More

    ಇದು ಮ್ಯಾಜಿಕ್ ಸ್ಯಾಂಡ್​.. ಬಿಸಿ ಮಾಡಿದ್ರೆ ಸಾಕು ಚಿನ್ನ ಆಗುತ್ತೆ!; 4 ಕೆ.ಜಿ. ಮರಳಿಗೆ 50 ಲಕ್ಷ ರೂ. ಕೊಟ್ಟೇ ಬಿಟ್ಟ ಜುವೆಲ್ಲರಿ ಮಾಲೀಕ…

    ಬೆಂಗಳೂರು: ‘ಈ ಕಡೆ ಆಲೂಗಡ್ಡೆ ಹಾಕಿದರೆ ಆ ಕಡೆಯಿಂದ ಚಿನ್ನ ಬರುತ್ತದೆ, ಅಂಥದ್ದೊಂದು ಮಷಿನ್​ ಇದೆ..’ ಎಂದು ಕೆಲವು ದಿನಗಳ ಹಿಂದೆ ಜನರು ಆಡಿಕೊಳ್ಳುತ್ತಿದ್ದ ವಿಚಾರ ಹಲವರಿಗೆ ಗೊತ್ತಿರುವಂಥದ್ದೇ. ಅದರ ಸತ್ಯಾಸತ್ಯತೆ ಒತ್ತಟ್ಟಿಗಿರಲಿ. ಇದೀಗ ಒಂದು ಮ್ಯಾಜಿಕ್ ಸ್ಯಾಂಡ್​ ಬಂದಿದೆಯಂತೆ, ಅದನ್ನು ಬಿಸಿ ಮಾಡಿದರೆ ಸಾಕು, ಅದು ಚಿನ್ನವಾಗುತ್ತದಂತೆ!

    ಹೌದು.. ಮ್ಯಾಜಿಕ್​ ಸ್ಯಾಂಡ್​ನಿಂದ ಚಿನ್ನ ಮಾಡಿಕೊಳ್ಳುವ ಆಸೆಯಿಂದ ಜುವೆಲ್ಲರಿ ಮಾಲೀಕರೊಬ್ಬರು ಲಕ್ಷಾಂತರ ರೂಪಾಯಿಗೆ 4 ಕೆ.ಜಿ. ಮರಳನ್ನು ಖರೀದಿಸಿದ್ದಾರೆ ಕೂಡ. ಒಂದು ವರ್ಷದಿಂದೀಚೆ ಪರಿಚಿತನಾಗಿದ್ದ ವ್ಯಕ್ತಿಯೊಬ್ಬ, ಬಿಸಿ ಮಾಡಿದ ತಕ್ಷಣ ಚಿನ್ನವಾಗಿ ಪರಿವರ್ತನೆ ಆಗಬಲ್ಲ ಮ್ಯಾಜಿಕ್ ಸ್ಯಾಂಡ್ ತನ್ನ ಬಳಿ ಇದೆ ಎಂದು ಹೇಳಿದ್ದಲ್ಲದೆ, ಅದನ್ನು ತಂದೂ ಕೊಟ್ಟಿದ್ದಾನೆ. ಆತ ತಂದು ಕೊಟ್ಟ 4 ಕೆ.ಜಿ. ಮರಳಿನ ಚೀಲಕ್ಕೆ ಜುವೆಲ್ಲರಿ ಮಾಲೀಕ 30 ಲಕ್ಷ ರೂ. ನಗದು ಹಾಗೂ 20 ಲಕ್ಷ ರೂ. ಮೌಲ್ಯದ ಚಿನ್ನವನ್ನೇ ಕೊಟ್ಟು ಬಿಟ್ಟಿದ್ದಾರೆ. ಆದರೆ ಲಕ್ಷಾಂತರ ರೂಪಾಯಿ ಕೊಟ್ಟು 4 ಕೆ.ಜಿ. ಮರಳನ್ನು ಖರೀದಿಸಿದ ನಂತರ ಜುವೆಲ್ಲರಿ ಮಾಲೀಕರಿಗೆ ತಾವು ಮೋಸ ಹೋಗಿದ್ದು ಗೊತ್ತಾಗಿದೆ. ಪುಣೆಯ ಈ ಜುವೆಲ್ಲರಿ ಮಾಲೀಕರು ತಾವು ಮೋಸ ಹೋಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

    ಇದನ್ನೂ ಓದಿ: ಗಂಡ ಅವನಲ್ಲ, ಅವಳು!: ಗಂಡಸೆಂದು ಬಿಂಬಿಸಿಕೊಂಡು ವಿಧವೆಯನ್ನು ಮದ್ವೆಯಾದ್ಲು; ಆಮೇಲೆ ನಡೆದಿದ್ದೇ ಬೇರೆ…

    ಒಂದು ವರ್ಷದ ಹಿಂದೆ ಪುಣೆಯ ಹದಸ್​ಪುರದಲ್ಲಿನ ತಮ್ಮ ಜುವೆಲ್ಲರಿ ಶಾಪ್​ಗೆ ವ್ಯಕ್ತಿಯೊಬ್ಬ ಬಂದಿದ್ದ. ಹಾಗೆ ಪರಿಚಿತನಾಗಿದ್ದ ಆ ವ್ಯಕ್ತಿ ತಮ್ಮ ವಿಶ್ವಾಸ ಗಳಿಸಿದ್ದ. ತಮ್ಮ ಕುಟುಂಬಕ್ಕೂ ಆತ್ಮೀಯನಾಗಿದ್ದ. ಪಶ್ಚಿಮ ಬಂಗಾಳದಲ್ಲಿ ಚಿನ್ನವಾಗಿ ಪರಿವರ್ತಿಸಬಲ್ಲ ಮ್ಯಾಜಿಕ್ ಸ್ಯಾಂಡ್ ಇದೆ ಎಂದು ಒಮ್ಮೆ ನನ್ನ ಬಳಿ ಹೇಳಿದ್ದ. ಆತನ ಮಾತನ್ನು ನಂಬಿ 4 ಕೆ.ಜಿ. ಮರಳು ಖರೀದಿಸಿದ್ದೆ. ಎಷ್ಟು ಕಾಯಿಸಿದರೂ ಅದು ಚಿನ್ನವಾಗಲೇ ಇಲ್ಲ ಎಂದು ತಾವು ಮೋಸ ಹೋದ ಬಗೆಯನ್ನು ಜುವೆಲ್ಲರಿ ಮಾಲೀಕರು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

    ಬಿಎಸ್​ಎನ್​ಎಲ್​ ಇಷ್ಟೊಂದು ಬರ್ಬಾದ್ ಆಗಿದ್ಯಾ? ಬರೀ 3 ಸಾವಿರ ರೂ. ಕೊಡಲು ಫಂಡ್ ಇಲ್ವಂತೆ!

    ಬ್ಯಾಂಕ್​ ಲಾಕರ್​ನಲ್ಲೂ ಹಣ ಸೇಫ್​ ಅಲ್ಲ!; ಇಲ್ಲಿಟ್ಟ ಹಣ ಏನಾಯ್ತು ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts