More

    ಡಿವೈಎಸ್​ಪಿ ಅಕೌಂಟ್​ನಿಂದಲೇ ಲಕ್ಷ ಲಕ್ಷ ಹಣ ಎಗರಿಸಿದ ಸೈಬರ್​ ವಂಚಕರು

    ಹಾಸನ: ಇತ್ತೀಚಿನ ವರ್ಷಗಳಲ್ಲಿ ಸೈಬರ್​ ವಂಚಕರ ಹಾವಳಿ ಮಿತಿಮೀರಿದ್ದು, ಎಷ್ಟೇ ಎಚ್ಚರ ವಹಿಸಿದರು ಒಂದಲ್ಲ ಒಂದು ರೀತಿ ಜನ ವಂಚಕರ ಗಾಳಕ್ಕೆ ಬಿದ್ದು, ಹಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಸೈಬರ್​ ವಂಚನೆಗೆ ಸಂಬಂಧಿಸಿದಂತೆ ಖದೀಮರು ಡಿವೈಎಸ್​ಪಿಯೊಬ್ಬರ ಬ್ಯಾಂಕ್​ ಖಾತೆಗೆ ಕನ್ನ ಹಾಕಿ ಅವರ ಅರಿವಿಗೆ ಬಾರದಂತೆ 15,98,761 ರೂ. ವರ್ಗಾವಣೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

    ಹಾಸನ ಉಪವಿಭಾಗದ ಡಿವೈಎಸ್​ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಪಿ.ಕೆ.ಮುರಳೀಧರ್ ಅವರ ಎರಡು ಬ್ಯಾಂಕ್​ ಖಾತೆಗಳಿಂದ ವಂಚಕರು 15,98,761 ರೂ. ವರ್ಗಾವಣೆ ಮಾಡಿಕೊಂಡಿದ್ದಾರೆ. ಈಗ ಅಧಿಕಾರಿಯೇ ಹಣವನ್ನು ಕಳೆದುಕೊಂಡು ಸ್ವತಃ ದೂರಿನೊಂದಿಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

    ಇದನ್ನೂ ಓದಿ: ಧೋನಿ-ರೋಹಿತ್​-ಕೊಹ್ಲಿ ಕೈಯಲ್ಲಿ ಸಾಧ್ಯವಾಗದ ದಾಖಲೆಯನ್ನು ನಿರ್ಮಿಸಿದ ಶ್ರೇಯಸ್​ ಅಯ್ಯರ್

    ಡಿವೈಎಸ್​ಪಿ ಮುರಳೀಧರ್​ ಅವರು ಮಡಿಕೇರಿ ಹಾಗೂ ಭಾಗಮಂಡಲದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಖಾತೆಯನ್ನು ಹೊಂದಿದ್ದು, ಮೇ 20 ರಂದು ಮಧ್ಯಾಹ್ನ 1:30ರ ಸಮಯದಲ್ಲಿ ಇವರ ಫೋನ್​ಗೆ ಬಂದ ಮೆಸೇಜ್‌ಗಳನ್ನು ನೋಡಿ ಅಘಾತಕ್ಕೊಳಗಾಗಿದ್ದಾರೆ. ಆ ಮೆಸೇಜ್‌ಗಳ ಮೂಲಕ ಖದೀಮರ ಕೈಚಳಕ ಬೆಳಕಿಗೆ ಬಂದಿದೆ. ಡಿವೈಎಸ್‌ಪಿ ಅವರ ಗಮನಕ್ಕೆ ಬಾರದೆ ಈ ಎರಡೂ ಖಾತೆಗಳಿಂದ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ.

    ಎರಡು ಬ್ಯಾಂಕ್​ ಖಾತೆಗಳಿಂದ 15,98,761 ರೂ.  ಗಳನ್ನು ವಂಚಕರು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಾಸನದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿರುವ ಡಿವೈಎಸ್​ಪಿ, ಆನ್‌ಲೈನ್ ಖದೀಮರನ್ನು ಪತ್ತೆ ಮಾಡಿ ಹಣ ವಾಪಸ್ ಕೊಡಿಸುವಂತೆ ಮತ್ತು ಖದೀಮರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts