More

    ಗುಜರಾತಿನಲ್ಲಿ ಮದ್ಯ ಸಾಗಿಸುತ್ತಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸೆರೆ!

    ಗುಜರಾತ್​: ಗುಜರಾತ್ ವಿಧಾನಸಭೆ ಚುನಾವಣೆಯ ಅಂತಿಮ ಹಂತದ ಮತದಾನ ನಡೆಯುತ್ತಿದೆ. ಈ ನಡುವೆ ಗುಜರಾತ್‌ನ ಅರಾವಳಿ ಜಿಲ್ಲೆಯ ಬಿಜೆಪಿ ಅಧ್ಯಕ್ಷರ ವರ್ತನೆ ಬಗ್ಗೆ ಟೀಕೆಗಳು ಬರುತ್ತಿವೆ. ಅರವಳಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮದ್ಯದ ಬಾಟಲಿಗಳನ್ನು ಮುಕ್ತವಾಗಿ ಸಾಗಿಸುತ್ತಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಹೇಳಿ ಕೇಳಿ ಗುಜರಾತ್​ ‘ಒಣ ರಾಜ್ಯ’. ಅಂದರೆ, ಗುಜರಾತಿನಲ್ಲಿ ಮದ್ಯ ಮಾರಾಟ ನಿಷಿದ್ಧ. ಹೀಗಾಗಿ ಅರಾವಳಿ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಭಾರಿ ವಿವಾದಕ್ಕೆ ಕಾರಣರಾಗಿದ್ದಾರೆ.

    ಅರಾವಳಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಹಿರಂಗವಾಗಿ ಮದ್ಯದ ಪೆಟ್ಟಿಗೆಗಳನ್ನು ಒಯ್ಯುತ್ತಿದ್ದಾರೆ ಎಂದು ದೀಪಕ್ ಖತ್ರಿ ಎನ್ನುವವರು ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಟ್ವೀಟ್​ನಲ್ಲಿ ‘ಗುಜರಾತ್​ನ ಅರಾವಳಿ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಬಹಿರಂಗವಾಗಿ ಮದ್ಯದ ಬಾಕ್ಸ್​ಗಳನ್ನು ಹೊತ್ತೊಯ್ಯುತ್ತಿದ್ದಾರೆ. ಬಿಜೆಪಿಯವರು ಮದ್ಯ ಹಂಚುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಮೌನವಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಏನಾದರೂ ವಿವರಣೆ ನೀಡುವುದೇ’ ಎಂದು ದೀಪಕ್​ ಖತ್ರಿ ಬರೆದಿದ್ದಾರೆ. ಕೆಲವರು ಮದ್ಯದ ಬಾಟಲಿಗಳನ್ನು ಕಾರಿನಲ್ಲಿ ಹಾಕುತ್ತಿರುವುದು ವಿಡಿಯೋದಲ್ಲಿದೆ.

    ಗುಜರಾತ್ ರಾಜ್ಯ ಚುನಾವಣಾ ಆಯೋಗದ ಪ್ರತಿಕ್ರಿಯೆ:
    ಅರಾವಳಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಮದ್ಯದ ಪೆಟ್ಟಿಗೆಗಳನ್ನು ಹೊತ್ತೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ನಂತರ ಗುಜರಾತ್ ರಾಜ್ಯ ಚುನಾವಣಾ ಆಯೋಗ ಪ್ರತಿಕ್ರಿಯಿಸಿದೆ.

    ಈ ಬಗ್ಗೆ ಚುನಾವಣಾ ಆಯೋಗ ‘ನಿಷೇಧಾಜ್ಞೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅರಾವಳಿ ಜಿಲ್ಲೆಯ ಎಸ್‌ಪಿ ಪ್ರಕಾರ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ. ಮಾಲ್‌ಪುರ ಪಿಎಸ್‌ಸಿಆರ್ ನಂ 6220/2022 ರ ಪ್ರಕಾರ ಗುಜ್ ಪ್ರೋಹಿಬಿಷನ್​ ಆ್ಯಕ್ಟ್, 1949 ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ರೆಜಿಸ್ಟ್ರೇಷನ್​ ನಂ ಜಿಜೆ 05 ಸಿಎಫ್ 8970 ರ 876 ವಾಹನದಲ್ಲಿ ₹87,600 ಮೌಲ್ಯದ ಐಎಂಎಫ್‌ಎಲ್ ಬಾಟಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts