More

    ಭಗತ್‌ರನ್ನು ಹುತಾತ್ಮ ಎನ್ನಲು ಹಿಂದೇಟು

    ಸಂಡೂರು: ಭಗತ್‌ಸಿಂಗ್ 23ನೇ ವಯಸ್ಸಿನಲ್ಲಿಯೇ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ್ದಾರೆ. ಅದರೂ, ಸ್ವತಂತ್ರ ಸಿಕ್ಕಿ 75ವರ್ಷ ಕಳೆದರೂ ಭಗತ್‌ಸಿಂಗರನ್ನು ಹುತಾತ್ಮ ಎಂದು ಕರೆಯಲು ಸರ್ಕಾರಗಳು ಹಿಂದೇಟು ಹಾಕುತ್ತಿವೆ ಎಂದು ತಾಲೂಕು ಅಧ್ಯಕ್ಷ ಶರೀಫ್ ಹೇಳಿದರು.

    ಇದನ್ನೂ ಓದಿ: ಹುತಾತ್ಮ ಯೋಧನ ಮನೆಯ ಮಣ್ಣು ಸಂಗ್ರಹಿಸಿದ ಬಿಜೆಪಿ

    ಸಂಡೂರು ತಾಲೂಕು ತಾಳೂರು ಗ್ರಾಮದ ಡಿವೈಎಫ್‌ಐನ ನೇತೃತ್ವದಲ್ಲಿ ಭಗತ್‌ಸಿಂಗ್‌ರ 117ನೇಯ ಜನ್ಮ ದಿನಾಚರಣೆಯಲ್ಲಿ ಗುರುವಾರ ಮಾತನಾಡಿದರು.

    ಯಾವುದೇ ಉನ್ನತಮಟ್ಟದ ಮರಣೋತ್ತರ ಪ್ರಶಸ್ತಿಗಳನ್ನು ನೀಡದೆ ಭಗತ್‌ಸಿಂಗ್‌ರಗೆ ಅನ್ಯಾಯ ಮಾಡುತ್ತಿದ್ದಾರೆ. ಎಲ್ಲರಿಗೂ ಶಿಕ್ಷಣ, ಉದ್ಯೋಗ ಸಿಗಬೇಕು ಮತ್ತು ಅಸಮಾನತೆಯ ವಿರುದ್ಧ ಹೋರಾಡಬೇಕೆಂದು ಕರೆ ಕೊಟ್ಟಿದ್ದರು.

    ಗುಣಮಟ್ಟದ ಶಿಕ್ಷಣ ಇಲ್ಲ, ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ದೂರಿದರು. ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷಗಳು ಮೇಲ್ವರ್ಗದವರಿಗೆ ಸಾವಿರಾರು ಎಕರೆ ಜಮೀನನ್ನು ಬಿಟ್ಟು ಅದೇ ಜಮೀನ್ದಾರಿ ಪದ್ಧತಿ ಭೂಮಾಲಿಕ ಪದ್ಧತಿಯನ್ನು ಬಂಡವಾಳ ಶಾಹಿ ವ್ಯವಸ್ಥೆಯನ್ನು ಇನ್ನು ಬಲಗೊಳಿಸುವ ನಿಟ್ಟಿನಲ್ಲಿ ಜಾರಿ ಮಾಡತೊಡಗಿದರು ಎಂದರು.

    ಜಿಲ್ಲಾ ಉಪಾಧ್ಯಕ್ಷ ಎಸ್.ಕಾಲುಬಾ ಮಾತನಾಡಿ, ನೆರೆಹೊರೆಯವರು ಹಸಿವಿನಿಂದ ಇರುವಾಗ ತಾನು ಹೊಟ್ಟೆ ತುಂಬಾ ಉಣ್ಣಬಾರದು ಎಂದು ಹೇಳಿಕೊಟ್ಟ ಮಹಮದ್ ಪೈಗಂಬರ್, ಭಗತ್‌ಸಿಂಗ್, ಗಾಂಧೀಜಿ, ಅಂಬೇಡ್ಕರ್, ಬಸವಣ್ಣನವರು ನಮಗೆ ಸ್ಪೂರ್ತಿ, ಆದರ್ಶ ಆಗಬೇಕು ಎಂದರು.

    ದೇವಸ್ಥಾನದಲ್ಲಿ ಪ್ರಸಾದ ತಿಂದರು ಎಂದು ದಲಿತ ಮಕ್ಕಳನ್ನು ತಲೆಬೋಳಿಸಿ ಕಂಬಕ್ಕೆ ಕಟ್ಟಿಹಾಕಿ ಥಳಿಸಲಾಗುತ್ತಿದೆ. ಮುಸ್ಲಿಮರನ್ನು ಈ ದೇಶದ ಮೂಲ ನಿವಾಸಿಗಳಲ್ಲ ಎಂದು ಜರಿದು ಹಾಡುಹಗಲೇ ಕೊಲೆ ಮಾಡಲಾಗುತ್ತಿದೆ, ದೇಶದ ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ ಇಂತಹ ಅವ್ಯವಸ್ಥೆಯ ವಿರುದ್ಧ ಇಂದಿನ ಯುವಜನರು ಹೋರಾಡಬೇಕು ಎಂದರು.

    ಗ್ರಾಮ ಘಟಕ ಕಾರ್ಯದರ್ಶಿ ಹೊನ್ನೂರ, ಉಪಾಧ್ಯಕ್ಷರಾದ ಜಿಲಾನ್, ಕರಿಯಪ್ಪ, ತಿಪ್ಪೇಸ್ವಾಮಿ, ಮಂಜುನಾಥ, ಸುಭಾಷ್, ಹಸೇನ್, ದೇವರಾಜ್, ಕಾರ್ತಿಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts