More

    ಕೆಲವು ಕಡೆ ನಮ್ಮ‌ ಬೆಂಬಲ ಸಿಗದೆ ಯಾವ ಪಕ್ಷವೂ ಕೂಡ ಆಡಳಿತ ನಡೆಸಲು ಸಾಧ್ಯವಿಲ್ಲ: ಮಾಜಿ ಸಿಎಂ ಎಚ್​ಡಿಕೆ

    ರಾಮನಗರ: 2023ರ ವಿಧಾನಸಭೆ ಚುನಾವಣೆಯ ಹೋರಾಟಕ್ಕೆ ಜನರು ಮಾನಸಿಕ ಶಕ್ತಿ‌ ತುಂಬಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಹೇಳಿದರು.

    ಬಿಡದಿಯ ಪುರಸಭೆ ಚುನಾವಣೆ ಫಲಿತಾಂಶ ಹಿನ್ನಲೆಯಲ್ಲಿ ಬಿಡದಿಯ ಕೇತುಗಾನಗಳ್ಳಿ ತೋಟದ ಮನೆಯಲ್ಲಿ ಮಾಧ್ಯಮದವರಿಗೆ ಹೇಳಿಕೆ ನೀಡಿದ ಎಚ್​ಡಿಕೆ, 18 ರಿಂ 20 ಸ್ಥಾನ ಗೆಲ್ಲುತ್ತೇವೆ ಅಂದುಕೊಂಡಿದ್ವಿ. ಆದರೆ, ಇದೀಗ 14 ಸ್ಥಾನಗಳನ್ನು ಗೆದ್ದಿದ್ದೇವೆ. ಬಾನಂದೂರು ವ್ಯಾಪ್ತಿಯ ಎರಡು ಸ್ಥಾನಗಳು‌ ನಮ್ಮಿಂದಲೇ ಹೋಗಿದೆ. ಬಿಡದಿಯ ಮತದಾರರು ದುಡುಮೆಗೆ ಮತದಾನ ಮಾಡಿದ್ದಾರೆ ಎಂದರು.

    ಬಿಡದಿಯಿಂದಲೇ ನನಗೆ ರಾಜಕೀಯ ಜನ್ಮ ಸಿಕ್ಕಿದ್ದು. ಅದು ಪುನರಾವರ್ತನೆಯಾಗಿದೆ. ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. 2023 ರ ಚುನಾವಣೆಯ ಹೋರಾಟಕ್ಕೆ ಮಾನಸಿಕ ಶಕ್ತಿ‌ ತುಂಬಿದ್ದಾರೆ‌ ಎಂದರು.

    ಕಾಂಗ್ರೆಸ್​ನವರು ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಜೆಡಿಎಸ್ ಪಕ್ಷವನ್ನು ಕೇತಿಗಾನಹಳ್ಳಿಯ ಹಳ್ಳಕ್ಕೆ ತೂಕುತ್ತೇವೆ ಅಂತಾ ಹೇಳ್ತಿದ್ರು. ಹಲವು ಕ್ಷೇತ್ರದಲ್ಲಿ ಜನರು ಉತ್ತರ ಕೊಟ್ಟಿದ್ದಾರೆ. ಕೆಲವು ಕಡೆ ನಮ್ಮ‌ ಪಕ್ಷದ ಬೆಂಬಲ ಸಿಗದೆ ಯಾವ ಪಕ್ಷ ಕೂಡ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದರು.

    ಆರ್ಥಿಕವಾಗಿ‌ ನಾವು ಯಾರಿಗೂ ಶಕ್ತಿ ತುಂಬಲು ಸಾಧ್ಯವಾಗಿಲ್ಲ. ಜನರೇ ಹೋರಾಟ ಮಾಡಿಕೊಂಡು ಚುನಾವಣೆ ಮಾಡಿದ್ದಾರೆ. ಮುಂದಿನ ಒಂದು ವರ್ಷ ಬಿಡುವು ತೆಗೆದುಕೊಳ್ಳದೇ ಜನರ ಬಳಿ‌ ಹೋಗಿ ಪಕ್ಷ ಸಂಘಟಿಸುತ್ತೇನೆಂದು ಎಚ್​ಡಿಕೆ ತಿಳಿಸಿದರು. (ದಿಗ್ವಿಜಯ ನ್ಯೂಸ್​)

    ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ: ಕಾಂಗ್ರೆಸ್​ಗೆ ಮುನ್ನೆಡೆ, ಬಿಜೆಪಿಗೆ ಎರಡನೇ ಸ್ಥಾನ

    ಸರ್ಕಾರದ ಹಿಡಿತದಿಂದ ದೇವಸ್ಥಾನಗಳು ಮುಕ್ತ: ಸಿಎಂ ಹೇಳಿಕೆಗೆ ಕಾಶೀ ಜಗದ್ಗುರುಗಳ ಸ್ವಾಗತ

    ಇಟಲಿಗೆ ಹಾರಿದ ರಾಹುಲ್‌ ಗಾಂಧಿ: ಪ್ಲೀಸ್‌… ಪ್ಲೀಸ್‌… ಜನರಲ್ಲಿ ಕೈಮುಗಿದು ಹೀಗೆ ಬೇಡಿಕೊಂಡ್ರು ಕಾಂಗ್ರೆಸ್‌ ವಕ್ತಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts