More

    ನಾಯಿ ಕಾಣೆಯಾಗಿದೆ, ಸೆಕ್ಯುರಿಟಿಯವರನ್ನು ಅಮಾನತುಗೊಳಿಸಿ: ಪೊಲೀಸ್​ ಅಧಿಕಾರಿಗೆ ಹೈಕೋರ್ಟ್​ ಜಡ್ಜ್ ಪತ್ರ

    ನವದೆಹಲಿ: ಮನೆಯಲ್ಲಿನ ನಾಯಿ ಕಾಣೆಯಾಗಲು ಸೆಕ್ಯುರಿಟಿಯವರೇ ಕಾರಣ, ಅವರನ್ನು ಅಮಾನತುಗೊಳಿಸಿ ಎಂದು ಹೈಕೋರ್ಟ್​ ನ್ಯಾಯಾಧೀಶರೊಬ್ಬರು ಪೊಲೀಸ್ ಕಮಿಷನರ್​ಗೆ ಪತ್ರ ಬರೆದಿದ್ದಾರೆ. ನವದೆಹಲಿಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

    ದೆಹಲಿ ಹೈಕೋರ್ಟ್​ನಲ್ಲಿ ನ್ಯಾಯಾಧೀಶರಾಗಿದ್ದ ಗೌರಂಗ್ ಕಾಂತ್​ ಅವರು ದೆಹಲಿ ಪೊಲೀಸ್ ಕಮಿಷನರ್ ಅವರಿಗೆ ಈ ಪತ್ರ ಬರೆದಿದ್ದಾರೆ. ಭದ್ರತಾ ವಿಭಾಗದ ಜಂಟಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಇವರು ತಮ್ಮ ಬಂಗಲೆಯ ಸೆಕ್ಯುರಿಟಿ ಅವರನ್ನು ಅಮಾನತುಗೊಳಿಸಿ ಎಂದು ಸೂಚಿಸಿದ್ದಾರೆ.

    ಇದನ್ನೂ ಓದಿ: ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಅವರಿಗೆ ಎಷ್ಟೇ ಹೇಳಿದ್ದರೂ ನನ್ನ ಅಧಿಕೃತ ನಿವಾಸದ ಬಾಗಿಲು ಸರಿಯಾಗಿ ಮುಚ್ಚುತ್ತಿರಲಿಲ್ಲ. ಪರಿಣಾಮವಾಗಿ ಬಂಗಲೆಯಲ್ಲಿದ್ದ ನನ್ನ ಸಾಕುನಾಯಿ ಕಾಣೆಯಾಗಿದೆ. ಬಂಗಲೆಯ ಭದ್ರತೆಗಾಗಿ ನಿಯೋಜಿಸಿದ್ದ ಸಿಬ್ಬಂದಿಯಲ್ಲಿ ಬದ್ಧತೆ ಕಾಣುತ್ತಿಲ್ಲ. ನನ್ನ ಸೂಚನೆಯಂತೆ ಕಾರ್ಯನಿರ್ವಹಿಸುವಲ್ಲಿಯೂ ಅವರು ಲೋಪವೆಸಗಿದ್ದಾರೆ. ಇಂಥ ನಿರ್ಲಕ್ಷ್ಯ ನನ್ನ ಕುಟುಂಬದ ಸ್ವಾತಂತ್ರ್ಯ ಹಾಗೂ ಸುರಕ್ಷತೆಗೂ ಕುತ್ತು ತರಬಹುದು ಎಂದು ಅವರು ಕಾರಣವನ್ನು ತಿಳಿಸಿದ್ದಾರೆ.

    ಮಾತ್ರವಲ್ಲದೆ, ಲೆಟರ್​ನಲ್ಲಿ ನಮೂದಿತ ದಿನದಿಂದ ಮೂರು ಕೆಲಸದ ದಿನಗಳ ಒಳಗೆ ಕ್ರಮಕೈಗೊಂಡ ಬಗ್ಗೆ ವರದಿ ನೀಡಬೇಕು ಎಂದೂ ಅವರು ಸೂಚಿಸಿದ್ದಾರೆ. ಗೌರಂಗ್ ಕಾಂತ್ ಶುಕ್ರವಾರವಷ್ಟೇ ಕೋಲ್ಕತ್ತ ಹೈಕೋರ್ಟ್ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. –ಏಜೆನ್ಸೀಸ್

    ಬೆಂಗಳೂರಲ್ಲಿ ಇದೇ ಭಾನುವಾರ ಕುಂದಾಪ್ರ ಕನ್ನಡ ಹಬ್ಬ: ಸಿಎಂ ಉಪಸ್ಥಿತಿ, ಸಂಭ್ರಮಕ್ಕೆ ಸ್ಟಾರ್ ಕಳೆ

    ಎಕ್ಸಾಂ ದಿನವೇ ವಿದ್ಯಾರ್ಥಿ ಸಾವು ಪ್ರಕರಣದ ಇನ್ನೊಂದು ಮುಖ: ಏಕೈಕ ಪುತ್ರನನ್ನು ಕಳೆದುಕೊಂಡ ತಾಯಿಯ ಪ್ರಶ್ನೆಗಳಿವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts