More

    ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ತೋರಿದ ಈ 5 ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಸಾಧ್ಯವಂತೆ!

    ನವದೆಹಲಿ: ವಿರಾಟ್ ಕೊಹ್ಲಿ ತೋರಿದ ಜವಾಬ್ದಾರಿಯುತ ಇನ್ನಿಂಗ್ಸ್​​ನಿಂದ ಟಿ-20 ವಿಶ್ವಕಪ್​ನಲ್ಲಿ ಮೊದಲ ಪಂದ್ಯವನ್ನು ಭಾರತ ಗೆದ್ದುಕೊಂಡಿತು. ಆರಂಭದಲ್ಲಿಯೇ ಪ್ರಮುಖ ನಾಲ್ಕು ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ವಿರಾಟ್ ಕೊಹ್ಲಿ ಜಯದ ಹೊಸ್ತಿಲು ದಾಟಿಸಿದರು.

    ಮೊಲ್ಬೋರ್ನ್​ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆಲ್ಲಲೇಬೇಕಾದ ಒತ್ತಡ ಭಾರತ ತಂಡಕ್ಕಿತ್ತು. ಪಾಕಿಸ್ತಾನ ವಿರುದ್ಧ ಸೋಲು ಸ್ವೀಕರಿಸಲು ಯಾವೊಬ್ಬ ಭಾರತೀಯನೂ ತಯಾರಿಲ್ಲ. ಜೊತೆಗೆ ಕ್ರೀಡಾಂಗಣದಲ್ಲಿ ನೆರೆದಿದ್ದ 90 ಸಾವಿರಕ್ಕೂ ಅಧಿಕ ಮಂದಿ ಕ್ರಿಕೆಟ್ ಪ್ರೇಮಿಗಳು. ಇಂತಹ ಕಠಿಣ ಸಂದರ್ಭದಲ್ಲಿ ಎಂತಹ ಕ್ರಿಕೆಟಿಗನಿಗಾದರೂ ಒಂದು ಕ್ಷಣ ಒತ್ತಡ ನಿರ್ಮಾಣವಾಗುವುದು ಸಹಜ. ಆದರೆ ವಿರಾಟ್ ಕೊಹ್ಲಿ ಮಾತ್ರ ನಿಧಾನವಾಗಿ ಇನ್ನಿಂಗ್ಸ್​ ಕಟ್ಟುತ್ತಾ ಮುಂದೆ ಸಾಗಿದರು.

    ಪಾಕಿಸ್ತಾನ ವಿರುದ್ಧ ಭಾರತ ಜಯಗಳಿಸಿ ಎರಡು ದಿನಗಳೇ ಕಳೆದು ಹೋಗಿವೆ. ಆದರೆ ಕ್ರಿಕೆಟ್ ಪ್ರೇಮಿಗಳು ಮಾತ್ರ ಈ ಪಂದ್ಯದ ಗುಂಗಿನಿಂದ ಇನ್ನೂ ಹೊರ ಬಂದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕ್ರಿಕೆಟ್ ಪಂಡಿತರಿಂದ ಹಿಡಿದು, ಪ್ರತಿಯೊಬ್ಬ ಅಭಿಮಾನಿಯೂ ವಿರಾಟ್​​ ತೋರಿದ ಅದ್ಭುತ ನಿರ್ವಣೆಯನ್ನು ವ್ಯಾಖ್ಯಾನ ಮಾಡುತ್ತಿದ್ದಾರೆ. ಇದೀಗ ಐಎಎಸ್​ ಅಧಿಕಾರಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಟ್ವೀಟ್​ನಲ್ಲಿ ಕೊಹ್ಲಿಯಿಂದ ಕಲಿಯಬೇಕಾದ 5 ಗುಣಗಳ ಪಟ್ಟಿ ಮಾಡಿದ್ದಾರೆ.

    ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವೀಟ್ ಮಾಡುತ್ತಾ, ಕೊಹ್ಲಿಯಿಂದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಯ ಇನ್ನಿಂಗ್ಸ್​ ಮೂಲಕ

    • ಜೀವನದಲ್ಲಿ ಕೆಟ್ಟ ಕ್ಷಣವೆಂಬುವುದು ಕೇವಲ ಕ್ಷಣಿಕ.
    • ಪ್ರತಿಯೊಬ್ಬರೂ ಟೀಕೆಗಳಿಗೆ ತಮ್ಮ ಕಾರ್ಯದ ಮೂಲಕ ಪ್ರತಿಕ್ರಿಯಿಸಬಹುದು.
    • ಕೊನೆಯ ಕ್ಷಣದವರೆಗೂ ಭಾವನೆಗಳನ್ನು ನಿಯಂತ್ರಿಸಬೇಕು.
    • ಸಾರ್ವಜನಿಕ ಟೀಕೆ, ಹೊಗಳಿಕೆ ಕ್ಷೀಣವಾಗಿರುವಂತಹದ್ದು.
    • ಆತ್ಮಸ್ಥೈರ್ಯ ಇದ್ದಾಗ, ಕಠಿಣ ಸಂದರ್ಭಗಳು ಸುಲಭವೆಂದು ಅನ್ನಿಸುತ್ತದೆ.

    ಈ 5 ವಿಷಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾಗಿದೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts