More

    ಕೋಚ್ ಗ್ಯಾರಿ ಕರ್ಸ್ಟನ್‌ಗಾಗಿ ಧೋನಿ ರದ್ದುಗೊಳಿಸಿದ ಕಾರ್ಯಕ್ರಮ ಯಾವುದು ?

    ಬೆಂಗಳೂರು: ಮಾಜಿ ನಾಯಕ ಎಂಎಸ್ ಧೋನಿ ಹಾಗೂ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಜೋಡಿ ಭಾರತೀಯ ಕ್ರಿಕೆಟ್‌ನಲ್ಲಿ ಮೋಡಿಯನ್ನೇ ಮಾಡಿತ್ತು. ಇವರಿಬ್ಬರಿಗೂ ಪರಸ್ಪರ ಉತ್ತಮ ಹೊಂದಾಣಿಕೆ ಇದ್ದ ಲವಾಗಿ ಭಾರತ 2011ರ ಏಕದಿನ ವಿಶ್ವಕಪ್ ಜಯಿಸಿದ್ದ ವಿಷಯ ಎಲ್ಲರಿಗೂ ಗೊತ್ತೇ ಇದೆ. ಗ್ಯಾರಿ ಮಾತಿಗೆ ಧೋನಿ ಅಷ್ಟೇ ಬೆಲೆ ಕೊಡುತ್ತಿದ್ದರು. ಧೋನಿ ನಾಯಕತ್ವದ ಭಾರತ ತಂಡಕ್ಕೆ ಕೋಚ್ ಆಗಿದ್ದೆ ನನ್ನ ಅದೃಷ್ಟ ಎಂದು ಗ್ಯಾರಿಯೂ ಹೇಳಿಕೊಂಡಿದ್ದಾರೆ. 2011ರ ಏಕದಿನ ವಿಶ್ವಕಪ್‌ಗೂ ಮುನ್ನ ಗ್ಯಾರಿ ಕರ್ಸ್ಟನ್‌ಗಾಗಿ ಧೋನಿ ಒಂದು ಪ್ರಮುಖ ಕಾರ್ಯಕ್ರಮವನ್ನೇ ರದ್ದುಗೊಳಿಸಿದ್ದರಂತೆ.

    ಇದನ್ನೂ ಓದಿ: VIDEO | ಮಳೆಯಲ್ಲಿ ನೆನೆದು ಬಾಲ್ಯ ನೆನಪಿಸಿಕೊಂಡ ಸಚಿನ್​ ತೆಂಡುಲ್ಕರ್​

    2011ರ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಟೀಮ್ ಇಂಡಿಯಾ ಆಟಗಾರರು ಬೆಂಗಳೂರಿನಲ್ಲಿರುವ ವಿಮಾನ ಶಾಲೆಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಭಾರತ ತಂಡದ ಆಟಗಾರರು, ಸಹಾಯಕ ಸಿಬ್ಬಂದಿಗೆ ಈ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಭದ್ರತಾ ದೃಷ್ಟಿಯಿಂದ ಸಹಾಯಕ ಸಿಬ್ಬಂದಿ ಬಳಗದಲ್ಲಿದ್ದ ದಕ್ಷಿಣ ಆಫ್ರಿಕಾದ ಮೂವರಿಗೆ ಈ ಅವಕಾಶ ನಿರಾಕರಿಸಲಾಗಿತ್ತು. ಗ್ಯಾರಿ ಕರ್ಸ್ಟನ್, ಪ್ಯಾಡಿ ಅಪ್ಟನ್, ಎರಿಕ್ ಸಿಮ್ಮನ್ಸ್‌ಗೆ ಅನುಮತಿ ನೀಡಿರಲಿಲ್ಲ. ಇದನ್ನು ತಿಳಿದ ಧೋನಿ, ಭೇಟಿ ನೀಡುವ ಕಾರ್ಯಕ್ರಮವನ್ನೇ ರದ್ದುಗೊಳಿಸಿದರಂತೆ. ‘ಅವರೂ ಕೂಡ ನಮ್ಮವರೇ, ಅವರನ್ನು ಒಳಗಡೆ ಬಿಡಲಿಲ್ಲ ಅಂದರೆ, ನಾವುಗಳು ಕೂಡ ಹೋಗುವುದಿಲ್ಲ’ ಎಂದರಂತೆ. ನನ್ನ ಜೀವನದಲ್ಲಿ ಎಂದಿಂಗೂ ಮರೆಯದ ಪ್ರಸಂಗ ಅದಾಗಿತ್ತು ಎಂದು ಕರ್ಸ್ಟನ್ ಸ್ಮರಿಸಿದ್ದಾರೆ.

    ಇದನ್ನೂ ಓದಿ: ಸಂಕಷ್ಟದಲ್ಲಿರುವವರಿಗೆ ನೆರವಾಗಲು ತಾವು ಬಿಡಿಸಿದ ಪೇಂಟಿಂಗ್‌ಗಳನ್ನೇ ಹರಾಜಿಗಿಟ್ಟ ಶೂಟರ್ ಅಂಜುಂ ಮೌದ್ಗಿಲ್..!

    2008 ರಿಂದ 2011ರವರೆಗೆ ಭಾರತ ತಂಡಕ್ಕೆ ಗ್ಯಾರಿ ಕೋಚ್ ಆಗಿದ್ದರು. ಗ್ಯಾರಿ ಮಾರ್ಗದರ್ಶನದಲ್ಲಿ ಭಾರತ 2010ರ ಏಷ್ಯಾಕಪ್, 2011ರ ಏಕದಿನ ವಿಶ್ವಕಪ್ ಟೂರ್ನಿ ಜಯಿಸಿತ್ತು. ವಿಶ್ವಕಪ್ ಜತೆಗೆ ಗ್ಯಾರಿ ಒಪ್ಪಂದ ಕೂಡ ಮುಕ್ತಾಯಗೊಂಡಿತ್ತು.

    ಟೆನಿಸ್​ ಸ್ಟಾರ್ಸ್​ ವಾವ್ರಿಂಕಾ-ಮುಗುರುಜಾ ಸೀಕ್ರೆಟ್​ ಲವ್​ ಪತ್ತೆ ಹಚ್ಚಿದ ಅಭಿಮಾನಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts