More

    ಜನಿವಾರ ತೋರಿಸಿ ದುಬೆಯಿಂದ ಬಚಾವಾದೆ: ರೋಚಕ ಮಾಹಿತಿ ಬಿಚ್ಚಿಟ್ಟ ದೂರುದಾರ ತಿವಾರಿ!

    ಕಾನ್ಪುರ: ಇದೇ 10ರಂದು ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಕುಖ್ಯಾತ ರೌಡಿ ವಿಕಾಸ್‌ ದುಬೆಯ ಬಗ್ಗೆ ಮೊದಲಿಗೆ ಮಾಹಿತಿ ಕೊಟ್ಟ ರಾಹುಲ್‌ ತಿವಾರಿ ತಾವು ದುಬೆಯಿಂದ ಬದುಕಿಬಂದ ರೋಚಕ ಘಟನೆಯನ್ನು ವಿವರಿಸಿದ್ದಾರೆ.

    ರಾಹುಲ್‌ ತಿವಾರಿಯ ಅಳಿಯ ಹಾಗೂ ವಿಕಾಸ್‌ ದುಬೆ ಅವರ ನಡುವೆ ಆಸ್ತಿಯ ವಿವಾದಕ್ಕೆ ಸಂಬಂಧಿಸಿದಂತೆ ಜಗಳವಾಗಿತ್ತು.

    ಈ ಹಿನ್ನೆಲೆಯಲ್ಲಿ ದುಬೆ ವಿರುದ್ಧ ರಾಹುಲ್‌ ತಿವಾರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಅದೇ ಪೊಲೀಸ್‌ ಠಾಣೆಯಲ್ಲಿ ದುಬೆಗೆ ಮಾಹಿತಿದಾರನಾಗಿದ್ದ ಸ್ಟೇಷನ್‌ ಹೌಸ್‌ ಆಫೀಸರ್‌ (ಎಚ್‌ಒ) ವಿನಯ್‌ ತಿವಾರಿ ಈ ವಿಷಯವನ್ನು ಗುಟ್ಟಾಗಿ ದುಬೆಗೆ ತಿಳಿಸಿದ್ದ.

    ಇದು ನಡೆದದ್ದು ಕಳೆದ ತಿಂಗಳು ಜೂನ್‌ 27ರಂದು. ಪೊಲೀಸ್ ಠಾಣೆಯಿಂದ ರಾಹುಲ್‌ ಬೈಕ್‌ನಲ್ಲಿ ಮನೆಗೆ ವಾಪಸಾಗುತ್ತಿದ್ದ ವೇಳೆ ದುಬೆ ಹಾಗೂ ಆತನನ ಸಹಚರರು ರಾಹುಲ್‌ ಅವರನ್ನು ತಡೆದರು. ಈ ಸಮಯದಲ್ಲಿ ವಿನಯ್‌ ಕೂಡ ಬಂದಿದ್ದ. ಇನ್ನೇನು ತನ್ನನ್ನು ದುಬೆ ಮುಗಿಸಿಯೇ ಬಿಡುತ್ತಾನೆ ಎಂದುಕೊಂಡ ರಾಹುಲ್‌ ಅವರು ಧೈರ್ಯ ಮಾಡಿ ತಾವು ತೊಟ್ಟಿದ್ದ ಜನಿವಾರವನ್ನು ಹೊರಕ್ಕೆ ತೆಗೆದರು. ’ನೋಡು ಇದನ್ನು ಬ್ರಾಹ್ಮಣರು ನನಗೆ ಹಾಕಿರುವುದು. ಕೊನೆಯ ಪಕ್ಷ ಬ್ರಾಹ್ಮಣರಿಗಾದರೂ ಮರ್ಯಾದೆ ಕೊಡು’ ಎಂದರು.

    ಇದನ್ನೂ ಓದಿ: ಎನ್​ಕೌಂಟರ್​ಗೆ ಬಲಿಯಾದ ವಿಕಾಸ್​ ದುಬೆ ಸಹಚರನ ವಯಸ್ಸು ಕೇವಲ ಹದಿನಾರು; ಪಿಯುಸಿನಲ್ಲಿ ಫಸ್ಟ್ ಕ್ಲಾಸ್…!

    ಆಗ ದುಬೆ ಅಲ್ಲಿಯೇ ಸಮೀಪವಿದ್ದ ಗಂಗಾನದಿಯ ನೀರನ್ನು ತೆಗೆದುಕೊಂಡು ಸುಧಾರಿಸಿಕೊಳ್ಳುವಂತೆ ನನಗೆ ಹೇಳಿದ. ನಂತರ ಅದೇ ಗಂಗಾಜಲದ ಮೇಲೆ ಆಣೆ ಮಾಡಿಸಿದ ವಿನಯ್‌, ವಿಕಾಸ್‌ನನ್ನು ಕೊಲ್ಲಬೇಡ ಎಂದ. ದುಬೆ ಸುಮ್ಮನೆ ಆ ಕ್ಷಣದಲ್ಲಿ ಹೊರಟುಹೋದ.

    ಇದಾದ ಮೇಲೆ ಸಾವಿನ ಅಂಚಿನಿಂದ ಪಾರಾದ ರಾಹುಲ್‌ ಅವರಿಗೆ ಮರುಜೀವ ಬಂದಿತು. ಆದರೆ ಮನೆಗೆ ಹೋದಾಗ ಇವತ್ತೇನೋ ಬಚಾವಾದೆ, ಮತ್ತೆ ಆತ ನನ್ನನ್ನು ಕೊಲ್ಲಲು ಬರುವುದಿಲ್ಲ ಎಂದು ಹೇಳಲಾಗದು ಎಂದುಕೊಂಡ ಅವರು, ಮಾರನೆಯ ದಿನ ಪೊಲೀಸ್‌ ಠಾಣೆಗೆ ಹೋಗಿ ದೂರು ದಾಖಲು ಮಾಡಿದರು.
    ಈ ದೂರಿನ ಅನ್ವಯವೇ ಪೊಲೀಸರು ದುಬೆಯನ್ನು ಹಿಡಿಯಲು ಹೋಗಿದ್ದರು. ಆ ಸಂದರ್ಭದಲ್ಲಿ ನಡೆದ ಚಕಮಕಿಯಲ್ಲಿ ಎಂಟು ಮಂದಿ ಪೊಲೀಸರು ಹುತಾತ್ಮರಾಗಿದ್ದರು, ಅದೇ ಬೆನ್ನಲ್ಲೇ ವಿಕಾಸ್‌ ದುಬೆ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದು.

    ಇಷ್ಟವಾಗದ ಪತಿ: ವಿಷ ಹಾಕಿದರೂ ಸಾಯಲಿಲ್ಲ ಅಂತ ಇರಿದು ಕೊಂದಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts