More

    ಸಿರಿಂಜ್​ಗಳಲ್ಲಿ ಮಾಡಿದ ಗಣಪ, ಇದರ ಹಿಂದಿದೆ ಒಂದೊಳ್ಳೆ ಉದ್ದೇಶ

    ತ್ರಿಪುರಾ: ಭಾರತದಲ್ಲಿ ವೈಭವದಿಂದ ಆಚರಿಲ್ಪಡುವ ಹಬ್ಬ ಎಂದರೆ ಅದು ಗಣೇಶ ಚತುರ್ಥಿ. ಸಾಮಾನ್ಯವಾಗಿ ಈ ಹಬ್ಬ ಭಾದ್ರಪದ ಚೌತಿಯ ದಿನದಂದು ಬರುತ್ತದೆ. ಗಣೇಶ ಭೂಲೋಕಕ್ಕೆ ಬಂದ ದಿನವನ್ನು ವಾರಗಟ್ಟಲೆ ಸಂಭ್ರಮದಿಂದ ಆಚರಿಸುವುದು ಅನಾದಿ ಕಾಲದಿಂದಲೂ ರೂಢಿಯಲ್ಲಿದೆ.

    ಇನ್ನು ಗಣೇಶ ಹಬ್ಬ ಶುರುವಾಗುವುದಕ್ಕಿಂತಲೂ ಒಂದು ತಿಂಗಳು ಮುನ್ನ ಮಾರುಕಟ್ಟೆಗೆ ಬಗೆಬಗೆಯ ಗಣಪನ ಮೂರ್ತಿಗಳು ಲಗ್ಗೆ ಇಡುತ್ತವೆ. ಪ್ರತಿ ಬಾರಿ ಮಾರಾಟಗಾರರು ಒಂದಿಲ್ಲೊಂದು ವಿಶಿಷ್ಟ ಹಾಗೂ ಹೊಸ ಬಗೆಯ ಮೂರ್ತಿಯನ್ನು ಮಾಡುವ ಮೂಲಕ ಹೆಚ್ಚು ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಾರೆ.

    ಇದೀಗ ವ್ಯಕ್ತಿಯೊಬ್ಬರು ಸಿರಿಂಜ್​ಗಳಲ್ಲಿ ಗಣಪನ ಮೂರ್ತಿಯನ್ನು ತಯಾರಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ವೃತ್ತಿಯಲ್ಲಿ ಸರ್ಕಾರಿ ಶಾಲೆ ಶಿಕ್ಷಕರಾಗಿರುವ ಸಮಿರನ್​ ದೇ ಕಳೆದ 25 ವರ್ಷಗಳಿಂದ ಗಣಪನ ಮೂರ್ತಿಯನ್ನು ಮಾಡುತ್ತ ಬಂದಿದ್ದಾರೆ. ಪ್ರತಿ ಬಾರಿಯೂ ತಮ್ಮ ಕೆಲಸದ ಮೂಲಕ ದೇರವರು, ಸಂದೇಶ ಸಾರುತ್ತಿದ್ದಾರೆ.

    Syringe Ganesha

    ಇದನ್ನೂ ಓದಿ: VIDEO| ಮಹಿಳಾ ಮೀಸಲಾತಿ ಮಸೂದೆ ನಮ್ಮದು: ಸೋನಿಯಾ ಗಾಂಧಿ

    ಈ ಕುರಿತು ಮಾತನಾಡಿರುವ ಮೂರ್ತಿ ತಯಾರಕರಾದ ಸಮಿರನ್ ದೇರವರು, ಇತ್ತೀಚಿನ ವರ್ಷಗಳಲ್ಲಿ ಯುವ ಪೀಳಿಗೆಯೂ ಹೆಚ್ಚಾಗಿ ಮಾದಕ ವಸ್ತುಗಳಿಗೆ ವ್ಯಸನಿಯಾಗುತ್ತಿದ್ದಾರೆ. ಮಾದಕ ವಸ್ತುಗಳಿಂದ ಆಗುವ ಅಪಾಯಗಳ ಕುರಿತು ಸಂದೇಶ ಸಾರಲು ಸಿರಿಂಜ್​ಗಳನ್ನು ಬಳಸಿ ಈ ಬಾರಿ ಗಣೇಶನ ವಿಗ್ರಹವನ್ನು ಮಾಡಿದ್ಧೇವೆ.

    ಮಾದಕ ವಸ್ತುಗಳು ತಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಮೊದಲಿಗೆ ಯುವ ಪೀಳಿಗೆ ಅರ್ಥ ಮಾಡಿಕೊಳ್ಳಬೇಕು. ಯಾರಾದರೂ ಒಬ್ಬರು ಮಾದಕ ವಸ್ತುಗಳನ್ನು ಸೇವಿಸುತ್ತಿದ್ದರೆ ಅದು ಅವರ ಇಡೀ ಕುಟುಂಬವನ್ನು ಹಾಳು ಮಾಡುತ್ತದೆ. ಯುವಕರು ಮುಂದಿನ ಪೀಳಿಗೆಯ ಭವಿಷ್ಯವಾಗಿರುವುದರಿಂದ ಅವರಲ್ಲಿ ಜಾಗೃತಿ ಮೂಡಿಸಲು ಈ ಬಾರಿ ಸಿರಿಂಜ್​ಗಳಿಂದ ಗಣೇಶನ ಮೂರ್ತಿಯನ್ನು ಮಾಡುತ್ತಿದ್ದೇವೆ ಎಂದು ಸಮಿರನ್​ ದೇ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts