More

    ಫೈನಲ್‌ಗೇರಿದ ಆರ್‌ಸಿಬಿ ಮಹಿಳೆಯರು: ಪುರುಷರ ಸಾಧನೆ ಸಮ!

    ನವದೆಹಲಿ: ಎಲ್ಲಿಸ್ ಪೆರ‌್ರಿ (66 ರನ್, 50 ಎಸೆತ, 8 ಬೌಂಡರಿ, 1 ಸಿಕ್ಸರ್ ಹಾಗೂ 29ಕ್ಕೆ 1 ವಿಕೆಟ್) ಆಲ್ರೌಂಡ್ ಆಟದ ಬಲದಿಂದ ಆರ್‌ಸಿಬಿ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲುೃಪಿಎಲ್) ಎರಡನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು 5 ರನ್‌ಗಳಿಂದ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಸ್ಮತಿ ಮಂದನಾ ಪಡೆ ಮೊದಲ ಬಾರಿಗೆ ೈನಲ್ ಪ್ರವೇಶಿಸಿದೆ. ಭಾನುವಾರ ನಡೆಯಲಿರುವ ೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಪ್ರಶಸ್ತಿಗಾಗಿ ಸೆಣಸಲಿದೆ. ಇದರಲ್ಲಿ ಯಾರೇ ಗೆದ್ದರೂ ನೂತನ ಚಾಂಪಿಯನ್ ಎನಿಸಲಿದ್ದಾರೆ.

    ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೆಮಿೈನಲ್ ಮಾದರಿಯ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಆರ್‌ಸಿಬಿ, ಅಗ್ರ ಬ್ಯಾಟಿಂಗ್ ವೈಲ್ಯದ ನಡುವೆಯೂ, ಎಲ್ಲಿಸ್ ಪೆರ‌್ರಿ-ಜಾರ್ಜಿಯಾ ವಾರೆಹ್ಯಾ (18*) ಜತೆಯಾಟದ ನೆರವಿನಿಂದ 6 ವಿಕೆಟ್‌ಗೆ 135 ರನ್ ಪೇರಿಸಿತು. ಪ್ರತಿಯಾಗಿ ನಾಯಕಿ ಹರ್ಮಾನ್‌ಪ್ರೀತ್ ಕೌರ್ (33 ರನ್, 30 ಎಸೆತ, 4 ಬೌಂಡರಿ) ಪ್ರತಿರೋಧದ ಹೊರತಾಗಿಯೂ ಮುಂಬೈ ಇಂಡಿಯನ್ಸ್ 6 ವಿಕೆಟ್‌ಗೆ 130 ರನ್‌ಗಳಿಸಲಷ್ಟೇ ಶಕ್ತವಾಯಿತು. ಅಂತಿಮ ಓವರ್‌ನಲ್ಲಿ 12 ರನ್ ಅಗತ್ಯವಿದ್ದಾಗ ಆಶಾ ಶೋಭನಾ (1,1, 2,ವಿಕೆಟ್,1, 1) 6 ರನ್ ಮಾತ್ರ ನೀಡಿ ಗೆಲುವಿನ ರೂವಾರಿಯಾದರು.

    ಆರ್‌ಸಿಬಿ: 6 ವಿಕೆಟ್‌ಗೆ 135 (ಸ್ಮತಿ ಮಂದನಾ 10, ಸೋಫಿ ಡಿವೈನ್ 10, ಎಲ್ಲಿಸ್ ಪೆರ‌್ರಿ 66, ದಿಶಾ 0, ರಿಚಾ ೋಷ್ 14, ಸೋಫಿ ಮೂಲಿನೆಕ್ಸ್ 11, ಜಾರ್ಜಿಯ ವಾರೆಹ್ಯಾಂ 18*, ಶ್ರೇಯಾಂಕಾ ಪಾಟೀಲ್ 3*, ಹ್ಯಾಲಿ ಮ್ಯಾಥ್ಯೂಸ್ 18ಕ್ಕೆ 2, ನ್ಯಾಟ್ ಸೀವರ್ ಬ್ರಂಟ್ 18ಕ್ಕೆ 2, ಸೈಕಾ ಇಶಾಕ್ 27ಕ್ಕೆ 2). ಮುಂಬೈ ಇಂಡಿಯನ್ಸ್: 6 ವಿಕೆಟ್‌ಗೆ 130 (ಯಸ್ತಿಕಾ ಭಾಟಿಯಾ 19, ಹ್ಯಾಲಿ ಮ್ಯಾಥ್ಯೂಸ್ 15, ಸೀವರ್ ಬ್ರಂಟ್ 23, ಹರ್ಮಾನ್‌ಪ್ರೀತ್ 33, ಅಮೇಲಿಯಾ ಕೆರ್ 27*, ಪೂಜಾ 4, ಎಲ್ಲಿಸ್ ಪೆರ‌್ರಿ 29ಕ್ಕೆ 1, ಶ್ರೇಯಾಂಕಾ 16ಕ್ಕೆ 2, ವಾರೆಹ್ಯಾಂ 37ಕ್ಕೆ 1).

    ಪುರುಷರ ಸಾಧನೆ ಸಮ!
    ಆರ್‌ಸಿಬಿ ಪುರುಷರ ತಂಡ ಐಪಿಎಲ್‌ನಲ್ಲಿ 2009ರ 2ನೇ ಆವೃತ್ತಿಯಲ್ಲಿ ಮೊದಲ ಬಾರಿ ೈನಲ್‌ಗೇರಿತ್ತು. ಆರ್‌ಸಿಬಿ ಮಹಿಳಾ ತಂಡವೂ ಈಗ ಡಬ್ಲ್ಯುಪಿಎಲ್ 2ನೇ ಆವೃತ್ತಿಯಲ್ಲೇ ಮೊದಲ ಬಾರಿ ೈನಲ್‌ಗೇರಿರುವುದು ವಿಶೇಷವಾಗಿದೆ. ಚೊಚ್ಚಲ ಐಪಿಎಲ್‌ನಲ್ಲಿ ಆರ್‌ಸಿಬಿ ಪುರುಷರ ತಂಡ ಕೊನೆಯಿಂದ 2ನೇ ಸ್ಥಾನ ಪಡೆದಿದ್ದರೆ, ಮಹಿಳಾ ತಂಡವೂ ಚೊಚ್ಚಲ ಡಬ್ಲ್ಯುಪಿಎಲ್‌ನಲ್ಲಿ ಕೊನೆಯಿಂದ 2ನೇ ಸ್ಥಾನ ಪಡೆದಿತ್ತು ಎಂಬುದು ಕಾಕತಾಳೀಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts