More

    3ನೇ ತ್ರೈಮಾಸಿಕದಲ್ಲಿ ನಿರೀಕ್ಷೆ ಮೀರಿದ ಎಚ್‌ಡಿಎಫ್‌ಸಿ ಬ್ಯಾಂಕ್ ಫಲಿತಾಂಶ: ಶೇ. 34ರಷ್ಟು ಏರಿಕೆಯೊಂದಿಗೆ ರೂ. 16,373 ಕೋಟಿ ಲಾಭ

    ನವದೆಹಲಿ: ಪ್ರಸ್ತುತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ ಅಂದಾಜು ಶೇಕಡಾ 34ರಷ್ಟು ಏರಿಕೆಯೊಂದಿಗೆ 16,373 ಕೋಟಿ ರೂಪಾಯಿಗಳಿಗೆ ತಲುಪಿದೆ.

    ಈ ಕುರಿತು ಮಂಗಳವಾರ ವರದಿ ಬಿಡುಗಡೆಯಾಗಿದ್ದು, ವಿಶ್ಲೇಷಕರು ಊಹಿಸಿದ್ದಕ್ಕಿಂತ ಉತ್ತಮ ಫಲಿತಾಂಶವನ್ನು ಬ್ಯಾಂಕ್​ ನೀಡಿದೆ.

    ನಿವ್ವಳ ಬಡ್ಡಿ ಆದಾಯವು 28,471.34 ಕೋಟಿ ರೂ.ಗಳಾಗಿದ್ದು, ಇದು ಶೇಕಡಾ 24ರಷ್ಟು ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಇದರ ಹೊರತಾಗಿಯೂ,

    ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ, ಲಾಭವು 2.5 ಶೇಕಡಾ ಹೆಚ್ಚಳವನ್ನು ಕಂಡಿದ್ದು, ನಿವ್ವಳ ಬಡ್ಡಿ ಆದಾಯವು ಅಂದಾಜು ಶೇಕಡಾ 4ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

    ಡಿಸೆಂಬರ್ ಅಂತ್ಯದ ವೇಳೆಗೆ, ಒಟ್ಟು ಅನುತ್ಪಾದಕ ಆಸ್ತಿಗಳ (ಜಿಎನ್‌ಪಿಎ) ಅನುಪಾತವು ಶೇಕಡಾ 1.26 ರಷ್ಟಿದೆ. ಇದು ವರ್ಷದ ಹಿಂದೆ ಶೇಕಡಾ 1.23 ಮತ್ತು ಕಳೆದ ತ್ರೈಮಾಸಿಕದಲ್ಲಿ ಶೇಕಡಾ 1.34 ರಷ್ಟಿತ್ತು.

    ನಿವ್ವಳ ಅನುತ್ಪಾದಕ ಆಸ್ತಿಗಳ (ಎನ್​ಎನ್​ಪಿಎ) ಅನುಪಾತವು ಶೇಕಡಾ 0.31 ರಷ್ಟಿದೆ. ಒಂದು ವರ್ಷದ ಹಿಂದೆ ಇದು ಶೇಕಡಾ 0.33 ಮತ್ತು ಕಳೆದ ತ್ರೈಮಾಸಿಕದಲ್ಲಿ ಶೇಕಡಾ 0.35 ರಷ್ಟಿತ್ತು.

    ತ್ರೈಮಾಸಿಕದಲ್ಲಿ, ಇತರ ಆದಾಯವು 11,137 ಕೋಟಿ ರೂ.ಗಳಾಗಿದ್ದು, ಒಂದು ವರ್ಷದ ಹಿಂದೆ ಇದು ಸರಿಸುಮಾರು 8,500 ಕೋಟಿ ರೂಪಾಯಿ ಇತ್ತು.

    ತ್ರೈಮಾಸಿಕದಲ್ಲಿ ನಿರ್ವಹಣಾ ವೆಚ್ಚಗಳು ಒಟ್ಟು 15,961 ಕೋಟಿ ರೂ.ಗಳಾಗಿದ್ದು, ವರ್ಷದ ಹಿಂದೆ ಇದು 12,464 ಕೋಟಿ ರೂ. ಇತ್ತು.

    ಡಿಸೆಂಬರ್ ಅಂತ್ಯದ ವೇಳೆಗೆ ಎಚ್​ಡಿಎಫ್​ಸಿ ಬ್ಯಾಂಕಿನ ಒಟ್ಟು ಬ್ಯಾಲೆನ್ಸ್ ಶೀಟ್ ಗಾತ್ರವು 34.93 ಲಕ್ಷ ಕೋಟಿ ರೂಪಾಯಿಗಳಾಗಿದೆ. ವರ್ಷದ ಹಿಂದೆ ಇದು 22.95 ಲಕ್ಷ ಕೋಟಿ ರೂಪಾಯಿ ಆಗಿತ್ತು.

    ಒಟ್ಟು ಠೇವಣಿಗಳು ವರ್ಷಕ್ಕೆ ಅಂದಾಜು 28 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ 22.14 ಲಕ್ಷ ಕೋಟಿ ರೂ. ತಲುಪಿದೆ.

    ಡಿಸೆಂಬರ್ ಅಂತ್ಯದ ವೇಳೆಗೆ ಒಟ್ಟು ಮುಂಗಡಗಳು ರೂ 24.69 ಲಕ್ಷ ಕೋಟಿಗಳನ್ನು ತಲುಪಿದ್ದು, ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 62 ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಸೂಚಿಸುತ್ತದೆ. ಕಳೆದ ತ್ರೈಮಾಸಿಕದಲ್ಲಿ ದೇಶೀಯ ಚಿಲ್ಲರೆ ಸಾಲಗಳು ದುಪ್ಪಟ್ಟಾಗಿದೆ, ವಾಣಿಜ್ಯ ಮತ್ತು ಗ್ರಾಮೀಣ ಬ್ಯಾಂಕಿಂಗ್ ಸಾಲಗಳು ಶೇಕಡಾ 31 ಕ್ಕಿಂತ ಹೆಚ್ಚಿವೆ.

    ಫೋನ್ ಚಾರ್ಜ್​ ಮಾಡುವ ಅಗತ್ಯವೇ ಇಲ್ಲ: ಶೀಘ್ರದಲ್ಲೇ ಬರಲಿದೆ 50 ವರ್ಷ ತಾಳಿಕೆ ಬರುವ ಬ್ಯಾಟರಿ!!

    ವಿಮಾನ ನಿಲ್ದಾಣಗಳಲ್ಲಿ ವಾರ್​ ರೂಂ ಸ್ಥಾಪನೆ: ಹೊಸ ನಿಯಮಾವಳಿ ಘೋಷಿಸಿದ ವಿಮಾನಯಾನ ಸಚಿವ ಸಿಂಧಿಯಾ

    ಸೋದರನ ವಿರುದ್ಧ ಸೋದರಿ ಅಖಾಡಾಕ್ಕೆ: ಆಂಧ್ರದಲ್ಲಿ ಶರ್ಮಿಳಾ ನೇಮಕದಿಂದ ಕಾಂಗ್ರೆಸ್​ ಲಾಭವಾಗುವುದೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts