More

    ಟೆಕ್ಕಿ ಪತಿಯ ಕಿರುಕುಳ ಬಗ್ಗೆ ವಿಡಿಯೋ ಮಾಡಿಟ್ಟು ಕೊನೆ ಆಸೆ ತಿಳಿಸಿ ಮಹಿಳೆ ಆತ್ಮಹತ್ಯೆಗೆ ಶರಣು

    ಚೆನ್ನೈ: ಪತಿ ಹಾಗೂ ಅತ್ತೆಯ ವರದಕ್ಷಿಣೆ ದಾಹಕ್ಕೆ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಕುಡ್ಡಲೂರ್​ ಜಿಲ್ಲೆಯ ವಿರುಧಾಚಲಂನಲ್ಲಿ ಬುಧವಾರ ನಡೆದಿದ್ದು, ಸಾವಿಗೂ ಮುನ್ನ ವಿಡಿಯೋ ರೆಕಾರ್ಡ್ ಮಾಡಿ ಅತ್ತೆ ಹಾಗೂ ಪತಿಯ ಕಿರುಕುಳದ ಬಗ್ಗೆ ಆರೋಪ ಮಾಡಿದ್ದಾರೆ.

    ಶೋಭನಾ (26) ಮೃತ ದುರ್ದೈವಿ. ಚೆನ್ನೈನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ 28 ವರ್ಷದ ವಿಜಯ್​ಕುಮಾರ್​ ಎಂಬಾತನನ್ನು 2018ರಲ್ಲಿ ಶೋಭನಾ ವಿವಾಹವಾಗಿದ್ದರು. ದಂಪತಿಗೆ ಒಂದು ವರ್ಷದ ಒಬ್ಬ ಮಗನಿದ್ದಾನೆ.

    ಇದನ್ನೂ ಓದಿ: ಹೆಚ್ಚು ಪೋರ್ನ್ ವಿಡಿಯೋಗಳನ್ನು ನೋಡುವ ಪುರುಷರಲ್ಲಿ ಈ ಸಮಸ್ಯೆಯೂ ಹೆಚ್ಚಾಗಲಿದೆಯಂತೆ!​

    ಅತ್ತೆ ಹಾಗೂ ಪತಿ ವರದಕ್ಷಿಣೆ ಕಿರುಕುಳ ಹಾಗೂ ಕೆಟ್ಟ ಬೈಗುಳಗಳು ನನ್ನನ್ನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿತು ಎಂದು ಮಹಿಳೆ ವಿಡಿಯೋದಲ್ಲಿ ಹೇಳಿದ್ದಾಳೆ. ನಾನು ನಿನ್ನ ಕುಟುಂಬವನ್ನು ನಾಶ ಮಾಡಲು ಬಂದಿದ್ದೇನೆ ಎಂದು ನನ್ನ ಅತ್ತೆ ಹೇಳುತ್ತಿದ್ದರು. ಮದುವೆ ವೇಳೆ ಸಾಕಷ್ಟು ಚಿನ್ನಾಭರಣ ನೀಡಿದ್ದರೂ ಸಹ ನೀನು ಮನೆಗೆ ಏನು ತಂದಿಲ್ಲ ಎಂದು ಜರಿಯುತ್ತಿದ್ದರು. ಅವರು ಇಲ್ಲಿಯವರೆಗೆ ನನಗಾಗಿ ಏನೂ ಮಾಡಿಲ್ಲ. ಇದರ ಹೊರತಾಗಿ ನಾಶ ಮಾಡಲು ಬಂದಿರುವುದಾಗಿ ಪದೇಪದೆ ಹೇಳುತ್ತಿದ್ದರು. ಅಲ್ಲದೆ, ನಾನೋರ್ವ ವ್ಯಭಿಚಾರಿಣಿ ಎಂದು ನಿಂದಿಸುತ್ತಿದ್ದರು. ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳಿ, ಇದೊಂದೆ ನಾನು ಬಯಸಿರುವುದು. ನನ್ನನ್ನು ನಮ್ಮ ತಂದೆಯ ಸಮಾಧಿಯ ಬಳಿಯಲ್ಲೇ ಅಂತ್ಯ ಸಂಸ್ಕಾರ ಮಾಡಿ ಎಂದು ವಿಡಿಯೋದಲ್ಲಿ ಹೇಳಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಶೋಭನಾ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಆಕೆಯ ಪತಿ ಮತ್ತು ಅತ್ತೆ ಮನೆಯವರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರ ಪ್ರಕಾರ, ಆರೋಪಿ ವಿಜಯ್​ ಕುಮಾರ್​ ಕರೊನಾ ವೈರಸ್​ನಿಂದಾಗಿ ನೌಕರಿ ಕಳೆದುಕೊಂಡಿದ್ದ. ಹೀಗಾಗಿ ತವರು ಮನೆಯಿಂದ ವರದಕ್ಷಿಣೆಯಾಗಿ ಹೆಚ್ಚು ಹಣ ತರುವಂತೆ ಪತ್ನಿಯ ಮೇಲೆ ಭಾರಿ ಒತ್ತಡ ಹೇರುತ್ತಿದ್ದ. ಇದಕ್ಕೆ ಶೋಭನಾ ಒಪ್ಪದಿದ್ದಾಗ ಪತಿ ಹಾಗೂ ಅತ್ತೆ ಆಕೆಯನ್ನು ಅಗೌರವದಿಂದ ಕಾಣಲು ಆರಂಭಿಸಿದ್ದಲ್ಲದೆ, ಕೆಟ್ಟ ಪದಗಳಿಂದ ನಿಂದಿಸುತ್ತಿದ್ದರು. ಇದಲ್ಲದೆ, ಆರೋಪಿ ವಿಜಯ್ ಕುಮಾರ್​ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದ. ಶೋಭನಾಗೆ ಅನುಮಾನ ಮೂಡಿದಾಗ ಆಕೆಯನ್ನು ಮನೆಯಿಂದ ಹೊರಕ್ಕೆ ಓಡಿಸುವ ಪ್ರಯತ್ನಕ್ಕೂ ಕೈಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಸುಶಾಂತ್​ ದಿನಾ ಪಿಕಪ್​ ಮಾಡುತ್ತಿದ್ದ … ಹಳೆಯ ನೆನಪುಗಳನ್ನು ಮೆಲುಕು ಹಾಕಿದ ರಿಚಾ

    ಶೋಭನಾ ಮದುವೆ ಸಮಯದಲ್ಲೇ 60 ಸವರನ್ ಚಿನ್ನವನ್ನು ಗಂಡನ ಮನೆಗೆ ತಂದಿದ್ದಳು. ಅಲ್ಲದೆ, ಗಂಡನ ಒತ್ತಾಯದಿಂದ ಹೆಚ್ಚಿನ ಚಿನ್ನಕ್ಕಾಗಿ ಬೇಡಿಕೆ ಇಟ್ಟಿದ್ದಳು ಎಂದು ಶೋಭನಾ ತಾಯಿ ಖಚಿತಪಡಿಸಿದ್ದಾರೆ. ತನಗೆ ಗಂಡನ ಮನೆಯಲ್ಲಿ ಕಿರುಕುಳ ನೀಡುತ್ತಿರುವುದಾಗಿಯೂ ಅನೇಕ ಬಾರಿ ತವರು ಮನೆಯಲ್ಲಿ ಹೇಳಿಕೊಂಡಿದ್ದರು. ಆದರೆ, ಹೇಗೋ ಹೊಂದಾಣಿಕೆ ಮಾಡಿಕೊಂಡು ಹೋಗು ಎಂದಷ್ಟೇ ಹೇಳಿದ್ದರು. ಆತ್ಮಹತ್ಯೆ ಮಾಡಿಕೊಳ್ಳವ ಮುಂಚೆಯೇ ಮನೆಗೆ ಫೋನ್​ ಮಾಡಿ ಅತ್ತಿದ್ದಳು. ಈ ವೇಳೆ ಮಗು ಕರೆದುಕೊಂಡು ಮನೆಗೆ ಬಾ ಎಂದು ಪಾಲಕರು ಹೇಳಿದ್ದರು. ಆದರೆ, ಇದು ಇಲ್ಲಿಗೆ ಮುಗಿಯುವ ಕತೆಯಲ್ಲ ಎಂದು ಭಾವಿಸಿ ಮಹಿಳೆ ಆತ್ಮಹತ್ಯೆ ದಾರಿ ಹಿಡಿದಿದ್ದಾಳೆ.

    ಬಂಧನವಾಗಿರುವ ವಿಜಯ್​ ಹಾಗೂ ಮನೆಯವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

    ಪಾಸಿಟಿವ್‌ ರಿಪೋರ್ಟ್‌ ಇಟ್ಕೊಂಡು ವಿಮಾನದಲ್ಲಿ ಮೂರು ರಾಜ್ಯ ಸುತ್ತಿದ ಭೂಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts