More

    ಗುಜರಾತಲ್ಲಿ ಮತ್ತೆ ಬಿಜೆಪಿ ಜಯಭೇರಿ; ಹಿಮಾಚಲದಲ್ಲೂ ಕಮಲ: ಚುನಾವಣೋತ್ತರ ಸಮೀಕ್ಷೆಯಲ್ಲಿ ಬಹಿರಂಗ

    ನವದೆಹಲಿ: ಗುಜರಾತ್​ನಲ್ಲಿನ ವಿಧಾನಸಭೆಗೆ ಇಂದು ಚುನಾವಣೆ ಕೊನೆಗೊಂಡಿದ್ದು ಹಾಗೂ ಈಗಾಗಲೇ ಚುನಾವಣೆ ಮುಗಿದಿರುವ ಹಿಮಾಚಲಪ್ರದೇಶಕ್ಕೆ ಸಂಬಂಧಿಸಿದಂತೆ ಚುನಾವಣೋತ್ತರ ಸಮೀಕ್ಷೆ ಬಹಿರಂಗಗೊಂಡಿದ್ದು, ಗುಜರಾತಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂಬುದು ನಿಚ್ಚಳವಾಗಿದೆ.

    ಗುಜರಾತ್​ನ 182 ಮತ್ತು ಹಿಮಾಚಲಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಮುಗಿದಿದ್ದು, ಮತದಾನದ ಫಲಿತಾಂಶವು ಡಿ.8ರಂದು ಪ್ರಕಟವಾಗಲಿದೆ. ಈ ಮಧ್ಯೆ ಇಂದು ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ. ವಿವಿಧ ಏಜೆನ್ಸಿಗಳು ನಡೆಸಿರುವ ಸಮೀಕ್ಷೆಗಳ ಫಲಿತಾಂಶದ ಪ್ರಕಾರ ಗುಜರಾತಲ್ಲಿ ಬಿಜೆಪಿ ಜಯಭೇರಿ ಖಚಿತ ಎಂಬಂತಿದೆ.

    ಅಂದಹಾಗೆ ಗುಜರಾತ್​ನಲ್ಲಿ ಬಹುಮತಕ್ಕೆ 92 ಸ್ಥಾನಗಳಲ್ಲಿ ಮತ್ತು ಹಿಮಾಚಲಪ್ರದೇಶದಲ್ಲಿ ಬಹುಮತಕ್ಕೆ 35 ಸ್ಥಾನಗಳು ಬರಬೇಕಿದೆ. ಆದರೆ ಚುನಾವಣೋತ್ತರ ಸಮೀಕ್ಷೆಗಳ ಒಟ್ಟಾರೆ ಫಲಿತಾಂಶದ ಪ್ರಕಾರ ಗುಜರಾತ್​ನಲ್ಲಿ ಬಿಜೆಪಿ 131 ಸ್ಥಾನಗಳನ್ನು ಗಳಿಸುವ ಮೂಲಕ ಜಯಭೇರಿ ಬಾರಿಸಲಿದೆ. ಕಾಂಗ್ರೆಸ್​-41, ಆಪ್​-7 ಮತ್ತು ಇತರ-3 ಸ್ಥಾನಗಳನ್ನು ಗೆಲ್ಲಲಿವೆ. ಹಿಮಾಚಲಪ್ರದೇಶದಲ್ಲಿ ಬಹುಮತಕ್ಕೆ ಬೇಕಿರುವ 35 ಸ್ಥಾನಗಳನ್ನಷ್ಟೇ ಗಳಿಸಲಿರುವುದರಿಂದ ಅಧಿಕಾರ ಚಂಚಲ ಎಂಬಂತಾಗುವ ಸಾಧ್ಯತೆ ಇದೆ. ಉಳಿದಂತೆ ಕಾಂಗ್ರೆಸ್-29, ಇತರ-4 ಸ್ಥಾನಗಳಲ್ಲಿ ಗೆಲ್ಲಲಿದ್ದು, ಆಪ್​ ಶೂನ್ಯದಲ್ಲಿ ಇರಲಿದೆ.

    ಈ ಮಧ್ಯೆ ದೆಹಲಿಯ ಮಹಾನಗರ ಪಾಲಿಕೆಯ ಚುನಾವಣೆಗೆ ಸಂಬಂಧಿಸಿದಂತೆಯೂ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಹೊಮ್ಮಿದ್ದು, ಅಲ್ಲಿ ಆಪ್​ ಜಯಭೇರಿ ಬಾರಿಸಲಿದೆ ಎನ್ನಲಾಗಿದೆ. 250 ವಾರ್ಡ್​ಗಳ ಪೈಕಿ ಅಧಿಕಾರ ಹಿಡಿಯಲು 126 ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಆದರೆ ಸಮೀಕ್ಷೆಯ ಒಟ್ಟಾರೆ ಫಲಿತಾಂಶದ ಪ್ರಕಾರ ದೆಹಲಿಯ ಪಾಲಿಕೆ ಚುನಾವಣೆಯಲ್ಲಿ ಆಪ್​-159 ಸ್ಥಾನಗಳೊಂದಿಗೆ ಭರ್ಜರಿ ಜಯ ಗಳಿಸಲಿದೆ. ಬಿಜೆಪಿ-83, ಕಾಂಗ್ರೆಸ್-6, ಇತರ-2 ಸ್ಥಾನಗಳನ್ನು ಗೆಲ್ಲಲಿವೆ.

    ವಿವಿಧ ಏಜೆನ್ಸಿಗಳ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಇಲ್ಲಿದೆ..

    ಗುಜರಾತಲ್ಲಿ ಮತ್ತೆ ಬಿಜೆಪಿ ಜಯಭೇರಿ; ಹಿಮಾಚಲದಲ್ಲೂ ಕಮಲ: ಚುನಾವಣೋತ್ತರ ಸಮೀಕ್ಷೆಯಲ್ಲಿ ಬಹಿರಂಗ ಗುಜರಾತಲ್ಲಿ ಮತ್ತೆ ಬಿಜೆಪಿ ಜಯಭೇರಿ; ಹಿಮಾಚಲದಲ್ಲೂ ಕಮಲ: ಚುನಾವಣೋತ್ತರ ಸಮೀಕ್ಷೆಯಲ್ಲಿ ಬಹಿರಂಗ ಗುಜರಾತಲ್ಲಿ ಮತ್ತೆ ಬಿಜೆಪಿ ಜಯಭೇರಿ; ಹಿಮಾಚಲದಲ್ಲೂ ಕಮಲ: ಚುನಾವಣೋತ್ತರ ಸಮೀಕ್ಷೆಯಲ್ಲಿ ಬಹಿರಂಗ ಗುಜರಾತಲ್ಲಿ ಮತ್ತೆ ಬಿಜೆಪಿ ಜಯಭೇರಿ; ಹಿಮಾಚಲದಲ್ಲೂ ಕಮಲ: ಚುನಾವಣೋತ್ತರ ಸಮೀಕ್ಷೆಯಲ್ಲಿ ಬಹಿರಂಗ

    ಖ್ಯಾತ ಗಾಯಕನ ಆಸ್ತಿಯೇ ಒತ್ತುವರಿ; ಭೂಮಾಫಿಯಾಗೆ ಕೈಜೋಡಿಸಿದ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ!?

    ದೇಶದಲ್ಲಿ ಟ್ರೆಂಡಿಂಗ್​ನಲ್ಲಿದೆ ‘ಹಾರ್ಟ್ ಅಟ್ಯಾಕ್’; ಅದರ ಬಗ್ಗೆಯೇ ಮಾತಾಡುತ್ತಿದ್ದಾರೆ ಹಲವರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts