More

    PBKS vs DC, IPL 2024: ಫೀಲ್ಡಿಂಗ್ ವೇಳೆ ಗಾಯಗೊಂಡ ಇಶಾಂತ್​ ಶರ್ಮಾ! ಮುಂದಿನ ಪಂದ್ಯದಲ್ಲಿ ಅಲಭ್ಯ?

    ನವದೆಹಲಿ: ಐಪಿಎಲ್ 2024ರ ಆವೃತ್ತಿಗೆ ನಿನ್ನೆ (ಮಾ.22) ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಅದ್ದೂರಿ ಚಾಲನೆ ಸಿಕ್ಕಿದ್ದು, ಕಿಕ್​ಸ್ಟಾರ್ಟ್​ ಪಂದ್ಯದಲ್ಲಿ ಮುಖಾಮುಖಿ ಸೆಣಸಾಡಿದ ಆರ್​ಸಿಬಿ ಮತ್ತು ಸಿಎಸ್​ಕೆ ಪೈಕಿ ಎಂದಿನಂತೆ ಧೋನಿ ಪಡೆ ಭರ್ಜರಿ ಗೆಲುವು ದಾಖಲಿಸಿತು. ಇಂದು ಎರಡನೇ ಪಂದ್ಯದಲ್ಲಿ ಶಿಖರ್ ಧವನ್​ ನಾಯಕತ್ವದ ಪಂಜಾಬ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಕಡೆಯ ಓವರ್​ನಲ್ಲಿ ಫೀಲ್ಡಿಂಗ್ ​ಮಾಡುವಾಗ ಡೆಲ್ಲಿ ಕ್ಯಾಪಿಡಲ್ಸ್​ ವೇಗಿ ಇಶಾಂತ್ ಪಾದ ಉಳುಕಿದೆ.

    ಇದನ್ನೂ ಓದಿ: ಮಕ್ಕಳ ಹಿತಾಸಕ್ತಿ ಕಾಪಾಡಲು ಕೆಲಸ ಮಾಡಬೇಕು; ನ್ಯಾಯಾಧೀಶ ಪುಟ್ಟರಾಜು ಸಲಹೆ

    ಇಂದು ಮುಲ್ಲನ್‌ಪುರ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆಡುವಾಗ ಪಾದ ತಿರುಚಿದ್ದು, ತಕ್ಷಣವೇ ನೆಲಕ್ಕೆ ಕುಸಿದ ಇಶಾಂತ್ ಶರ್ಮಾರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಲಾಯಿತು. ತನ್ನ ಮೊದಲ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ವಿರುದ್ಧ ಹೀನಾಯ ಸೋಲು ಅನುಭವಿಸಿತು.

    ಪಂಜಾಬ್ ರನ್ ಚೇಸ್ ಮಾಡುವಾಗ ಪವರ್ ಪ್ಲೇನ ಅಂತಿಮ ಓವರ್‌ನಲ್ಲಿ ಶರ್ಮಾ ಫೀಲ್ಡಿಂಗ್ ಮಾಡುತ್ತಿದ್ದ ಡೀಪ್ ಮಿಡ್ ವಿಕೆಟ್ ಕಡೆಗೆ ಮಿಚೆಲ್ ಮಾರ್ಷ್ ಎಸೆತವನ್ನು ಪ್ರಭಾಸಿಮ್ರಾನ್ ಹೊಡೆದಾಗ ಈ ಘಟನೆ ಸಂಭವಿಸಿದೆ. ಬಾಲ್​ ತಡೆಯಲು ಮುಂದಾದಾಗ ಬಲ ಪಾದ ತಿರುಗಿದೆ. ಕೂಡಲೇ ನಲಕ್ಕೆ ಕುಸಿದು, ನೋವಿನಿಂದ ಬಳಲುತ್ತಿದ್ದ ಶರ್ಮಾರನ್ನು ತಂಡದ ಫಿಸಿಯೋಥೆರಪಿಸ್ಟ್ ಪ್ಯಾಟ್ರಿಕ್ ಫರ್ಹತ್ ಡ್ರೆಸ್ಸಿಂಗ್​ ರೂಮ್​ಗೆ ಕರೆದೊಯ್ದಿದ್ದಾರೆ.

    ಇದನ್ನೂ ಓದಿ: ಇದು ನಿಮಗೆ ಶೋಭೆ ತರಲ್ಲ! ಜಯಪ್ರಕಾಶ್ ಹೆಗ್ಡೆಗೆ ಆರ್​. ಅಶೋಕ ಟಾಂಗ್​

    ಡೆಲ್ಲಿ ಕ್ಯಾಪಿಟಲ್ಸ್​ ನೀಡಿದ 175 ರನ್ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್​ 5.3 ಓವರ್‌ಗಳಲ್ಲಿ 2 ವಿಕೆಟ್‌ಗೆ 59 ರನ್ ಗಳಿಸಿತ್ತು. ಇಶಾಂತ್ ಶರ್ಮಾ ಗಾಯಗೊಂಡ ಬೆನ್ನಲ್ಲೇ ಅವರ ಬದಲಿಗೆ ಪ್ರವೀಣ್ ದುಬೆ ಬದಲಿ ಫೀಲ್ಡರ್ ಆಗಿ ಕಣಕ್ಕಿಳಿದರು. ಕಡೆಗೆ 177 ರನ್​ ಸಿಡಿಸುವ ಮೂಲಕ ಡೆಲ್ಲಿ ವಿರುದ್ಧ ಪಂಜಾಬ್​ ಗೆದ್ದು ತನ್ನ ಖಾತೆಯನ್ನು ತೆರೆದಿದೆ,(ಏಜೆನ್ಸೀಸ್).

    ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

    ಕೂದಲು ಸೊಂಪಾಗಿ, ದಟ್ಟವಾಗಿ ಬೆಳೆಯಬೇಕಾ? ಹಾಗಾದ್ರೆ ಇದನ್ನು ಟ್ರೈ ಮಾಡುವುದೇ ಬೆಸ್ಟ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts