More

    ಹೊಸಪೇಟೆಯಲ್ಲಿ 11 ವಿದ್ಯಾರ್ಥಿಗಳಿಗೆ ಕರೊನಾ ದೃಢ: ವಿವಿಧ ಹಾಸ್ಟೆಲ್ ಸಿಬ್ಬಂದಿ, ಸ್ಟೂಡೆಂಟ್ಸ್‌ಗೆ ಸ್ವ್ಯಾಬ್ ಟೆಸ್ಟ್

    ಹೊಸಪೇಟೆ: ನಗರದ ವಿವಿಧ ವಸತಿ ನಿಲಯಗಳ 11 ವಿದ್ಯಾರ್ಥಿಗಳಿಗೆ ಮಂಗಳವಾರ ಕರೊನಾ ದೃಢಪಟ್ಟಿದ್ದು, ಇವರ ಸಂಪರ್ಕದಲ್ಲಿದ್ದವರಿಗೆ ಭಯ ಆವರಿಸಿದೆ.

    ಕರೊನಾ ದೃಢಪಟ್ಟ ಎಲ್ಲರೂ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು. ನಗರದ ನಾನಾ ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಹಾಸ್ಟೆಲ್‌ಗೆ ತೆರಳಿ ವಿದ್ಯಾರ್ಥಿಗಳು, ಸಿಬ್ಬಂದಿ ಸ್ವ್ಯಾಬ್ ಟೆಸ್ಟ್ ಮಾಡಿದ್ದು, ಪ್ರಾಥಮಿಕ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

    ಸೋಂಕಿತರ ಸಂಪರ್ಕದಲ್ಲಿದ್ದ ಬಹುತೇಕ ವಿದ್ಯಾರ್ಥಿಗಳು ಊರುಗಳಿಗೆ ತೆರಳಿದ್ದಾರೆ. ಹಾಸ್ಟೆಲ್‌ನಲ್ಲಿ ಉಳಿದಿರುವವರನ್ನು ಪರಸ್ಪರ ಅಂತರ ಕಾಪಾಡಿಕೊಂಡು ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಹಾಸ್ಟೆಲ್‌ಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು, ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಲಾಗಿದೆ.

    ಪ್ರಯಾಣಿಕರಿಗೆ ನೆಗೆಟಿವ್ ವರದಿ ಕಡ್ಡಾಯ: ಮಹಾರಾಷ್ಟ್ರದಿಂದ ಬೆಂಗಳೂರಿಗೆ ತೆರಳಬೇಕಾದರೆ ಹೊಸಪೇಟೆ ಮಾರ್ಗವಾಗಿಯೇ ಗೂಡ್ಸ್ ವಾಹನಗಳು ಸೇರಿ ಬಸ್‌ಗಳು ಸಂಚರಿಸುತ್ತವೆ. ಹೊಸಪೇಟೆ ಎನ್‌ಇಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ನಿತ್ಯ ನಾಲ್ಕು ಬಸ್‌ಗಳು ಮಹಾರಾಷ್ಟ್ರ- ಹೊಸಪೇಟೆ, ಚಿತ್ರದುರ್ಗ, ದಾವಣಗೆರೆ, ಸೊಲ್ಲಾಪುರ ಮಾರ್ಗವಾಗಿ ಸಂಚರಿಸುತ್ತಿವೆ. ಈ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಕಡ್ಡಾಯವಾಗಿ ಕರೊನಾ ನೆಗೆಟಿವ್ ವರದಿ ಹೊಂದಿರಬೇಕು ಎಂದು ಸೂಚಿಸಲಾಗಿದೆ.

    ಕನ್ನಡ ವಿವಿ ನೌಕರಗೆ ಸೋಂಕು: ಕನ್ನಡ ವಿಶ್ವವಿದ್ಯಾಲಯದ ವಸತಿ ಗೃಹದಲ್ಲಿ ವಾಸವಿರುವ ನೌಕರ ಮತ್ತು ಆತನ ಪತ್ನಿಗೆ ಕರೊನಾ ದೃಢಪಟ್ಟಿದೆ. ಇತ್ತೀಚೆಗೆ ದಂಪತಿ ತಿರುಪತಿಗೆ ಹೋಗಿ ಬಂದಿದ್ದರು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts