More

    ಹರ್ಲಾಪುರ ಎಸ್ಸಿ ಎಸ್ಟಿ ಕಾಲೋನಿ ರೋಗಗ್ರಸ್ತ

    ವಿಜಯವಾಣಿ ವಿಶೇಷ ಗದಗ
    ಗದಗ ತಾಲೂಕು ರೋಣ ವಿಧಾಸಭಾ ಕ್ಷೇತ್ರದ ಹರ್ಲಾಪುರ ಗ್ರಾಮದ ಎಸ್ಸಿ, ಎಸ್ಟಿ ಕಾಲೋನಿ(ಅಂಬೇಡ್ಕರ ನಗರ) ಸಂರ್ಪೂಣ ರೋಗಗ್ರಸ್ತವಾಗಿದೆ. ಗ್ರಾಮದ ಮುಖ್ಯ ಕಾಲುವೆಯನ್ನು ದಲಿತ ಕಾಲೋನಿ ರಸ್ತೆಯ ಮದ್ಯದಲ್ಲಿಯೇ ನಿರ್ಮಾಣ ಮಾಡಿದ್ದರಿಂದ ಇಲ್ಲಿನ ಜನ ಜೀವನ ಅಸ್ತವ್ಯಸ್ತಗೊಂಡಿದೆ. 100 ಕ್ಕೂ ಅಧಿಕ ಕುಟುಂಬಗಳು ಇಲ್ಲಿ ವಾಸವಿದ್ದು ಮುಖ್ಯ ಕಾಲುವೆ ಮಾರ್ಗವನ್ನು ಬದಲಾಯಿಸುವಂತೆ ಆಗ್ರಹಿಸಿದ್ದಾರೆ.
    ಕಳೆದೊಂದು ವರ್ಷದಿಂದ ಇಲ್ಲಿನ ಜನರು ಗ್ರಾಪಂ ಗೆ ಮನವಿ ಮಾಡುತ್ತಲೇ ಬಂದಿದ್ದು, ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರ ತೆಗೆದು ಕೊಳ್ಳುತ್ತಿಲ್ಲ ಎಂಬುದು ಜನರ ಪ್ರಮುಖ ಆರೋಪ. ಅಹಿಂದ ಮತಗಳ ಬೆಂಬಲದಿಂದಲೇ ಕಾಂಗ್ರೆಸ್​ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ದಲಿತ ಕಾಲಾನಿಗಳ ಅಭಿವೃದ್ಧಿಗೆ ಒತ್ತು ನೀಡುವುದುದೇ ಎಂಬುದು ಜನರ ಮುಂದಿರುವ ಬಹುದೊಡ್ಡ ಪ್ರಶ್ನೆ.
    ಮಳೆಗಾಲದಲ್ಲಿ ಕಾಲುವೆ ತುಂಬಿ ಹರಿದು ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ. ಹೊಲ ಗದ್ದೆಗೆ, ಕೂಲಿಗೆ ತೆರಳು ಸಾಧ್ಯವಾಗುತ್ತಿಲ್ಲ. ಸಾವು ಪ್ರಕರಣಗಳಲ್ಲಿ ಶವವನ್ನು ಕಾಲನಿಯಿಂದ ಹೊರ ತರಲು ಸಾಧ್ಯವೇ ಇಲ್ಲ. ಪ್ರತಿನಿತ್ಯ ಕೊಳಚೆ ನೀರು ಹರಿಯುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಮಕ್ಕಳನ್ನು, ವೃದ್ಧರನ್ನು ಕಾಡುತ್ತಿದೆ. ಹಲವರು ಮುಖ್ಯ ಕಾಲುವೆಗೆ ಬಿದ್ದು ಅಪಘಾತಕ್ಕೀಡಾದ ಉದಾಹರಣೆಗಳೂ ಇವೆ.

    ಸಮಸ್ಯೆ ಏನು?
    ಹರ್ಲಾಪುರ ಗ್ರಾಮದ ತ್ಯಾಜ್ಯ ನೀರು ಹೊರ ಹೋಗಲು ಗ್ರಾಮದ ಅಂಬೇಡ್ಕರ ನಗರದ ರಸ್ತೆ ಮಧ್ಯದಲ್ಲೇ ಮುಖ್ಯ ಕಾಲುವೆ ನಿಮಿರ್ಸಲಾಗಿದೆ. ಇದೊಂದು ಅವೈಜ್ಞಾನಿಕ ಕಾಮಗಾರಿ ಎಂಬುದು ಸ್ಪಷ್ಟ ಗೋಚರಿಸುತ್ತದೆ. ಮುಂದುವರಿದು ಅಂಬೇಡ್ಕರ್​ ನಗರದ ಮಧ್ಯದಲ್ಲಿ ಹರಿಯುವ ಕೊಳಚೆ ನೀರು ಹರಿದು ಮುಂದೆ ಜಂತ್ಲಿ ಶಿರೂರು ಗ್ರಾಮದ ಮುಖ್ಯ ರಸ್ತೆಗೆ ಕೂಡುತ್ತದೆ. ಇದರಿಂದ ಮುಖ್ಯ ರಸ್ತೆಯೂ ಹಾಳಾಗುತ್ತಿದೆ. ಈ ಕಾಲುವೆಯನ್ನು ಗ್ರಾಮದ ಹೊರ ವಲಯದ ತುಪ್ಪಜ ಹಳ್ಳಕ್ಕೆ ಸಂಪರ್ಕ ಕಲ್ಪಿಸಬೇಕು ಎಂದು ಇಲ್ಲಿನ ಜನರ ಆಗ್ರಹ.
    ಕಳೆದ ಮುರು ದಿನಗಳಿಂದ ಗ್ರಾಪಂ ಎದುರು ಅಂಬೇಡ್ಕರ ನಗರದ ಜನ ಪ್ರತಿಭಟನೆ ಕುಳಿತಿದ್ದು, ಕಾಲುವೆಗೆ ಪರ್ಯಾರ ಮಾರ್ಗ ಕಲ್ಪಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಆಗ್ರಹಿಸಿದ್ದಾರೆ.

    ಕೊಳಚೆ ನೀರು ಅಂಗನವಾಡಿಗೆ:
    ಅಂಬೇಡ್ಕರ್​ ನಗರದಲ್ಲಿ ಅಂಗನವಾಡಿ ಇದ್ದು 21 ದಲಿತ ಮಕ್ಕಳು ಇದ್ದಾರೆ. ಮಳೆಗಾಲ ಸಂದರ್ಭದಲ್ಲಿ ಕೊಳಚೆ ನೀರಿನಿಂದ ಈ ಅಂಗನವಾಡಿ ಸಂರ್ಪೂಣ ಜಲಾವೃತ ಆಗುತ್ತದೆ. ಕೊಳಚೆ ನೀರನ್ನು ಅಂಗನವಾಡಿಯಿಂದ ಹೊರ ಹಾಕುವುದೇ ಇಲ್ಲಿನ ಶಿಕ್ಷಕಿಯರಿಗೆ ಪ್ರತಿನಿತ್ಯದ ಕೆಲಸ. ಈ ಸಂದರ್ಭದಲ್ಲಿ ಮಕ್ಕಳಿಗೆ ರಜೆ ನೀಡಿ ನೀರನ್ನು ಹೊರ ತೆಗೆದ ನಂತರ ಮತ್ತೆ ಅಂಗನವಾಡಿ ಆರಂಭಗೊಳ್ಳುವುದು.

    ಕೋಟ್​:
    ಅಂಬೇಡ್ಕರ್​ ಕಾಲನಿಯಲ್ಲಿ ಜ್ಲಂತ ಸಮಸ್ಯೆ ಇರುವುದು ಸತ್ಯ. ಪ್ರಸ್ತುತ 4.34 ಲಕ್ಷ ಕ್ರಿಯಾ ಯೋಜನೆ ಸಿದ್ದವಾಗಿದೆ. ಮುಖ್ಯ ಕಾಲುವೆಗೆ ತಿರುವು ನೀಡಿ ತಕ್ಷಣ ಸಮಸ್ಯೆ ಬಗೆ ಹರಿಸಲಾಗುವುದು. ಮೊದಲಿಂನಿದಲೂ ಗ್ರಾಮದ ಕೊಳಚೆ ನೀರು ನೈಸಗಿರ್ಕವಾಗಿ ನೀರು ಹರಿತ್ತಿತ್ತು. ಈಗ ವಿರುದ್ಧ ದಿಕ್ಕಿನಲ್ಲಿ ನೀರಿಗೆ ತಿರುವು ನೀಡಬೇಕು.
    – ಕೆ.ಎಲ್​. ಪೂಜಾರ
    ತಾಪಂ ಪ್ರಭಾರಿ ಸಹಾಯಕ ನಿರ್ದೇಶಕ

    ಕೋಟ್​:
    ಈ ಸಮಸ್ಯೆ ಕುರಿತು ಶಾಸಕ ಜಿ.ಎಸ್​. ಪಾಟೀಲ ಜತೆ ಮಾತನಾಡಿದ್ದೇವೆ. ಶಾಶ್ವತ ಪರಿಹಾರ ಕಂಡುಕೊಳ್ಳಲು ಅವರು ಸಲಹೆ ನೀಡಿದ್ದಾರೆ. ಮೂರು ತಿಂಗಳು ಕಾಲಾವಧಿಯಲ್ಲಿ ತೆಗೆದುಕೊಂಡು ಅಗತ್ಯ ಇರುವ ಅನುದಾನ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಜನರು ಇಂದೇ ಕಾರ್ಯ ಆರಂಭಿಸಿ ಎನ್ನುತ್ತಿದ್ದಾರೆ.
    – ಸುಮಂಗಲಾ ಚೆಟ್ರಿ
    ಅಧ್ಯಕ್ಷರು. ಗ್ರಾಪಂ. ಹರ್ಲಾಪುರ

    ಕೋಟ್​:
    ಕಳೆದ ಮೂರ್ನಾಲ್ಕು ವರ್ಷದಿಂದ ಆಗ್ರಹಿಸುತ್ತಲೇ ಬಂದಿದ್ದೇವೆ. ಕಾಂಗ್ರೆಸ್​ ಸಕಾರದ ಮೇಲೆ ಸಾಕಷ್ಟು ಭರವಸೆ ಇದ್ದರು, ಈ ಸಮಸ್ಯೆಯನ್ನು ಶಾಸಕ ಜಿ.ಎಸ್​. ಪಾಟೀಲ ಬಗೆ ಹರಿಸುತ್ತಾರೆ ಎಂಬ ನಂಬಿಕೆ ಇದೆ. ಆದಷ್ಟು ಬೇಗ ಕೊಳಚೆಯಿಂದ ಮುಕ್ತಿ ನೀಡಬೇಕು ಎಂದು ಮನವಿ ಮಾಡುತ್ತೇವೆ.
    ಮಾರುತಿ ಯಡಿಯಾಪುರ, ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts