More

    ಇದು ನಿಮಗೆ ಶೋಭೆ ತರಲ್ಲ! ಜಯಪ್ರಕಾಶ್ ಹೆಗ್ಡೆಗೆ ಆರ್​. ಅಶೋಕ ಟಾಂಗ್​

    ಬೆಂಗಳೂರು: ಲೋಕ ಸಮರಕ್ಕೆ ಸಿದ್ದರಾಗಿರುವ ಅಭ್ಯರ್ಥಿಗಳಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್​ನಿಂದ ಜಯಪ್ರಕಾಶ್​ ಹೆಗ್ಡೆ ಭರ್ಜರಿ ಪೈಪೋಟಿ ಕೊಡಲು ಸಜ್ಜಾಗಿದ್ದಾರೆ. ಇನ್ನು ಈ ಮಧ್ಯೆ ಕೋಟಾಗೆ ಹಿಂದಿ, ಆಂಗ್ಲ ಭಾಷೆ ಮಾತನಾಡಲು ಬರುವುದಿಲ್ಲ. ಹಾಗಾಗಿ ಅವರನ್ನು ಗೆಲ್ಲಿಸುವುದರಲ್ಲಿ ಅರ್ಥವಿಲ್ಲ ಎಂದು ಹೆಗ್ಡೆ ಕೊಟ್ಟ ಹೇಳಿಕೆ ಸದ್ಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

    ಇದನ್ನೂ ಓದಿ: ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಚುನಾವಣಾ ಸಾಕ್ಷರತೆ ಅಗತ್ಯ

    ಜಯಪ್ರಕಾಶ್​ ಹೆಗ್ಡೆ ಹೇಳಿಕೆಯನ್ನು ಟೀಕಿಸಿದ ವಿಪಕ್ಷ ನಾಯಕ ಆರ್​. ಅಶೋಕ, “ನೆಹರೂ-ಗಾಂಧಿ ಕುಟುಂಬದ ಏಜೆಂಟುಗಳು, ಹೈಕಮಾಂಡ್ ಕಲೆಕ್ಷನ್ ಗಿರಾಕಿಗಳ ಜತೆ ವ್ಯವಹಾರ ಮಾಡೋಕೆ ಇಟಾಲಿಯನ್, ಇಂಗ್ಲೀಷ್, ಹಿಂದಿ ಭಾಷೆಗಳು ಬರಲೇಬೇಕು ಎನ್ನುವುದು ಕಾಂಗ್ರೆಸ್ ಪಕ್ಷದಲ್ಲಿ ಅನಿವಾರ್ಯ ಇರಬಹುದು. ಆದರೆ ಮಾತೃಭಾಷೆಗೆ, ಸಂವಿಧಾನಕ್ಕೆ ಗೌರವ ಕೊಡುವ ನಮ್ಮ ಬಿಜೆಪಿ ಪಕ್ಷದಲ್ಲಿ ಕನ್ನಡ ಬಂದರೆ ಸಾಕು, ದೆಹಲಿ ರಾಜಕಾರಣವೂ ಮಾಡಬಹುದು, ಎಂತಹ ಉನ್ನತ ಸ್ಥಾನ ಬೇಕಾದರೂ ಅಲಂಕರಿಸಬಹುದು” ಎಂದರು.

    “ಅತ್ಯಂತ ಬಡ ಕುಟುಂಬದಿಂದ ಬಂದ ಒಬ್ಬ ಸರಳ, ಸಜ್ಜನಿಕೆಯ ರಾಜಕಾರಣಿ ಎಂದು ಇಡೀ ರಾಜ್ಯದಲ್ಲಿ ಗೌರವಕ್ಕೆ ಪಾತ್ರರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರ ಎದುರು ಚುನಾವಣೆ ಎದುರಿಸಲಾಗದೆ ಹತಾಶೆಯಿಂದ ಈ ರೀತಿ ವೈಯಕ್ತಿಕ ನಿಂದನೆ ಮಾಡುವುದು ನಿಮಗೆ ಶೋಭೆ ತರುವುದಿಲ್ಲ ಜಯಪ್ರಕಾಶ್ ಹೆಗ್ಡೆ ಅವರೇ” ಎಂದಿದ್ದಾರೆ.

    ಇದನ್ನೂ ಓದಿ: ಸಿದ್ದರಾಮೇಶ್ವರ, ಮಾಲರಸಮ್ಮನ ದೇವಸ್ಥಾನದ ಕಮಾನು ಉದ್ಘಾಟನೆ

    “ಕನ್ನಡದ ನೆಲ, ಜಲ, ಭಾಷೆ ಬಗ್ಗೆ ಸದಾ ತಾತ್ಸಾರ ತೋರುವ ಕಾಂಗ್ರೆಸ್​ ಪಕ್ಷಕ್ಕೆ ಸೇರಿದ ನಂತರ ಜಯಪ್ರಕಾಶ್ ಹೆಗ್ಡೆ ಅವರಿಗೂ ಆ ಗಾಳಿ ಸೋಕಿರುವುದು ಅಚ್ಚರಿಯೇನಲ್ಲ. ಆದರೂ ಜಯಪ್ರಕಾಶ್​ ಈ ಮಟ್ಟಕ್ಕೆ ಇಳಿದು ಪ್ರಚಾರ ನಡೆಸುತ್ತಿದ್ದಾರೆ ಎಂದರೆ ಚುನಾವಣೆಗೂ ಮುನ್ನವೇ ಸೋಲನ್ನು ಒಪ್ಪಿಕೊಂಡಿರುವಂತಿದೆ” ಎಂದು ಟೀಕಿಸಿದರು.

    ‘ಇದೆಲ್ಲವೂ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ’; ಕಡೆಗೂ ಮೌನ ಮುರಿದ ಚಹಲ್ ಪತ್ನಿ!

    ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts