More

    ಅಂದು ಕೆಮಿಸ್ಟ್ರಿಯಲ್ಲಿ ಕೇವಲ 24 ಅಂಕ, ಇಂದು ಐಎಎಸ್​ ಅಧಿಕಾರಿ: ವಿದ್ಯಾರ್ಥಿ, ಪಾಲಕರು ಓದಲೇಬೇಕಾದ ಸ್ಟೋರಿ!

    ನವದೆಹಲಿ: ಸಿಬಿಎಸ್​​ಇ ಪಿಯು ರಿಸಲ್ಟ್​ ಘೋಷಣೆಯಾದ ದಿನದ ಬೆನ್ನಲ್ಲೇ ಬೋರ್ಡ್​ ಎಕ್ಸಾಮ್​ ಫಲಿತಾಂಶಕ್ಕಿಂತ ನಮ್ಮ ಜೀವನವೇ ಮುಖ್ಯವೆಂದು ಟ್ವೀಟ್​ ಮಾಡಿರುವ ಐಎಎಸ್​ ಅಧಿಕಾರಿ ನಿತಿನ್​ ಸಂಗ್ವಾನ್​, ತಮ್ಮ ಪಿಯು ಮಾರ್ಕ್ಸ್​ ಕಾರ್ಡ್​ ಶೇರ್​ ಮಾಡಿಕೊಂಡು ವಿದ್ಯಾರ್ಥಿ ಹಾಗೂ ಪಾಲಕರಿಗೆ ಸ್ಪೂರ್ತಿದಾಯಕ ಸಂದೇಶವೊಂದನ್ನು ರವಾನಿಸಿದ್ದಾರೆ.

    ತಮ್ಮ ಶೈಕ್ಷಣಿಕ ಅವಧಿಯಲ್ಲಿ ಕೆಮಿಸ್ಟ್ರಿಯಲ್ಲಿ 70ಕ್ಕೆ ಕೇವಲ 24 ಅಂಕ ಪಡೆದಿರುವ ಸಂಗ್ವಾನ್​ ಪಾಸ್​ ಆಗಲು ಬೇಕಾಗಿದ್ದ ಕನಿಷ್ಠ ಅಂಕಕ್ಕಿಂತ ಕೇವಲ ಒಂದು ಅಂಕ ಮಾತ್ರ ಹೆಚ್ಚಿಗೆ ಪಡೆದಿದ್ದಾರೆ.

    ಇದನ್ನೂ ಓದಿ: ಗಣಿತದಲ್ಲಿ ನೂರಕ್ಕೆ ನೂರು, ಉಳಿದ ವಿಷಯದಲ್ಲೂ ಉತ್ತಮ ಅಂಕ: ಆದ್ರೆ ಸಂಭ್ರಮಿಸಲು ವಿದ್ಯಾರ್ಥಿನಿಯೇ ಇಲ್ಲ

    ತಮ್ಮ ಮಾರ್ಕ್ಸ್​ ಕಾರ್ಡ್​ ಶೇರ್​ ಮಾಡಿಕೊಂಡಿರುವ ಸಂಗ್ವಾನ್​ ಮಾಧ್ಯಮದೊಂದಿಗೆ ಮಾತನಾಡಿ, ಕಡಿಮೆ ಅಂಕ ಬಂದಿದ್ದಕ್ಕೆ ನನ್ನ ಸ್ನೇಹಿತರು ಹಾಗೂ ಕುಟುಂಬದವರು ಬೇಸರ ಮಾಡಿಕೊಂಡಿದ್ದನ್ನು ನೋಡಿ, ಅವರಿಗಿಂತ ನನ್ನ ಸ್ಥಿತಿಯೇ ಕೆಟ್ಟದ್ದು ಎಂದು ಭಾಸವಾಯಿತು. ಜಾಲತಾಣದಲ್ಲಿ ನನ್ನ ಅಂಕಪಟ್ಟಿ ಶೇರ್​ ಮಾಡಿಕೊಂಡಿದ್ದರ ಉದ್ದೇಶವೇನೆಂದರೆ ನಾನು ನನ್ನ ಜೀವನದಲ್ಲಿ ಇದಕ್ಕಿಂತ ಹೆಚ್ಚು ಮಾಡಲು ಇಂದು ಸಾಧ್ಯವಾಗಿದ್ದರೆ, ಅವರು ಕೂಡ ಹಾಗೇ ಮಾಡಬಹುದು ಎಂದು ತಿಳಿಸುವುದಕ್ಕಾಗಿ ಎಂದರು.

    ಇದೀಗ ಸಂಗ್ವಾನ್​ ಟ್ವೀಟ್​ ವೈರಲ್​ ಆಗಿದ್ದು, ಸಾವಿರಾರು ರೀಟ್ವೀಟ್​ಗಳನ್ನು ಪಡೆದುಕೊಂಡಿದೆ. ಅಲ್ಲದೆ, ವಿದ್ಯಾರ್ಥಿಗಳನ್ನು ಹುರಿದುಂಬಿಸಿದ್ದಕ್ಕೆ ಅನೇಕರು ಸಂಗ್ವಾನ್​ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

    ಪಿಯು ಪರೀಕ್ಷೆಯಲ್ಲಿ ನಾನು ಕೆಮೆಸ್ಟ್ರಿಯಲ್ಲಿ 24 ಅಂಕ ಗಳಿಸಿದೆ. ಪಾಸ್​ ಮಾರ್ಕ್ಸ್​ಗಿಂತ ಕೇವಲ ಒಂದು ಅಂಕ ಮಾತ್ರ ಹೆಚ್ಚು ಗಳಿಸಿದೆ. ಆದರೆ, ನಾನು ನನ್ನ ಜೀವನದಲ್ಲಿ ಏನಾಗಬೇಕು ಎಂಬುದನ್ನು ಇದು ನಿರ್ಧರಿಸಲಿಲ್ಲ. ಮಾರ್ಕ್ಸ್​ ಎಂಬ ಭಾರದಿಂದ ಮಕ್ಕಳ ಮನಸ್ಸು ಕುಂದುವಂತೆ ಮಾಡಬೇಡಿ ಎಂದು ಮಾರ್ಕ್ಸ್​ ಕಾರ್ಡ್​ ಶೇರ್​ ಮಾಡಿಕೊಂಡು ಸಂಗ್ವಾನ್​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಜನಿವಾರ ತೋರಿಸಿ ದುಬೆಯಿಂದ ಬಚಾವಾದೆ: ರೋಚಕ ಮಾಹಿತಿ ಬಿಚ್ಚಿಟ್ಟ ದೂರುದಾರ ತಿವಾರಿ!

    ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಿಮ್ಮ ಜೀವನದ ಒಂದು ಮೈಲುಗಲ್ಲಷ್ಟೇ, ಆದರೆ ನೀವು ಏನಾಗಬೇಕು ಎಂಬುದನ್ನು ಅವು ನಿರ್ಧರಿಸಲಾರವು. ಇದೇ ಸಂದೇಶವನ್ನು ನಾನು ನನ್ನ ಟ್ವೀಟ್​ ಮೂಲಕ ತಿಳಿಸಿದ್ದೇನೆಂದು ಸಂಗ್ವಾನ್​ ಹೇಳಿದರು. ಇದೇ ವೇಳೆ ಬಿಲ್​ಗೇಟ್ಸ್​, ಸ್ಟೀವ್​ ಜಾಬ್ಸ್​ ಅವರ ಹೆಸರನ್ನು ಉಲ್ಲೇಖಿಸಿ ಯಶಸ್ಸು ಎಂಬುದು ನಿಮ್ಮ ಪದವಿ ಅಂಕಪಟ್ಟಿಯ ಮೇಲೆ ನಿರ್ಧಾರವಾಗಿರುವುದಿಲ್ಲ ಎಂದರು.

    ಅಂದಹಾಗೆ ಸಂಗ್ವಾನ್​ ಅವರು ಐಐಟಿ ಮದ್ರಾಸ್ಸಿನ ಹಳೆಯ ವಿದ್ಯಾರ್ಥಿ. 2015ರಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್​ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. (ಏಜೆನ್ಸೀಸ್​)

    ಟೆಕ್ಕಿ ಪತಿಯ ಕಿರುಕುಳ ಬಗ್ಗೆ ವಿಡಿಯೋ ಮಾಡಿಟ್ಟು ಕೊನೆ ಆಸೆ ತಿಳಿಸಿ ಮಹಿಳೆ ಆತ್ಮಹತ್ಯೆಗೆ ಶರಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts