More

    ಸ್ಥಳೀಯ ಸಂಸ್ಥೆಗಳಿಗೆ ನಾಳೆ ಮತದಾನ: ಸುಸೂತ್ರ ಚುನಾವಣೆಗೆ ವಿಜಯನಗರ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

    ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆ, ಮರಿಯಮ್ಮನಹಳ್ಳಿ ಪಪಂ, ಹಗರಿಬೊಮ್ಮನಹಳ್ಳಿ ಪುರಸಭೆ ಚುನಾವಣೆ, ವಿವಿಧ ಗ್ರಾಪಂಗಳ ಉಪ ಚುನಾವಣೆಗೆ ಡಿ.27 ರಂದು ಮತದಾನ ನಡೆಯಲಿದ್ದು, ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

    ಮತಗಟ್ಟೆಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 5ಗಂಟೆವರೆಗೆ ಮತದಾನ ನಡೆಯಲಿದೆ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ 114-ಡಣಾಪುರ ಗ್ರಾಪಂನ ಒಂದು, ಹಬೊಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಪಂ ಹಾಗೂ ಹರಪನಹಳ್ಳಿ ತಾಲೂಕಿನ ಅಡವಿಹಳ್ಳಿ ಗ್ರಾಪಂನ 2 ಸ್ಥಾನ ಮತ್ತು ಉಚ್ಚಂಗಿದುರ್ಗ ಗ್ರಾಪಂನ 1 ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.

    ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ 82,522 ಪುರುಷರು, 86,546 ಮಹಿಳೆಯರು ಹಾಗೂ 44 ಜನ ಇತರ ಸೇರಿದಂತೆ ಒಟ್ಟು 1,69,112 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಹಗರಿಬೊಮ್ಮನಹಳ್ಳಿ ಪುರಸಭೆಯ 23 ವಾರ್ಡ್‌ಗಳ ವ್ಯಾಪ್ತಿಯಲ್ಲಿ 14,972 ಪುರುಷರು, 15,909 ಮಹಿಳೆಯರು ಹಾಗೂ 4 ಜನ ಇತರ ಸೇರಿದಂತೆ ಒಟ್ಟು 30,885 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಮರಿಯಮ್ಮನಹಳ್ಳಿ ಪಪಂ ವ್ಯಾಪ್ತಿಯ 18 ವಾರ್ಡ್‌ಗಳ ವ್ಯಾಪ್ತಿಯಲ್ಲಿ 7070 ಪುರುಷರು, 7744 ಮಹಿಳೆಯರು, 3 ಇತರ ಸೇರಿದಂತೆ ಒಟ್ಟು 14,817 ಮತದಾರರು ಹಕ್ಕು ಚಲಾಯಿಸಲಿದ್ದಾರೆ.

    ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿ: ಹೊಸಪೇಟೆ ನಗರದ ಸಂಡೂರು ರಸ್ತೆಯಲ್ಲಿರುವ ಲಿಟಲ್ ಫ್ಲವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ಚುನಾವಣೆಗೆ ನಿಯೋಜಿಸಲ್ಪಟ್ಟ ಅಧಿಕಾರಿಗಳು, ಸಿಬ್ಬಂದಿ ಮತಗಟ್ಟೆಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಪಡೆದುಕೊಂಡು 49 ವಾಹನಗಳಲ್ಲಿ ಮತಗಟ್ಟೆಗಳಿಗೆ ತೆರಳಿದರು. ನಗರಸಭೆ ಹಾಗೂ ಮರಿಯಮ್ಮನಹಳ್ಳಿ ಪಪಂ ಮತದಾನಕ್ಕೆ ಒಟ್ಟು 189 ಮತಯಂತ್ರಗಳನ್ನು ಬಳಸಲಾಗುತ್ತಿದೆ. 38 ಮತಯಂತ್ರಗಳು ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ 31 ಅತಿ ಸೂಕ್ಷ್ಮ ಮತ್ತು 55 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ ಮತಗಟ್ಟೆಗಳಿಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ವಿಜಯನಗರ ಜಿಲ್ಲಾದ್ಯಂತ ಚುನಾವಣೆ ಕರ್ತವ್ಯಕ್ಕೆ ಡಿಎಸ್ಪಿ 2, ಸಿಪಿಐ 9, ಪಿಎಸ್‌ಐ 21, ಎಎಸ್‌ಐ 58, ಪಿಸಿ 562 ಸಿಬ್ಬಂದಿ ಹಾಗೂ 3 ಕೆಎಸ್‌ಆರ್‌ಪಿ, 2 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts