿಟಕಿಗಳನ್ನು ತೆರೆದಿಟ್ಟರೆ ಅದು ಹೆಚ್ಚು ಡ್ರ್ಯಾಗ್ ಅನ್ನು ಸೃಷ್ಟಿಸುತ್ತದೆ. ಇದರಿಂದ ಮೈಲೇಜ್​ ಕಡಿಮೆ ಮಾಡುತ್ತೆ. ಆದರೆ ಈ ಸಂದರ್ಭದಲ್ಲಿ ಕಾರಿನ ಹೊರಗಿನ ತಾಪಮಾನವು ಪ್ರಮುಖ ಪಾತ್ರವನ್ನು ವಹಿಸಿದಂತೆ ತೋರುತ್ತಿದೆ. ವೀಡಿಯೊದಲ್ಲಿ ನೋಡಿದಂತೆ, ವ್ಲಾಗರ್ ಬಿಸಿಲು ಇರುವಾಗ ಡ್ರೈವ್ ಅನ್ನು ಪ್ರಾರಂಭಿಸಿದ್ದಾರೆ. ಅಂದರೆ ಕ್ಯಾಬಿನ್ ಅನ್ನು ತಂಪಾಗಿರಿಸಲು AC ಹೆಚ್ಚು ಕೆಲಸ ಮಾಡಬೇಕಾಯಿತು. ರಾತ್ರಿಯಲ್ಲಿ, ತಾಪಮಾನ ಕಡಿಮೆಯಾಗುತ್ತದೆ. ಹೀಗಾಗಿ ಇಂಧನ ಖರ್ಚಾಗುವುದೂ ಕಡಿಮೆಯಾಗುತ್ತದೆ. ಎರಡೂ ಪರೀಕ್ಷೆಗಳಲ್ಲಿ ಕಾರು ಬಹುತೇಕ ಒಂದೇ ರೀತಿಯ ಮೈಲೇಜ್​ ನೀಡಲು ಇದು ಒಂದು ಕಾರಣವಾಗಿರಬಹುದು. ಮೈಲೇಜ್​ನಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲ ಎಂದಾದರೆ ನಿಮ್ಮ ಕಾರನ್ನು AC ಯೊಂದಿಗೆ ಚಾಲನೆ ಮಾಡಬಹುದು. ಇದರಿಂದ ಡಸ್ಟ್​ ಎಲರ್ಜಿ ಇರುವವರಿಗೂ ಸಹಕಾರಿ, ಮತ್ತು ದೀರ್ಘ ಪ್ರಯಾಣದ ಸಂದರ್ಭ ಆರಾಮವಾಗಿ ಪ್ರಯಾಣ ಮಾಡಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts