More

  ನುಹ್​ ಹಿಂಸಾಚಾರ; ಕಾಂಗ್ರೆಸ್​ ಶಾಸಕ ಮಾಮ್ಮನ್​ ಖಾನ್​ ನ್ಯಾಯಾಂಗ ವಶಕ್ಕೆ

  ನುಹ್​: ಜುಲೈ 31ರಂದು ಹರಿಯಾಣದ ನುಹ್​ನಲ್ಲಿ ವಿಶ್ವ ಹಿಂದೂ ಪರಿಷತ್​ ರ್‍ಯಾಲಿ ವೇಳೆ ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್​ ಶಾಸಕ ಮಾಮ್ಮನ್​ ಖಾನ್​ರನ್ನು ನ್ಯಾಯಾಲಯ 14ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

  ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಮಾಮ್ಮನ್​ ಖಾನ್​ ಅವರ ವಿರುದ್ಧ ಆಗಸ್ಟ್​ 1ರಂದು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳು ದೂರಿನನ್ವಯ ರಾಜಸ್ಥಾನದಲ್ಲಿ ತಲೆಮಾರಿಸಿಕೊಂಡಿದ್ದ ಕಾಂಗ್ರೆಸ್​ ಶಾಸಕನನ್ನು ಸಪ್ಟೆಂಬರ್​ 14ರಂದು ವಶಕ್ಕೆ ಪಡೆದಿತ್ತು.

  ಖಾನ್​ ಅವರನ್ನು ಬಂಧಿಸಿದ ತನಿಖಾ ತಂಡದ ಅಧಿಕಾರಿಗಳು ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಐದು ದಿನಗಳ ಕಾಲ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಬಳಿಕ ನ್ಯಾಯಾಲಯ ಎರಡು ದಿನ ವಶಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿತ್ತು. ತನಿಖೆಗೆ ಸಹಕರಿಸುತ್ತಿಲ್ಲ ಎಂದು ಖಾನ್​ ವಿರುದ್ಧ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಸೋಮವಾರ ಆರೋಪಿಸಿದ್ದರು. ಅಧಿಕಾರಿಗಳ ಆರೋಪದ ಬೆನ್ನಲ್ಲೇ ನ್ಯಾಯಾಲಯ ಅವರನ್ನು 14ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts