More

    ನೈಸರ್ಗಿಕವಾಗಿ ತುಟಿ ಬಣ್ಣ ಹೆಚ್ಚಿಸಲು ಈ ತರಕಾರಿ ಬಳಸಿ! ಆಮೇಲೆ ನೋಡಿ ಚಮತ್ಕಾರ…

    ಬೆಂಗಳೂರು: ಅನೇಕರಿಗೆ ಮುಖದ ಸೌಂದರ್ಯ ಕಾಪಾಡಿಕೊಳ್ಳುವುದು ದಿನನಿತ್ಯದ ಹೋರಾಟ ಎಂದೇ ಹೇಳಬಹುದು. ಮುಖದ ತ್ವಚೆ, ಕಾಂತಿ ಹೀಗೆ ಹಲವು ವಿಷಯಗಳ ಬಗ್ಗೆ ಹೆಚ್ಚು ಗಮನಹರಿಸುವ ಜನರು, ನೋಡಲು ಸುಂದರವಾಗಿ ಕಾಣಬೇಕು ಎಂದು ಬಯಸಿ, ಮಾರುಕಟ್ಟೆಗಳಲ್ಲಿ ಸಿಗುವ ಹಲವಾರು ಸೌಂದರ್ಯ ವರ್ಧಕಗಳನ್ನು ಬಳಸಿ, ಮುಖದ ಅಂದವನ್ನು ಹದಗೆಡಿಸಿಕೊಳ್ಳುತ್ತಾರೆ.

    ಇದನ್ನೂ ಓದಿ: IPL 2024: ವೇಗದ ಎಸೆತಗಳಿಂದ ಬ್ಯಾಟರ್​ಗಳನ್ನು ಕಂಗೆಡಿಸಿದ ಮಯಾಂಕ್​ ಯಾದವ್​ಗೆ ಈಗ ಕಾಡುತ್ತಿದೆ ಗಾಯ!

    ಮುಖದ ಅಂದವನ್ನು ಹೆಚ್ಚಿಸುವುದು ಒಂದು ಕೂದಲು ಮತ್ತು ತುಟಿ. ಲಿಪ್​ಸ್ಟಿಕ್ ರಹಿತ ತುಟಿಯ ಬಣ್ಣ ಹಲವರನ್ನು ಸೆಳೆಯುತ್ತದೆ. ಕೆಲವರಿಗೆ ತುಟಿ ತೀರ ಕಪ್ಪಾಗಿರುತ್ತದೆ. ಇದರಿಂದ ತೀವ್ರ ಮುಜುಗರಕ್ಕೆ ಒಳಗಾಗುತ್ತಾರೆ. ಈ ಕಾರಣಗಳಿಂದ ತುಟಿಗೆ ಲಿಪ್ ಬಾಮ್, ಗ್ಲೋಯಿಂಗ್ ಜೆಲ್ ಹೀಗೆ ಯಾವುದಾದರೂ ಪ್ರಾಡೆಕ್ಟ್​ ಬಳಸಿ, ತುಟಿಯ ಬಣ್ಣವನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದರೆ, ನಿಮ್ಮ ಮನೆಯಲ್ಲಿಯೇ ಸಿಗುವ ಈ ತರಕಾರಿಯಿಂದ ನೈಸರ್ಗಿಕವಾಗಿ ತುಟಿಯ ಬಣ್ಣವನ್ನು ಹೆಚ್ಚಿಸಿಕೊಳ್ಳಬಹುದು.

    ನಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುವ ಬಿಟ್ರೂಟ್​ ಹಲವು ರೋಗಗಳಿಗೆ ಉತ್ತಮ ಔಷಧವಾಗಿದೆ. ದೇಹದ ಹೊರಗೆ ಮತ್ತು ಒಳಗೆ ಎರಡಕ್ಕೂ ರಾಮಬಾಣ ಈ ತರಕಾರಿ. ನೋಡಲು ರಕ್ತ ಬಣ್ಣ ಹೊಂದಿರುವ ಬಿಟ್ರೂಟ್​ನಲ್ಲಿ ತುಟಿಯ ಬಣ್ಣ ಹೆಚ್ಚಿಸುವ ಅಂಶವು ಅಡಗಿದೆ. ಹೇಗೆ ಅಂತಿರಾ? ಈ ವಿಧಾನ ಅನುಸರಿಸಿ, ಆಮೇಲೆ ಚಮತ್ಕಾರ ನೋಡಿ.

    ಇದನ್ನೂ ಓದಿ: ಆಂಡ್ರಿಯಾ-ಅನಿರುದ್ಧ್ ಖಾಸಗಿ ಫೋಟೋ ಲೀಕ್​! ಕೊನೆಗೂ ಮೌನ ಮುರಿದ ಖ್ಯಾತ ಸಂಗೀತ ನಿರ್ದೇಶಕ

    ಬಿಟ್ರೂಟ್​ನ ತುಂಡು ತುಂಡಾಗಿ ಕತ್ತರಿಸಿ, ಫ್ರಿಡ್ಜ್​ನಲ್ಲಿಡಿ. ನಿಮ್ಮ ಬಿಡುವಿನ ಸಮಯದಲ್ಲಿ ತಣ್ಣಗಿರುವ ಬಿಟ್ರೂಟ್​ ತುಂಡಿನಿಂದ ತುಟಿಯ ಮೇಲೆ ಕೆಲ ನಿಮಿಷಗಳ ಸಮಯ ಉಜ್ಜಿ. 15-20 ನಿಮಿಷಗಳು ಬಿಟ್ಟು, ನಂತರ ಅದನ್ನು ತೊಳೆದುಕೊಳ್ಳಿ. ಈ ರೀತಿ ಮಾಡುವುದರಿಂದ ನೈಸರ್ಗಿಕವಾಗಿ ನಿಮ್ಮ ತುಟಿಯ ಬಣ್ಣ ಹೆಚ್ಚಾಗುವುದರ ಜತೆಗೆ ನೋಡಲು ಆಕರ್ಷಕವಾಗಿ ಕಾಣಿಸುತ್ತದೆ.

    ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

    ಕುಡಿದದ್ದು ಒಂದೇ ಒಂದು ಎಳನೀರು, ಕೊಟ್ಟಿದ್ದು ಮಾತ್ರ 50,000 ರೂ.! ಶಾಕಿಂಗ್ ವಿಡಿಯೋ ವೈರಲ್

    ಕೋವಿಡ್​ನಲ್ಲಿ ತಂದೆ ಕಳೆದುಕೊಂಡ ವೇದಾಂತ್​, ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts