More

    ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ: ಕಾಂಗ್ರೆಸ್​ಗೆ ಮುನ್ನಡೆ, ಬಿಜೆಪಿಗೆ ಎರಡನೇ ಸ್ಥಾನ

    ಬೆಂಗಳೂರು: ಡಿಸೆಂಬರ್ 27ರಂದು 19 ಜಿಲ್ಲೆಗಳಲ್ಲಿ ನಡೆದ 58 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ವಿವಿಧ ನಗರ ಸಂಸ್ಥೆಗಳ 9 ವಾರ್ಡ್​ಗಳ ಉಪಚುನಾವಣೆ ಹಾಗೂ ಅವಧಿ ಮುಗಿದಿರುವ 59 ಗ್ರಾಮ ಪಂಚಾಯಿತಿಗಳ ಚುನಾವಣೆಯ ಫಲಿತಾಂಶ ಕೂಡ ಇಂದು ಹೊರಬೀಳಲಿದೆ.

    ತುಮಕೂರು ಜಿಲ್ಲೆಯ ಶಿರಾ, ಗದಗ-ಬೆಟಗೇರಿ, ಚಿಕ್ಕಮಗಳೂರು, ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ ಹಾಗೂ ವಿಜಯನರ ಜಿಲ್ಲೆಯ ಹೊಸಪೇಟೆ ನಗರಸಭೆಯ ಫಲಿತಾಂಶ ಪ್ರಕಟಗೊಳ್ಳಲಿದೆ. ಇದರೊಂದಿಗೆ 19 ಪುರಸಭೆ ಹಾಗೂ 34 ಪಟ್ಟಣ ಪಂಚಾಯಿತಿಗಳ ಭವಿಷ್ಯವು ಇಂದು ಹೊರಬೀಳಲಿದೆ. ಒಟ್ಟು 1185 ವಾರ್ಡ್‌ಗಳಲ್ಲಿ ಒಟ್ಟು 4ಸಾವಿರದ 961 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಕೆಲವೇ ಹೊತ್ತಿನಲ್ಲಿ ಹಣೆಬರಹ ನಿರ್ಧಾರವಾಗಲಿದೆ.

    ಸದ್ಯದ ಫಲಿತಾಂಶದ ಪ್ರಕಾರ ಕಾಂಗ್ರೆಸ್​ 344 ಸ್ಥಾನಗಳಲ್ಲಿ ಜಯ ಸಾಧಿಸಿದ್ದರೆ, ಆಡಳಿತಾರೂಢ ಬಿಜಜೆಪಿ 287 ಸ್ಥಾನಗಳಲ್ಲಿ ಗೆಲುವ ಸಾಧಿಸಿದೆ. ಉಳಿದಂತೆ ಜೆಡಿಎಸ್​ 41 ಹಾಗೂ ಇತರೆ 141 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

    ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ಈ ಕೆಳಗಿನ ದಿಗ್ವಿಜಯ ನ್ಯೂಸ್​ ಫೇಸ್​ಬುಕ್​ ನೇರ ಪ್ರಸಾರದಲ್ಲಿ ಕಾಣಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts