More

    ಹೈಕೋರ್ಟ್​ ಜಡ್ಜ್​​ಗಳನ್ನು ಹತ್ಯೆ ಮಾಡಿಸುವುದಾಗಿ ಪಾಕ್​ನಿಂದ ಬೆದರಿಕೆ ಕರೆ!

    ಬೆಂಗಳೂರು: ಕರ್ನಾಟಕ ಹೈಕೋರ್ಟ್ ಜಡ್ಜ್​ಗಳನ್ನು ಹತ್ಯೆ ಮಾಡಿಸುವುದಾಗಿ ಪಾಕಿಸ್ತಾನದಿಂದ ಬೆದರಿಕೆ ಕರೆ ಬಂದಿದ್ದು, ಈ ಸಂಬಂಧ ಹೈಕೋರ್ಟ್​ ಪಿಆರ್​​ಒ ಅವರು ಸೈಬರ್​ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.

    ಹೈಕೋರ್ಟ್​ ಪಿಆರ್​​ಒ ಕೆ. ಮುರಳೀಧರ್ ಅವರಿಗೆ ಹೈಕೋರ್ಟ್​ನಿಂದ ನೀಡಲಾಗಿರುವ ಮೊಬೈಲ್​ಫೋನ್​ ನಂಬರ್​ಗೆ ಜುಲೈ 12ರ ರಾತ್ರಿ ಅನಾಮಧೇಯ ನಂಬರ್​ನಿಂದ ವಾಟ್ಸ್​ಆ್ಯಪ್ ಸಂದೇಶ ಬಂದಿದ್ದು, ಅದರಲ್ಲಿ ಎಬಿಎಲ್​ (ಅಲೈಡ್​ ಬ್ಯಾಂಕ್ ಲಿಮಿಟೆಡ್​ ಪಾಕಿಸ್ತಾನ್​) ಖಾತೆ ಸಂಖ್ಯೆ ನಮೂದಿಸಿ, ಆ ಖಾತೆಗೆ 50 ಲಕ್ಷ ರೂ. ಹಣ ಹಾಕುವಂತೆ ಸೂಚನೆ ನೀಡಲಾಗಿತ್ತು.

    ಇದನ್ನೂ ಓದಿನಾಯಿ ಕಾಣೆಯಾಗಿದೆ, ಸೆಕ್ಯುರಿಟಿಯವರನ್ನು ಅಮಾನತುಗೊಳಿಸಿ: ಪೊಲೀಸ್​ ಅಧಿಕಾರಿಗೆ ಹೈಕೋರ್ಟ್​ ಜಡ್ಜ್ ಪತ್ರ

    ಅಲ್ಲದೆ ಹೈಕೋರ್ಟ್​ನ ಕೆಲವು ಜಡ್ಜ್​ಗಳ ಹೆಸರನ್ನು ನಮೂದಿಸಲಾಗಿದ್ದು, ಹಣ ಹಾಕದಿದ್ದರೆ ದುಬೈ ಸುಪಾರಿ ಹಂತಕರ ಮೂಲಕ ಅವರನ್ನು ಹತ್ಯೆ ಮಾಡಿಸುವುದಾಗಿ ಹಿಂದಿ, ಉರ್ದು, ಇಂಗ್ಲಿಷ್​ ಭಾಷೆಗಳಲ್ಲಿ ಸಂದೇಶ ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಪಿಆರ್​ಒ ಪೊಲೀಸರಿಗೆ ದೂರು ನೀಡಿ ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ.

    ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    30 ಕೋಟಿ ರೂಪಾಯಿಯ ವಾಚ್​ಗಳಿದ್ದರೂ ಈತನ ಟೈಮ್​ ಸರಿ ಇರಲಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts