More

    ಮಹಾಮಳೆಗೆ 8 ಮಂದಿ ಬಲಿ; ಹೆಚ್ಚುತ್ತಲೇ ಇದೆ ‘ನರ್ಮದಾ’ ಅಬ್ಬರ

    ನವದೆಹಲಿ: ಮಹಾಮಳೆಗೆ ಮಧ್ಯಪ್ರದೇಶ ಅಕ್ಷರಶಃ ತತ್ತರಿಸಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ರಾಜ್ಯದ ಕೆಲವೆಡೆ ನರಕವನ್ನು ಸೃಷ್ಟಿಸಿದೆ.

    ಮಳೆಯಿಂದ ಹಲವು ಅವಘಡಗಳು ಸಂಭವಿಸಿದ್ದು, ಇಂದು ಒಂದೇ ದಿನ 8 ಮಂದಿ ಬಲಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಶಿವರಾಜ್​ ಸಿಂಗ್ ಚೌಹಾಣ್​ ತಿಳಿಸಿದ್ದಾರೆ.

    ಪ್ರವಾಹ ಪೀಡಿತ ಹಳ್ಳಿಗಳಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ ರಾಜ್ಯದ 12 ಜಿಲ್ಲೆಗಳ, 454 ಗ್ರಾಮಗಳಿಂದ, 7000 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಇನ್ನೂ 40 ಪ್ರವಾಹಪೀಡಿತ ಹಳ್ಳಿಗಳಲ್ಲಿ ಸಿಲುಕಿರುವ 1200 ಜನರನ್ನು ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆಯುತ್ತಲೇ ಇದೆ. ಇದನ್ನೂ ಓದಿ: ನೋ ಅನ್​​ಲಾಕ್​: ಈ ರಾಜ್ಯದಲ್ಲಿ ಸೆಪ್ಟೆಂಬರ್​ 30ರವರೆಗೆ ಮುಂದುವರಿಯಲಿದೆ ಲಾಕ್​ಡೌನ್​…

    ಸುಮಾರು 60 ಜನರನ್ನು ಐಎಎಫ್​​ ಹೆಲಿಕಾಪ್ಟರ್​ನಲ್ಲಿ ಲಿಫ್ಟ್ ಮಾಡುವ ಮೂಲಕ ರಕ್ಷಿಸಲಾಗಿದೆ. ಸುಮಾರು 170 ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಮನೀಶ್​ ರಸ್ಟೋಗಿ ತಿಳಿಸಿದ್ದಾರೆ.
    ರಾಜ್ಯದಲ್ಲಿ ನರ್ಮದಾ ನದಿಯ ನೀರಿನ ಮಟ್ಟ ಏರುತ್ತಿದೆ. ಈ ನದಿ ಹಲವು ಜಿಲ್ಲೆಗಳಲ್ಲಿ ಹರಿದಿದ್ದು, ಅಲ್ಲೆಲ್ಲ ತೀವ್ರ ತೊಂದರೆ ಎದುರಾಗಿದೆ. (ಏಜೆನ್ಸೀಸ್​)

    ಅಮೆರಿಕ ನೆಲದಲ್ಲೇ ಟ್ರಂಪ್​ಗೆ ವಿರೋಧ; ರಾಜ್ಯಕ್ಕೆ ಅಧ್ಯಕ್ಷರ ಭೇಟಿ ಬೇಡ ಎಂದ ರಾಜ್ಯಪಾಲ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts