More

    ಗರ್ಭಪಾತ ಕಾನೂನು ರದ್ದುಗೊಳಿಸಿದ ಅಮೆರಿಕ ಸುಪ್ರೀಂಕೋರ್ಟ್​! ಹಲವು ವರ್ಷಗಳ ಹೋರಾಟಕ್ಕೆ ಜಯ

    ವಾಷಿಂಗ್ಟನ್​: ಅಮೆರಿಕಾದಲ್ಲಿ ಈವರೆಗೂ ಜಾರಿಯಲ್ಲಿದ್ದ ಕಾನೂನುಬದ್ಧ ಗರ್ಭಪಾತದ ಹಕ್ಕನ್ನು ರದ್ದುಗೊಳಿಸಲಾಗಿದೆ ಎಂದು ಶನಿವಾರ ಅಮೆರಿಕಾದ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

    ಸತತ 50 ವರ್ಷಗಳಿಂದ ಈ ಕಾನೂನು ಜಾರಿಯಲ್ಲಿತ್ತು, ಅಮೆರಿಕದಲ್ಲಿ 1973 ರಲ್ಲಿ ರೋಯ್ ವಿ ವೇಡ್ ಪ್ರಕರಣದಲ್ಲಿ ಮಹಿಳೆಯರಿಗೆ ಗರ್ಭಪಾತ ಮಾಡುವ ಸಾಂವಿಧಾನಿಕ ಹಕ್ಕನ್ನು ನೀಡುವ  ತೀರ್ಪು ನೀಡಲಾಗಿತ್ತು. ಅಂದಿನಿಂದ ಅಲ್ಲಿ ಗರ್ಭಪಾತವನ್ನು ಕಾನೂನು ಬದ್ಧಗೊಳಿಸಲಾಗಿತ್ತು. ಗರ್ಭಪಾತಕ್ಕೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವು ಚುನಾಯಿತ ಪ್ರತಿನಿಧಿಗಳು, ಜನರಿಗೆ ಇರುತ್ತದೆ ಎಂದು ನ್ಯಾಯಾಲಯ ಹೇಳಿದೆ.

    ಅನಿಯಂತ್ರಿತ ಗರ್ಭಪಾತಗಳು ಮಹಿಳೆಯರ  ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡುತ್ತಿವೆ ಎಂಬ ಆರೋಪ ಕೆಲವು ವರ್ಷಗಳಿಂದಲೂ ಕೇಳಿಬಂದಿತ್ತು. ಅಲ್ಲದೇ ಅಮೆರಿಕದ ಹಲವು ಭಾಗಗಳಲ್ಲಿ ಗರ್ಭಪಾತದ ಹಕ್ಕನ್ನು ರದ್ದುಗೊಳಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು. (ಏಜೆನ್ಸೀಸ್​)

    ಹಳ್ಳದಲ್ಲಿ 7 ಭ್ರೂಣಗಳ ಪತ್ತೆ ಪ್ರಕರಣ: ತಪ್ಪೊಪ್ಪಿಕೊಂಡ ಆಸ್ಪತ್ರೆ, ಯಾರೇ ಆದರೂ ಕ್ರಮ ಕೈಗೊಳ್ಳಿ ಅಂದ್ರು ಆರೋಗ್ಯ ಸಚಿವರು

    ಬೇರೆಯಾಗಲು ಬಂದು ಒಂದಾಗಿ ಮರಳಿದ ದಂಪತಿ: ನ್ಯಾಯಾಧೀಶರಿಂದಲೇ ರಾಜಿ ಸಂಧಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts