More

    ಜಿಮ್​, ಫಿಟ್ನೆಸ್​ ಸೆಂಟರ್​ಗಳಿಗೆ ಮಾರ್ಗಸೂಚಿ ರಚನೆ: ಆರೋಗ್ಯ ಸಚಿವ ಸುಧಾಕರ್

    ಚಿಕ್ಕಬಳ್ಳಾಪುರ: ಪುನೀತ್ ರಾಜ್​​ಕುಮಾರ್ ಹೃದಯಾಘಾತದಿಂದ ಅಕಾಲಿಕವಾಗಿ ಸಾವಪ್ಪಿದ ಹಿನ್ನೆಲೆಯಲ್ಲಿ ಜಿಮ್ ಮಾಡಬೇಕಾ ಮಾಡಬಾರದಾ ಎಂಬ ಪ್ರಶ್ನೆ ಉದ್ಭವವಾಗಿದೆ. ಹೆಸರಾಂತ ಹೃದಯ ತಜ್ಞರ ವರದಿಯ ಆಧಾರದ ಮೇಲೆ ಜಿಮ್​ಗಳು ಹಾಗೂ ಫಿಟ್ನೆಸ್ ಸೆಂಟರ್​​ಗಳಿಗೆ ಮಾರ್ಗಸೂಚಿಗಳ ರಚನೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ರಾಜ್‍ಕುಮಾರ್ ನನಗೆ ಬಹಳ ಆತ್ಮೀಯರು. ಅವರ ಕುಟುಂಬಸ್ಥರು ನಮ್ಮ ಮನೆಗೆ ಬಂದು ಜೊತೆಯಲ್ಲಿ ಊಟ ಮಾಡಿದ್ದೀವಿ. ಅವರ ನೆನಪು ಮರೆಯಾಗಲ್ಲ. ಇದು ದುರದೃಷ್ಟಕರ ವಿಧಿ ಬರಹ ಎಂದು ಸಂತಾಪ ಸೂಚಿಸಿದರು.

    ಇದನ್ನೂ ಓದಿ: ರಾಜನಂತೆ ಹುಟ್ಟಿ, ಬೆಳೆದು, ಜೀವಿಸಿ, ರಾಜನಂತೆಯೇ ಹೋದ: ಕಿಚ್ಚನಿಂದ ಅಪ್ಪುಗೆ ಅಂತಿಮ ನುಡಿ ನಮನ

    “16 ವರ್ಷಗಳ ಹಿಂದೆ ನಾನು, ಅವರು(ಪುನೀತ್) ಒಂದೇ ಸಲ ಜಿಮ್ ಸ್ಟಾರ್ಟ್​ ಮಾಡಿದ್ವಿ. ನಾನು, ಅವರು, ರಾಘವೇಂದ್ರ ರಾಜ್​ಕುಮಾರ್ ಜಿಮ್ ಮಾಡ್ತಿದ್ವಿ. ಪುನೀತ್ ದೇಹದಂಡನೆ ನೋಡಲು ಬಹಳ ಸಂತೋಷ ಆಗ್ತಿತ್ತು. ಆರೋಗ್ಯಕ್ಕೆ ಹೆಚ್ಚು ಲಕ್ಷ್ಯ ಕೊಡ್ತಿದ್ರು. ಯಾವುದೇ ದುರ್ಗುಣಗಳಿರಲಿಲ್ಲ. ಆದ್ರೂ ಕೂಡ ವಿಧಿ ಬರಹ… ದೇವ್ರು ಒಳ್ಳೆಯವರನ್ನ ಇಷ್ಟಪಡ್ತಾರೆ ಅನ್ನೋದಕ್ಕೆ ಇದು ಪೂರಕ ಪ್ರಕರಣ. ಬಹಳ ಬೇಗ ತಂದೆ-ತಾಯಿ, ದೇವರ ಬಳಿ ಹೋಗಿದ್ದಾರೆ ಅಂತ ತಿಳಕೊಂಡಿದ್ದೀನಿ. ರಾಜ್ಯ 2 ದಿನದಿಂದ ಶೋಕಾಚರಣೆಯಲ್ಲಿ ಮುಳುಗಿದೆ. ನನಗೆ ಬಹಳ ನೋವಾಗಿದೆ. ಭಗವಂತ ಅವರ ಕುಟುಂಬಕ್ಕೆ ಆಸರೆಯಾಗಿ ಶಕ್ತಿ ತುಂಬಲಿ. ಮೂವರು ಹೆಣ್ಣುಮಕ್ಕಳಿಗೆ ಎಲ್ಲಾ ಧೈರ್ಯ ಕೊಟ್ಟು ಒಳ್ಳೇದು ಮಾಡಲಿ” ಎಂದರು.

    ಜೀವನದಲ್ಲಿ ದೈಹಿಕ ಚಟುವಟಿಕೆಗಳಿಂದ‌ ಲವಲವಿಕೆಯಿಂದ ಇರಬೇಕು. ಬಹಳ ಜನ ಜಿಮ್ ಮಾಡಬೇಕಾ ಬೇಡ್ವಾ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ‌. ಒಂದೆರೆಡು ಪ್ರಕರಣಗಳಿಂದ ಜಿಮ್ ಮಾಡೋದೇ ತಪ್ಪು ಎಂಬ ನಿರ್ಧಾರ ಸರಿ ಅಲ್ಲ. ಸಂಪೂರ್ಣ ಮಾಹಿತಿಯ ಹೆಸರಾಂತ ಹೃದಯ ತಜ್ಞರ ವರದಿ ತಯಾರು ಮಾಡಲಾಗುವುದು. ಅದರ ಆಧಾರದ ಮೇಲೆ ಜಿಮ್ಸ್ ಹಾಗೂ ಫಿಟ್ನೆಸ್ ಸೆಂಟರುಗಳಿಗೆ ಮಾರ್ಗಸೂಚಿಗಳ ರಚನೆ ಮಾಡಲಾಗುವುದು. ಜಿಮ್ ಮತ್ತು ಫಿಟ್​ನೆಸ್ ಸೆಂಟರ್​ಗಳಲ್ಲಿ ಯಾವ ಸಾಮಗ್ರಿಗಳಿರಬೇಕು? ಸಮಸ್ಯೆ ಬಂದಾಗ ಯಾವ ರೀತಿ ನಿಭಾಯಿಸಬೇಕು? ಪ್ರಥಮ ಚಿಕಿತ್ಸೆಯಿಂದ ಹಿಡಿದು ಆಸ್ಪತ್ರೆ ದಾಖಲಾಗುವವರೆಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಮ್ ಟೈನರ್​​ಗೆ ಪರಿಣಿತಿ ಕೊಡುವ ತರಬೇತಿ ನೀಡಲಾಗುವುದು ಎಂದು ಸಚಿವ ಸುಧಾಕರ್​ ಹೇಳಿದರು.

    ‘ಇದು ಹೋಗುವ ವಯಸ್ಸಾಗಿರಲಿಲ್ಲ’ …ಅಪ್ಪು ಅಗಲಿಕೆಗೆ ಗಣ್ಯರ ಸಂತಾಪ

    70 ವರ್ಷಗಳ ಪ್ರಯತ್ನಗಳನ್ನ 7 ವರ್ಷಗಳಲ್ಲಿ ವ್ಯರ್ಥಗೊಳಿಸಿದ್ದಾರೆ: ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

    ನಕಲಿ ಕೇಸ್​ ಹಾಕಲು ಡ್ರಗ್ಸ್​ ಪ್ಲಾಂಟ್​ ಮಾಡುತ್ತೆ ‘ವಾಂಖೇಡೆ ಗ್ಯಾಂಗ್​’: ಮಹಾ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts