More

    ಸಂಕಷ್ಟ ಸೂತ್ರ ಇಲ್ಲವೆಂದ ಮೇಲೆ ತಮಿಳುನಾಡಿಗೆ ಯಾವ ಆಧಾರದ ಮೇಲೆ ನೀರು ಬಿಟ್ಟರು: ಮಾಜಿ ಸಿಎಂ ಎಚ್​ಡಿಕೆ

    ರಾಮನಗರ: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸಂಕಷ್ಟ ಸೂತ್ರ ಇಲ್ಲದಿರುವ ಸಮಯದಲ್ಲಿ ಇವರು ಯಾವ ಆಧಾರದ ಮೇಲೆ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್​ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    ಚನ್ನಪಟ್ಟಣ್ಣದಲ್ಲಿ ಈ ಕುರಿತು ಮಾತನಾಡಿದ ಮಾಜಿ ಸಿಎಂ ಎಚ್​ಡಿಕೆ ಸಂಕಷ್ಟ ಸೂತ್ರವನ್ನು ರೂಪಿಸಬೇಕಾದವರು ಯಾರು ಅದಕ್ಕೆ ರಾಜ್ಯ ಏನು ಮಾಡಬೇಕು ಎಂದು ಆಲೋಚನೆ ಮಾಡದೆ ಹೇಳಿಕೆಗಳನ್ನು ಕೊಡುತ್ತಿದ್ದರೆ ಉಪಯೋಗ ಏನು ಎಂದು ಪ್ರಶ್ನಿಸಿದ್ದಾರೆ.

    ಸಂಕಷ್ಟ ಸೂತ್ರ ರಚನೆಗೆ ರಾಜ್ಯದಲ್ಲಿ ಇಷ್ಟು ಹೊತ್ತಿಗೆ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಬೇಕಿತ್ತು. ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸಂಕಷ್ಟ ಸೂತ್ರ ಇಲ್ಲದಿರುವಾಗ ಇವರು ಯಾವ ಆಧಾರದ ಮೇಲೆ ತಮಿಳುನಾಡಿಗೆ ನಿರು ಹರಿಸಿದ್ದಾರೆ. ಮೊದಲು ನಾವು ಏನು ಮಾಡಬೇಕು ಎಂದು ಸರ್ಕಾರ ಚಿಂತನೆ ನಡೆಸಿ ಆ ನಂತರ ಮುಂದಿನ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಇದನ್ನೂ ಓದಿ: VIDEO| ಹಳೇ ಸಂಸತ್​ ಭವನಕ್ಕೆ ‘ಸಂವಿಧಾನ ಸದನ’ ಎಮದು ಹೆಸರಿಸಿದ ಪ್ರಧಾನಿ ಮೋದಿ

    ಕಾವೇರಿ ನದಿ ನೀರು ನಿರ್ವಹಣಾ ಹಾಗೂ ನಿಯಂತ್ರಣ ಮಂಡಳಿಯವರು ಏನು ದೇವಲೋಕದಿಂದ ಕೆಳಗಿಳಿದಿದ್ದಾರಾ. ಅವರು ನಾವು ನೇಮಕ ಮಾಡಿಕೊಂಡ ಸದಸ್ಯರು. ಈಗ ನೋಡಿದರೆ ನಮ್ಮ ರಾಜ್ಯದ ಜನರ ಮೇಲೆ ಸವಾರಿ ಮಾಡುತ್ತಿದ್ದಾರೆ. ನಮ್ಮ ಅಧಿಕಾರಿಗಳ ಕೆಲಸ ನೋಡಿದರೆ ಅದು ದೇವರಿಗೆ ಪ್ರೀತಿ. ಅಂಕಿಅಂಶಗಳ ಸಮೇತ ದೆಹಲಿಗೆ ಹೋಗಿ ಚರ್ಚಿಸುವ ಬದಲು ವರ್ಚುವಲ್​ ಮೀಟಿಂಗ್​ನಲ್ಲಿ ಭಾಗಿಯಾಗುತ್ತಾರೆ. ತಮಿಳುನಾಡಿನಿಂದ ಪ್ರತಿಬಾರಿ 15 ಜನ ಅಧಿಕಾರಿಗಳ ತಂಡವೊಂದು ಹೋಗುತ್ತದೆ. ಇದರಿಂದ ನಮಗೆ ನ್ಯಾಯ ಸಿಗಲು ಸಾಧ್ಯವೇ ಎಂದಿದ್ದಾರೆ.

    ಕಾವೇರಿ ವಿಚಾರದಲ್ಲಿ ಏನು ನಡೆದಿದೆ ಎಂದು ಎಲ್ಲರಿಗೂ ಗೊತ್ತಿದೆ. ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಹಾಕಿ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ವಿವರಿಸುವುದನ್ನು ಬಿಟ್ಟು, ಇನ್ನೂ ಅರ್ಜಿ ಹಾಕಲು ಆಲೋಚಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಮತ್ತೊಂದೆಡೆ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಇವರು ಅಣೆಕಟ್ಟು ಬರಿದಾದ ಮೇಲೆ ಕ್ರಮ ಕೈಗೊಳ್ಳುತ್ತಾರಾ. ನೀರಾವರಿ ಬಗ್ಗೆ ಇವರಿಗೆ ತಿಳುವಳಿಕೆ ಇಲ್ಲದಿದ್ದರೆ ಇದರ ಬಗ್ಗೆ ಗೊತ್ತಿರುವವರ ಹತ್ತಿರ ಸಲಹೆಯನ್ನು ಪಡೆದು ಮುನ್ನಡೆಯಬೇಕಿತ್ತು ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರ ಹೆಸರೇಳದೆ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts