ವಿಶ್ವಕಪ್​ ಫೈನಲ್ ಪಂದ್ಯಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ: ಕಪಿಲ್ ದೇವ್

Kapil Dev
Published on

ಅಹಮದಾಬಾದ್​: ಏಕದಿನ ವಿಶ್ವಕಪ್ ಕ್ರಿಕೆಟ್​ ಪಂದ್ಯಾವಳಿಯ ಅಂತಿಮ ಸೆಣಸಾಟದಲ್ಲಿ ಭಾರತ ಸೋಲುವ ಮೂಲಕ ವಿಶ್ವಕಪ್​ ಕೈತಪ್ಪಿ ಹೋಗಿದೆ. ಇದರಿಂದಾಗಿ ವಿಶ್ವಕಪ್​ ಆರನೇ ಬಾರಿಗೆ ಆಸ್ಟ್ರೇಲಿಯಾದ ಪಾಲಾಗಿದೆ.

ಇದರ ಮಧ್ಯೆ ಕ್ರಿಕೆಟ್​ ವಲಯದಿಂದ ಅಪಸ್ವರವೊಂದು ಕೇಳಿ ಬಂದಿದೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ, ಹಿಂದೊಮ್ಮೆ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಪಿಲ್​ ದೇವ್​ ತಮ್ಮನ್ನು ಈ ಅಂತಿಮ ಪಂದ್ಯಕ್ಕೆ ಆಹ್ವಾನಿಸಿರಲಿಲ್ಲ ಎಂದು ಹೇಳಿದ್ದಾರೆ.

1983ರ ಇಡೀ ತಂಡ ಅಲ್ಲಿರಬೇಕು ಎಂದು ಬಯಸಿದ್ದೆ. ಆದರೆ ಅವರು ನನಗೆ ಆಹ್ವಾನ ನೀಡಿರಲಿಲ್ಲ. ಇದು ಅತಿ ದೊಡ್ಡ ಕಾರ್ಯಕ್ರಮ, ಆಯೋಜಕರು ಅದರ ಆಯೋಜನೆಯಲ್ಲಿ ಬ್ಯುಸಿ ಇರುವುದರಿಂದ ಬಹುಶಃ ಮರೆತುಹೋಗುವ ಸಾಧ್ಯತೆ ಇರುತ್ತದೆ ಎಂದು ನನಗೆ ಗೊತ್ತು ಎಂಬುದಾಗಿಯೂ ಕಪಿಲ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net