More

    ಪಾಸಿಟಿವ್‌ ರಿಪೋರ್ಟ್‌ ಇಟ್ಕೊಂಡು ವಿಮಾನದಲ್ಲಿ ಮೂರು ರಾಜ್ಯ ಸುತ್ತಿದ ಭೂಪ!

    ಕೋಲ್ಕತಾ: ಅನೇಕ ಮಂದಿಗೆ ಇದೀಗ ಕರೊನಾ ಲಕ್ಷಣಗಳು ಕಾಣಿಸಿಕೊಳ್ಳದೇ ಇದ್ದರೂ ಕರೊನಾ ಸೋಂಕು ಇರುವುದು ಪತ್ತೆಯಾಗುತ್ತಿದೆ.

    ಅದನ್ನೇ ಬಂಡವಾಳ ಮಾಡಿಕೊಂಡಿರುವ 34 ವರ್ಷದ ವ್ಯಕ್ತಿಯೊಬ್ಬ ತನಗೆ ಸೋಂಕು ಬಂದಿರುವ ಬಗ್ಗೆ ಸಿಕ್ಕಿರುವ ವರದಿಯನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು, ವಿಮಾನದಲ್ಲಿ ಮೂರು ರಾಜ್ಯಗಳನ್ನು ಸುತ್ತಿದ್ದಾನೆ! ಆದರೆ ವಿಮಾನ ನಿಲ್ದಾಣದ ಚೆಕಿಂಗ್‌ ಪಾಯಿಂಟ್‌ನಲ್ಲಿ ಜ್ವರ ತಪಾಸಣೆ ಮಾಡುವ ಸಂದರ್ಭದಲ್ಲಿ ನೆಗೆಟಿವ್‌ ತೋರಿಸಿರುವ ಕಾರಣ, ಯಾರಿಗೂ ಈತ ಪಾಸಿಟಿವ್‌ ಎಂದು ತಿಳಿದೇ ಇಲ್ಲ!

    ದೆಹಲಿ ಸೇರಿದಂತೆ ಮಹಾರಾಷ್ಟ್ರದ ಕೆಲವು ನಗರಗಳನ್ನು ಸುತ್ತಿರುವ ದೆಹಲಿಯ 34 ವರ್ಷದ ವ್ಯಕ್ತಿ ಅಲ್ಲಿಂದ ಅಸ್ಸಾಂನ ಗುವಾಹಟಿಗೆ ಹೋಗಿದ್ದಾನೆ. ಅಲ್ಲಿಂದ ಪಶ್ಚಿಮ ಬಂಗಾಳದ ಕೋಲ್ಕತಾಕ್ಕೆ ಹಾರಿದ್ದಾನೆ! ಸ್ಪೈಸ್‌ ಜೆಟ್‌ ವಿಮಾನದಲ್ಲಿ ಈತ ಎಲ್ಲಾ ಕಡೆ ಪ್ರಯಾಣ ಬೆಳೆಸಿದ್ದರೂ, ಯಾರಿಗೂ ಈತ ಕರೊನಾ ಸೋಂಕಿತ ಎಂದು ತಿಳಿದೇ ಇಲ್ಲ!

    ಇದನ್ನೂ ಓದಿ: ಕರೊನಾ ಹೆಸರಲ್ಲಿ ದೆಹಲಿಯಲ್ಲಿ ಪ್ಲಾಸ್ಮಾ ಮಾಫಿಯಾ: ಸ್ಫೋಟಕ ಮಾಹಿತಿ ಬಹಿರಂಗ

    ನಂತರ ಕೋಲ್ಕತಾಕ್ಕೆ ತೆರಳಿದ ಮೇಲೆ ವಿಮಾನನಿಲ್ದಾಣದ ಅಧಿಕಾರಿಗಳಿಗೆ ತಮ್ಮನ್ನು ಕ್ವಾರಂಟೈನ್‌ ಕೇಂದ್ರಕ್ಕೆ ಕೂಡಲೇ ರವಾನೆ ಮಾಡುವಂತೆ ಹೇಳಿದ್ದಾರೆ. ತಮಗೆ ಕೆಮ್ಮಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂದಿದ್ದಾರೆ. ಆದರೆ ಅವರನ್ನು ಚೆಕ್‌ ಮಾಡಿದ ಅಧಿಕಾರಿಗಳು ನಿಮಗೆ ಏನೂ ಆಗಿಲ್ಲ, ಎಲ್ಲವೂ ಸರಿಯಾಗಿದೆ ಎಂದಿದ್ದಾರೆ. ನಂತರ ತಮ್ಮ ಬ್ಯಾಗ್‌ನಲ್ಲಿದ್ದ ಪಾಸಿಟಿವ‌ ರಿಪೋರ್ಟ್‌ ತೋರಿಸಿದ ಮೇಲೆ ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ!

    ಕೂಡಲೇ ಅವರನ್ನು ಆರೋಗ್ಯ ಇಲಾಖೆಗೆ ಕಳುಹಿಸಲಾಯಿತು. ಇದೀಗ ವಿಮಾನದಲ್ಲಿನ ಎಲ್ಲಾ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗುತ್ತಿದೆ.
    ಇದೇ ಕಾರಣಕ್ಕೆ ವಿಮಾನಯಾನವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ವಿಮಾನ ಪ್ರಯಾಣ ಆರಂಭಿಸಿ ಸಂಕಷ್ಟಕ್ಕೆ ಈಡಾಗುವ ಪರಿಸ್ಥಿತಿ ಬಂದಿದೆ. ಈ ಕುರಿತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್‌)

    ಅತ್ತಿಗೆ ಜತೆ ಸಲುಗೆ ತೋರಿ ಬೀದಿ ಹೆಣವಾದ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts