More

    ವರದಾ ನದಿಗೆ ತೋಟದ ನೀರು ಹರಿಸಿದ ರೈತ !; ಸಂಗೂರ ಗ್ರಾಮದ ರೈತ ಭುವನೇಶ್ವರ ಕಳಕಳಿಗೆ ಗ್ರಾಮಸ್ಥರ ಶ್ಲಾಘನೆ

    ಹಾವೇರಿ: ಬರಗಾಲದಿಂದಾಗಿ ಬರಿದಾಗಿರುವ ವರದಾ ನದಿಗೆ ತಮ್ಮ ತೋಟದ ಬೋರ್‌ವೆಲ್ ನೀರನ್ನು ಹರಿಸುವ ಮೂಲಕ ತಾಲೂಕಿನ ಸಂಗೂರ ಗ್ರಾಮದ ರೈತ ಭುವನೇಶ್ವರ ಶಿಡ್ಲಾಪುರ ಅವರು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
    ಮಳೆಯ ಕೊರತೆಯಿಂದಾಗಿ ವರದೆಯ ಒಡಲು ಬತ್ತಿ ತಿಂಗಳುಗಳ ಮೇಲಾಗಿದೆ. ಸಂಗೂರ ಗ್ರಾಮದಲ್ಲಿ ನಿರ್ಮಿಸಿದ್ದ ಬ್ಯಾರೇಜ್ ಬಳಿಯೂ ನೀರು ಖಾಲಿಯಾಗಿತ್ತು. ಇದರಿಂದ ದನ ಕರುಗಳಿಗೆ, ಪ್ರಾಣಿ ಪಕ್ಷಿಗಳು ಕಂಗಾಲಾಗಿದ್ದವು. ಇದನ್ನು ಮನಗಂಡ ಭುವನೇಶ್ವರ ಅವರು ಇತ್ತೀಚೆಗೆ ತಮ್ಮ ತೋಟದಲ್ಲಿ ಕೊಳವೆಬಾವಿ ಕೊರೆಸಿ, ಮೋಟಾರ್ ಅಳವಡಿಸಿದ್ದಾರೆ. ಒಂದು ವಾರದಿಂದ ನಿತ್ಯವೂ ವರದೆಗೆ ಆರು ತಾಸುಗಳ ಕಾಲ ನೀರು ಹರಿಸುತ್ತಿದ್ದಾರೆ.
    ನದಿ ದಂಡೆಯಲ್ಲಿ ನಮ್ಮ ತೋಟವಿದೆ. ಮಳೆಗಾಲದಲ್ಲಿ ನದಿಯಲ್ಲಿ ನೀರು ಇರುವ ಸಂದರ್ಭದಲ್ಲಿ ನದಿಯ ನೀರನ್ನು ತೋಟಕ್ಕೆ ಬಳಸುತ್ತೇವೆ. ಬರಗಾಲಿ ಇರುವ ಕಾರಣ ನದಿಯಲ್ಲಿ ನೀರು ಇಲ್ಲದಾಗಿದೆ. ಹಾಗಾಗಿ, ನನ್ನಿಂದ ಇದೊಂದು ಅಳಿಲು ಸೇವೆ ಎಂದು ಮಾಡುತ್ತಿದ್ದೇನೆ. ಹಗಲು ಎರಡು ತಾಸು, ರಾತ್ರಿ ಮೂರು ತಾಸು ಕರೆಂಟ್ ಬರುತ್ತದೆ. ಅದು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಇದರಿಂದ ಬೋರ್‌ವೆಲ್‌ನಿಂದ ಬೆಳೆ ರಕ್ಷಿಸಿಕೊಳ್ಳುತ್ತಿರುವ ರೈತರಿಗೆ ಸಮಸ್ಯೆಯಾಗಿದೆ. ಸರ್ಕಾರ ರೈತರ ಪಂಪಸೆಟ್‌ಗಳಿಗೆ ನಿಯಮದ ಪ್ರಕಾರ ಏಳು ತಾಸು ವಿದ್ಯುತ್ ಒದಗಿಸಬೇಕು ಎಂದು ಭುವನೇಶ್ವರ ಶಿಡ್ಲಾಪುರ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts