More

    ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಅವಸ್ಥೆ ಖಂಡಿಸಿ ಮನವಿ

    ವಿಜಯವಾಣಿ ಸುದ್ದಿಜಾಲ ಗದಗ
    ಜಿಲ್ಲಾ ಆಸ್ಪತ್ರೆಯ ಅವಸ್ಥೆಯನ್ನು ಖಂಡಿಸಿ ಮತ್ತು ಲೇಶ್ವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಜನಔಷಧಿ ಕೇಂದ್ರವನ್ನು ತೆರೆಯುವಂತೆ ಕರ್ನಾಟಕ ಸೇನೆ ಜಿಲ್ಲಾ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
    ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯ ಭೀಮಣ್ಣ ಇಂಗಳೆ, ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಜಿಲ್ಲೆಯಲ್ಲಿ ದೊಡ್ಡ ಆಸತ್ರೆಯಾಗಿ ಬೆಳೆದಿದೆ. ತಾಲೂಕುಗಳಿಂದ ಬಡ ರೋಗಿಗಳು ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಬರುತ್ತಿದ್ದಾರೆ. ಆದರೂ, ಆಸ್ಪತ್ರೆಯಲ್ಲಿ ಸ್ವಚ್ಛತೆ ಹಾಗೂ ಔಷಧಿಗಳ ಕೊರತೆ ಇದೆ. ಬಡ ರೋಗಿಗಳಿಗೆ ಎರಡು ರೂಪಾಯಿ ಮತ್ತು ಐದು ರೂಪಾಯಿ ಮಾತ್ರೆಗಳನ್ನು ಮಾತ್ರ ವಿತರಿಸುತ್ತಿದ್ದಾರೆ. ಹೆಚ್ಚಿನ ದರದಲ್ಲಿ ಮಾತ್ರೆಗಳನ್ನು ಹೊರಗಡೆ ತೆಗೆದುಕೊಂಡು ಬರಲು ವೈದ್ಯರು ಚೀಟಿ ಬರೆದುಕೊಡುತ್ತಿದ್ದಾರೆ. ಔಷಧಿಗಳು ದುರ್ಬಳಕೆ ಮಾಡಿಕೊಡಲಾಗುತ್ತಿದೆ. ಇದರ ಜತೆಗೆ ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಚತೆಯೂ ಮರಿಚಿಕೆ ಆಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಸಚಿವರು ಗಮನ ಹರಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಲೇಶ್ವರ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರ ಬಂದ್​ ಆಗಿ ನಾಲ್ಕು ತಿಂಗಳು ಗತಿಸಿದರೂ ಪುನರಾರಂಭಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳು ನಿರ್ಲಕ್ಷ$್ಯ ವಹಿಸಿದ್ದಾರೆ ಎಂದು ಆರೋಪಿಸಲಾಯಿತು.
    ಈರಣ್ಣ ಮ್ಯಾಗೇರಿ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಜಗದೀಶ ಮಡಿವಾಳರ, ಶರಣಪ್ಪ ವಾಲ್ಮೀಕಿ, ವಿರೇಶ ಶಿವಶಿಂಪಗೇರಿ, ಮಾರುತಿ ಬರಗಿ, ಷಣ್ಮುಖ ಕಾತರಕಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts