More

    ನ್ಯಾಯಸಮ್ಮತ ಪಿಂಚಣಿಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ

    ಬೆಂಗಳೂರು: ನ್ಯಾಯಯುತ ಪಿಂಚಣಿ ನೀಡುವಂತೆ ಒತ್ತಾಯಿಸಿ ಬೆಂಗಳೂರು ಮಹಾನಗರ ಸಾರಿಗೆ ಮತ್ತು ಕನಾರ್ಟಕ ರಾಜ್ಯ ಸಾರಿಗೆ ಸಂಸ್ಥೆಯ ನಿವೃತ್ತ ನೌಕರರಿಂದ ಸೋಮವಾರ ಫ್ರೀಡಂ ಪಾರ್ಕ್ ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಮಸಾ ಮತ್ತು ಕರಾಸಾ ನಿವೃತ್ತ ನೌಕರರ ಸಂಘದ ಅಧ್ಯಕರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರವು 1995 ರಲ್ಲಿ ಜಾರಿಗೆ ತಂದ ( E.P.S-95) ಪಿಂಚಣಿ ಯೋಜನೆಗೆ ಸಾರಿಗೆ ಸಂಸ್ಥೆಯ ನಿವೃತ್ತ ನೌಕರರನ್ನು ಸೇರ್ಪಡೆಗೊಳಿಸಲಾಗಿದೆ. ಹಾಗಾಗಿ ನೌಕರರಿಂದ ಭವಿಷ್ಯ ನಿಧಿಗೆ ಹಣದ ವಂತಿಗೆಯನ್ನು ಸಲ್ಲಿಸಲಾಗಿರುತ್ತದೆ. ಆದರೆ ಸುಮಾರು 25 ರಿಂದ 35 ವರ್ಷಗಳ ಸೇವೆಯ ನಂತರ ನಿವೃತ್ತಿ ಹೊಂದಿರುವ ನೌಕರರಿಗೆ ತಿಂಗಳಿಗೆ ಕನಿಷ್ಟ 1000 ರೂಗಳಿಂದ ಗರಿಷ್ಟ 3000 ರೂಗಳ ಪಿಂಚಣಿ ಹಣವನ್ನು ಭವಿಷ್ಯ ನಿಧಿ ಪ್ರಾಧಿಕಾರ ನೀಡುತ್ತಿದೆ.

    2016 ರಲ್ಲಿ ಸರ್ವೋಚ್ಛ ನ್ಯಾಯಾಲಯವು ತೀರ್ಪನ್ನು ನೀಡಿ ನ್ಯಾಯಯುತ ಪಿಂಚಣಿ ನೀಡಲು ಭವಿಷ್ಯ ನಿಧಿ ಪ್ರಾಧಿಕಾರಕ್ಕೆ ಆದೇಶ ನೀಡಿರುತ್ತದೆ. ಈ ಆದೇಶದಅಡಿಯಲ್ಲಿ ದೇಶದಾದ್ಯಂತ ಹಲವಾರು ಸಂಸ್ಥೆಗಳ ನಿವೃತ್ತ ನೌಕರರಿಗೆ ಭವಿಷ್ಯ ನಿಧಿ ಪ್ರಾಧಿಕಾರವು ನ್ಯಾಯಯುತ ಪಿಂಚಣಿಯನ್ನು ನೀಡುತ್ತಿದೆ. ಆದರೆ ಸಾರಿಗೆ ಸಂಸ್ಥೆಯ ನೌಕರರಿಗೆ ಮಾತ್ರ ನ್ಯಾಯಯುತ ಪಿಂಚಣಿಯನ್ನು ನೀಡಲು ಇದುವರೆವಿಗೂ ಭವಿಷ್ಯನಿಧಿ ಪ್ರಾಧಿಕಾರವು ಮನಸ್ಸು ಮಾಡಿಲ್ಲ.

    ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಸಾರಿಗೆ ನಿವೃತ್ತ ನೌಕರರ ಸಂಘವು ಹಲವು ಬಾರಿ ಧರಣಿಯನ್ನು ನಡೆಸಿ ಈ ಬಗ್ಗೆ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರಿಗೆ ಎರಡು ಬಾರಿ ಮನವಿಯನ್ನು ಸಲ್ಲಿಸಿದ್ದರೂ ಸಹ ಯಾವುದೇ ಪ್ರತಿಕ್ರಿಯೆ ನೀಡದೆ ತಟಸ್ಥ ಧೋರಣಿಯನ್ನು ತಾಳಿದ್ದಾರೆ.

    ಇದರಿಂದ ನೊಂದಿರುವ ಸಾರಿಗೆ ಸಂಸ್ಥೆಯ ಸಾವಿರಾರು ನಿವೃತ್ತ ನೌಕರರು ಫೆಬ್ರವರಿ 22 ರ ಸೋಮವಾರದೊಂದು ಮೌರ್ಯವೃತ್ತದಿಂದ ಕಾಲ್ನಡಿಗೆಯಲ್ಲಿ ಫ್ರೀಡಂ ಪಾರ್ಕ್ ವರೆಗೆ ಜಾಥಾ ಹೊರಟು ಅಲ್ಲಿ ಸಂಜೆ 5 ಗಂಟೆಯವರೆಗೆ ಉಪವಾಸ ಸತ್ಯಾಗ್ರಹ ಮಾಡಲು ತೀರ್ಮಾನಿಸಲಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಬೆಮಸಾ ಮತ್ತು ಕರಾಸಾ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಶಂಕರ್ ಕುಮಾರ್ ಮತ್ತು ಕಾರ್ಯಾಧ್ಯಕ್ಷರಾದ ನಂಜುಂಡೇಗೌಡ ಅವರು ತಿಳಿಸಿದ್ದಾರೆ.

    ಸೆಕ್ಸ್​ಗೆ ಒತ್ತಾಯಿಸಿದ ಗಂಡನನ್ನು ವಿಷವಿಟ್ಟು ಕೊಂದ ಹೆಂಡತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts