More

    70 ವರ್ಷಗಳ ಪ್ರಯತ್ನಗಳನ್ನ 7 ವರ್ಷಗಳಲ್ಲಿ ವ್ಯರ್ಥಗೊಳಿಸಿದ್ದಾರೆ: ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

    ಗೋರಖಪುರ: ಕಾಂಗ್ರೆಸ್ ಪಕ್ಷದ ಸರ್ಕಾರ 70 ವರ್ಷಗಳಲ್ಲಿ ನಿರ್ಮಾಣ ಮಾಡಿದ್ದೆಲ್ಲವನ್ನೂ 7 ವರ್ಷಗಳಲ್ಲೇ ಬಿಜೆಪಿ ಸರ್ಕಾರ ವ್ಯರ್ಥ ಮಾಡುತ್ತಿದೆ ಎಂದು ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸರ್ಕಾರದಲ್ಲಿ ನಿರಂತರವಾಗಿ ದಲಿತರು ಮತ್ತು ಅಲ್ಪಸಂಖ್ಯಾತರ ಶೋಷಣೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

    ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್​​ನ ಪ್ರತಿಜ್ಞಾ ರಾಲಿಯ ಅಂಗವಾಗಿ, ಇಂದು(ಅ.31) ಸಿಎಂ ಯೋಗಿ ಅವರ ಕ್ಷೇತ್ರವಾದ ಗೋರಖ್​ಪುರದಲ್ಲಿ ಪ್ರಿಯಾಂಕಾ ಗಾಂಧಿ ಮಾತನಾಡಿದರು. ಯುಪಿಯಲ್ಲಿ 5 ಕೋಟಿ ನಿರುದ್ಯೋಗಿ ಯುವಕ-ಯುವತಿಯರಿದ್ದಾರೆ. ಪ್ರತಿ ದಿನ ಮೂವರು ಯುವಕರು ನಿರುದ್ಯೋಗದಿಂದಾಗಿ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿದ್ದಾರೆ ಎಂದರು.

    ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಹತ್ಯೆ ಆಗುತ್ತದೆ ಎಂದು ಗೊತ್ತಿದ್ದರೂ ಜನರ ವಿಶ್ವಾಸಕ್ಕಾಗಿ ಕೆಲಸ ಮುಂದುವರಿಸಿದ್ದರು. ಅವರು ಹೇಳಿಕೊಟ್ಟ ಮೌಲ್ಯಗಳಿಂದಾಗಿಯೇ ನಾನು ಮತ್ತು ನನ್ನ ಸೋದರ ರಾಹುಲ್​ ಗಾಂಧಿ ನಿಮ್ಮ ಮುಂದೆ ನಿಂತಿದ್ದೇವೆ. ನಾವು ನಿಮ್ಮ ಬೆಂಬಲಕ್ಕೆ ಸ್ಥಿರವಾಗಿ ನಿಲ್ಲುತ್ತೇವೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ ಎಂದು ಪ್ರಿಯಾಂಕ ನುಡಿದರು.

    “ಕಾಂಗ್ರೆಸ್​ ಸರ್ಕಾರ ರೈಲ್ವೇಸ್​, ವಿಮಾನ ನಿಲ್ದಾಣಗಳು, ರಸ್ತೆಗಳು ಎಲ್ಲವನ್ನೂ ನಿರ್ಮಾಣ ಮಾಡಿತು. ಅವರು ಇವೆಲ್ಲವನ್ನೂ ಮಾರುತ್ತಿದ್ದಾರೆ. ನಾವು 70 ವರ್ಷಗಳಲ್ಲಿ ಏನು ಮಾಡಿದೆವು ಎಂದು ಅವರು ಕೇಳುತ್ತಾರೆ. ನಮ್ಮ 70 ವರ್ಷಗಳ ಪ್ರಯತ್ನಗಳನ್ನು ಅವರು 7 ವರ್ಷಗಳಲ್ಲಿ ವ್ಯರ್ಥ ಮಾಡಿದ್ದಾರೆ” ಎಂದು ಪ್ರಿಯಾಂಕಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಲಖೀಂಪುರ್​ ಖೇರಿ ಘಟನೆಯು ರಾಜ್ಯದಲ್ಲಿ ಮತ್ತು ದೇಶದಲ್ಲಿ ರೈತರ ಧ್ವನಿ ಕೇಳುವವರು ಯಾರೂ ಇಲ್ಲ ಎಂಬುದನ್ನು ಸಾಬೀತು ಮಾಡಿದೆ ಎಂದರು.

    ನಕಲಿ ಕೇಸ್​ ಹಾಕಲು ಡ್ರಗ್ಸ್​ ಪ್ಲಾಂಟ್​ ಮಾಡುತ್ತೆ ‘ವಾಂಖೇಡೆ ಗ್ಯಾಂಗ್​’: ಮಹಾ ಸಚಿವ

    ಪವರ್​ ಸ್ಟಾರ್​ ಪುನೀತ್​ ನಿಧನಕ್ಕೆ ಪುಟಾಣಿ ಅಭಿಮಾನಿ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts