More

    ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿ: ಪೋಲೆಂಡ್ ಎದುರು ಭರ್ಜರಿ ಜಯ ದಾಖಲಿಸಿದ ಭಾರತ ಕ್ವಾರ್ಟರ್ ಫೈನಲ್‌ಗೆ ಎಂಟ್ರಿ

    ಭುವನೇಶ್ವರ: ಗೋಲುಗಳ ಸುರಿಮಳೆಗೈದ ಹಾಲಿ ಚಾಂಪಿಯನ್ ಭಾರತ ತಂಡ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ 8-2 ಗೋಲುಗಳಿಂದ ಪೋಲೆಂಡ್ ತಂಡವನ್ನು ಮಣಿಸಿ ಎಂಟರಘಟ್ಟಕ್ಕೇರಿತು. ಶನಿವಾರ ನಡೆದ ಬಿ ಗುಂಪಿನ ಹಣಾಹಣಿಯಲ್ಲಿ ಭಾರತ ತಂಡ ಭರ್ಜರಿ ನಿರ್ವಹಣೆ ತೋರಿತು. ಎಂಟರಘಟ್ಟಕ್ಕೇರಲು ಭಾರತ ತಂಡ ಕನಿಷ್ಠ ಡ್ರಾ ಸಾಧಿಸಬೇಕಿತ್ತು. ಆರಂಭಿಕ ನಿಮಿಷಗಳಿಂದಲೇ ಪ್ರಭುತ್ವ ಸಾಧಿಸಿದ ಭಾರತ ತಂಡ ಯಾವುದೇ ಹಂತದಲ್ಲೂ ಪೋಲೆಂಡ್ ತಂಡ ಪುಟಿದೇಳದಂತೆ ನೋಡಿಕೊಂಡಿತು. ಮೊದಲ ಕ್ವಾರ್ಟರ್‌ನಲ್ಲಿ ತಂಡದ ಉಪನಾಯಕ ಸಂಜಯ್ ಗೋಲು ದಾಖಲಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು. ಎರಡನೇ ಕ್ವಾರ್ಟರ್‌ನಲ್ಲಿ ಸುದೀಪ್ ಮತ್ತೊಂದು ಫೀಲ್ಡ್ ಗೋಲು ದಾಖಲಿಸಿದ ಲವಾಗಿ ಭಾರತ ತಂಡ ಮೊದಲಾರ್ಧದಲ್ಲಿ 3-0 ಯಿಂದ ಮುನ್ನಡೆ ಸಾಧಿಸಿತು.

    ಮೂರನೇ ಹಾಗೂ ನಾಲ್ಕನೇ ಅವಧಿಯಲ್ಲೂ ಪ್ರಭುತ್ವ ಮುಂದುವರಿಸಿದ ಭಾರತ ತಂಡ ಗೆಲುವಿನ ಅಂತರ ಹಿಗ್ಗಿಸಿಕೊಂಡಿತು. ಟೂರ್ನಿಯ ಫೇವರಿಟ್ ಎನಿಸಿಕೊಂಡಿರುವ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಫ್ರಾನ್ಸ್ ತಂಡಕ್ಕೆ ಶರಣಾಗಿದ್ದರೆ, ಗುರುವಾರ ಕೆನಡ ಎದುರು ದಾಖಲೆಯ 13-1 ರಿಂದ ಗೆಲುವು ಕಂಡಿತ್ತು.

    ಭಾರತ ತಂಡದ ಪರ ಸಂಜಯ್ (4, 58ನೇ ನಿಮಿಷ),ಅರೈಜಿತ್ ಸಿಂಗ್ ಹಂಡಲ್ (8, 60ನೇ ನಿಮಿಷ), ಸುದೀಪ್ ಚಿರ್ಮಾಕೊ (24, 40ನೇ ನಿಮಿಷ), ಉತ್ತಮ್ ಸಿಂಗ್ (34ನೇ ನಿಮಿಷ), ಶ್ರದ್ಧಾನಂದ್ ತಿವಾರಿ (38ನೇ ನಿಮಿಷ) ಗೋಲು ಬಾರಿಸಿದರು. ನಾಲ್ಕನೇ ಕ್ವಾರ್ಟರ್‌ನಲ್ಲಿ ಎರಡು ಗೋಲು ದಾಖಲಿಸಿದ ಪೋಲೆಂಡ್ ತಂಡ ಸೋಲಿನ ಅಂತರ ತಗ್ಗಿಸಿಕೊಂಡಿತು.

    ಕ್ವಾರ್ಟರ್ ಫೈನಲ್‌ ಎದುರಾಳಿ: ಬೆಲ್ಜಿಯಂ
    ಯಾವಾಗ: ಡಿಸೆಂಬರ್ 1
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts