More

    ಇಂಗ್ಲೆಂಡ್ ಸರಣಿ ಮುಂದೂಡಿಕೆ ?

    ನವದೆಹಲಿ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಸೆಪ್ಟೆಂಬರ್‌ನಲ್ಲಿ ತವರಿನಲ್ಲಿ ನಿಗದಿಯಾಗಿರುವ ಭಾರತ ತಂಡದ ನಿಗದಿತ ಓವರ್‌ಗಳ ಕ್ರಿಕೆಟ್ ಸರಣಿ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ. ಕೋವಿಡ್-19 ಮಹಾಮಾರಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಸರಣಿ ಮುಂದೂಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಲಿ (ಬಿಸಿಸಿಐ) ಚಿಂತಿಸಿದೆ ಎಂದು ತಿಳಿದು ಬಂದಿದೆ. ಜತೆಗೆ ಇದೇ ವೇಳೆ ಮುಂದಿನ ತಿಂಗಳು ಭಾರತಕ್ಕೆ ಬರಬೇಕಿರುವ ನ್ಯೂಜಿಲೆಂಡ್ ಎ ತಂಡದ ಪ್ರವಾಸವೂ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ. ಈ ಕುರಿತು ಬಿಸಿಸಿಐ ಶೀಘ್ರವೇ ಅಧಿಕೃತ ಆದೇಶ ಪ್ರಕಟಿಸಲಿದೆ. ‘ಸೆಪ್ಟೆಂಬರ್ ಅಂತ್ಯದ ವೇಳೆಗೆ ಇಂಗ್ಲೆಂಡ್ ತಂಡ ಭಾರತದ ಎದುರು ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳನ್ನಾಡಬೇಕಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳಲು ಸೂಕ್ತವಲ್ಲ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಕೋಚ್ ಗ್ಯಾರಿ ಕರ್ಸ್ಟನ್‌ಗಾಗಿ ಧೋನಿ ರದ್ದುಗೊಳಿಸಿದ ಕಾರ್ಯಕ್ರಮ ಯಾವುದು ?

    ಭಾರತ ತಂಡ ಫ್ಯೂಚರ್ ಟೂರ್ಸ್‌ ಆಂಡ್ ಪ್ರೋಗ್ರಾಂ (ಎಫ್ ಟಿಪಿ) ಕ್ಯಾಲೆಂಡರ್ ಕುರಿತು ಶುಕ್ರವಾರ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿದೆ. ‘ಎಫ್ ಟಿಪಿ ಬಗ್ಗೆ ಚರ್ಚೆ ನಡೆಸಿದ ಬಳಿಕವಷ್ಟೇ ಸರಣಿ ಮುಂದೂಡಿಕೆ ಕುರಿತು ಅಧಿಕೃತ ಆದೇಶ ಹೊರಬೀಳಲಿದೆ. ಆಗಸ್ಟ್ ತಿಂಗಳಲ್ಲಿ ನಿಗದಿಯಾಗಿರುವ ನ್ಯೂಜಿಲೆಂಡ್ ಎ ತಂಡದ ಭಾರತ ಪ್ರವಾಸ ಕೂಡ ಈ ವೇಳೆ ಚರ್ಚೆಗೆ ಬರಲಿದೆ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ. ಬ್ರಿಟಿಷ್ ಮಾಧ್ಯಮಗಳು ಪ್ರಕಟಿಸಿರುವಂತೆ ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಸರಣಿ ನಡೆಯಲಿದೆ.
    ಸದ್ಯ ಭಾರತದಲ್ಲಿ 9 ಲಕ್ಷಕ್ಕೂ ಅಧಿಕ ಕರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈಗಾಗಲೇ 25 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸೆಪ್ಟೆಂಬರ್ ವೇಳೆಗೆ ಪರಿಸ್ಥಿತಿ ತಿಳಿಯಾದರಷ್ಟೇ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ. ‘ಒಂದು ವೇಳೆ ಪರಿಸ್ಥಿತಿ ಸುಧಾರಿಸಿದರೆ, ಆಗಸ್ಟ್ ತಿಂಗಳಲ್ಲಿ ತರಬೇತಿ ಶಿಬಿರ ಆಯೋಜಿಸಲಾಗುವುದು, ಇದರರ್ಥ ಅಲ್ಲಿವರೆಗೂ ಯಾವುದೇ ಟೂರ್ನಿಗಳು ನಡೆಯುವ ಸಾಧ್ಯತೆಗಳಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಇದನ್ನೂ ಓದಿ: VIDEO | ಮಳೆಯಲ್ಲಿ ನೆನೆದು ಬಾಲ್ಯ ನೆನಪಿಸಿಕೊಂಡ ಸಚಿನ್​ ತೆಂಡುಲ್ಕರ್​

    ದುಬೈನಲ್ಲಿ ತರಬೇತಿ ಶಿಬಿರ?
    ಅನಿರ್ದಿಷ್ಟಾವಧಿ ವರೆಗೆ ಮುಂದೂಡಿಕೆಯಾಗಿರುವ 13ನೇ ಐಪಿಎಲ್ ಆಯೋಜನೆಗೆ ಸರ್ವಪ್ರಯತ್ನದಲ್ಲಿರುವ ಬಿಸಿಸಿಐ, ಒಂದು ವೇಳೆ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಮುಂದೂಡಿಕೆಯಾದರೆ, ಈ ವೇಳೆ ಐಪಿಎಲ್ ಆಯೋಜಿಸಬಹುದು. ಇದೇ ವೇಳೆ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ನಿಗದಿಯಾಗಿರುವ ಭಾರತ ತಂಡಕ್ಕೆ ತರಬೇತಿ ಶಿಬಿರವನ್ನು ದುಬೈನಲ್ಲಿ ಆಯೋಜಿಸಲು ಬಿಸಿಸಿಐ ಚಿಂತಿಸಿದೆ. ಇದಕ್ಕೂ ಮೊದಲು ಮುಂಬೈನ ಮೂರು ಸ್ಟೇಡಿಯಂಗಳಲ್ಲಿ ಐಪಿಎಲ್ ಆಯೋಜಿಸುವ ಗುರಿ ಹೊಂದಿತ್ತಾದರೂ ಸದ್ಯದ ಪರಿಸ್ಥಿತಿ ಅದಕ್ಕೆ ಪೂರಕವಾಗಿಲ್ಲ. ಒಂದು ಸರಣಿಗೂ ಮುಂಚೆ ಕನಿಷ್ಠ 6 ವಾರಗಳ ಕಾಲ ತರಬೇತಿ ಶಿಬಿರ ಆಯೋಜಿಸಲು ಬಿಸಿಸಿಐ ಯೋಜಿಸಿದೆ. ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿ ಬಳಿಕ ಭಾರತ ತಂಡ ಯಾವುದೇ ಪಂದ್ಯವಾಡಿಲ್ಲ.

    ಸಂಕಷ್ಟದಲ್ಲಿರುವವರಿಗೆ ನೆರವಾಗಲು ತಾವು ಬಿಡಿಸಿದ ಪೇಂಟಿಂಗ್‌ಗಳನ್ನೇ ಹರಾಜಿಗಿಟ್ಟ ಶೂಟರ್ ಅಂಜುಂ ಮೌದ್ಗಿಲ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts