More

    VIDEO| ಈ ಬೌಲಿಂಗ್ ಶೈಲಿ ನೋಡಿ; ಚೆಂಡಿನ ಬಗ್ಗೆ ಗೊತ್ತಿಲ್ಲ, ತಲೆಯಂತೂ ತಿರುಗುತ್ತದೆ!

    ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಆಫ್​-ಸ್ಪಿನ್ನರ್ ಹರ್ಭಜನ್ ಸಿಂಗ್, ಕ್ಲಬ್ ಕ್ರಿಕೆಟ್ ಟೂರ್ನಿಯೊಂದರಲ್ಲಿ ಬೌಲರ್ ಒಬ್ಬನ ವಿಚಿತ್ರವಾಗಿರುವ ಬೌಲಿಂಗ್ ಶೈಲಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿರುವ ಬೌಲಿಂಗ್ ಶೈಲಿಯ ಬಗ್ಗೆ ಹರ್ಭಜನ್ ಸಿಂಗ್ ವಿಶೇಷವಾದ ಅಡಿಬರಹವನ್ನೂ ಬರೆದುಕೊಂಡಿದ್ದಾರೆ.

    ಬೌಲಿಂಗ್‌ನ ಆರಂಭದಲ್ಲಿ ಬೌಲರ್ ಕೈ ಮೇಲೆತ್ತುವ ರೀತಿ ಹರ್ಭಜನ್ ಸಿಂಗ್ ಅವರ ಬೌಲಿಂಗ್ ಶೈಲಿಯನ್ನೇ ಹೋಲುತ್ತದೆ. ಆದರೆ ನೋಡನೋಡುತ್ತಿದ್ದಂತೆಯೇ ಆ ಬೌಲರ್ 5 ಬಾರಿ ಅದೇ ರೀತಿ ಕೈತಿರುಗಿಸುತ್ತಾನೆ. ಬಳಿಕವಷ್ಟೇ ಆತ ಬೌಲಿಂಗ್ ಮಾಡುತ್ತಾನೆ. ಆತನ ಈ ವಿಚಿತ್ರ ಬೌಲಿಂಗ್ ಶೈಲಿ ನೋಡಿ ಬ್ಯಾಟ್ಸ್‌ಮನ್ ಕೂಡ ಕಕ್ಕಾಬಿಕ್ಕಿಯಾಗುತ್ತಾನೆ.

    ಇದನ್ನೂ ಓದಿ: VIDEO | ಶ್ರೀಲಂಕಾ ಬ್ಯಾಟ್ಸ್‌ಮನ್ ವಿರುದ್ಧ ನೀಡಿದ ಔಟ್ ತೀರ್ಪಿನ ಬಗ್ಗೆ ಬಿಸಿಬಿಸಿ ಚರ್ಚೆ!

    ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿರುವ 40 ವರ್ಷದ ಹರ್ಭಜನ್ ಸಿಂಗ್, ಅದರ ಜತೆಗೆ, ‘ನನಗಿಂತ ಉತ್ತಮವಾದ ರೀತಿಯ ಬೌಲಿಂಗ್ ಶೈಲಿ ಇದಾಗಿದೆ. ನನಗೆ ಈ ವಿಡಿಯೋ ಕಳುಹಿಸಿರುವ ಗಗನ್‌ಗುಜ್ರಾಲ್‌ಗೆ ಧನ್ಯವಾದಗಳು. ಚೆಂಡು ತಿರುಗುವುದೋ, ಇಲ್ಲವೋ ಗೊತ್ತಿಲ್ಲ. ಆದರೆ, ತಲೆಯಂತೂ ತಿರುಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

    ಈ ವಿಶಿಷ್ಟ ಬೌಲಿಂಗ್ ಶೈಲಿಯ ಬೌಲರ್ ಹೆಸರು ತನುಜಾ ಪವರ್ ಎಂದು ಹೇಳಲಾಗಿದ್ದು, ದೆಹಲಿಯಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಟೂರ್ನಿಯೊಂದರ ವಿಡಿಯೋ ಇದಾಗಿದೆ ಎಂದು ಹೇಳಲಾಗುತ್ತಿದೆ. ತನುಜಾ ಪವರ್ ಟೆನಿಸ್ ಬಾಲ್ ಮತ್ತು ಕ್ರಿಕೆಟ್ ಬಾಲ್ ಟೂರ್ನಿಗಳಲ್ಲಿ ದೆಹಲಿಯ ವಿವಿಧ ಕ್ಲಬ್‌ಗಳ ಪರ ಆಡುತ್ತಿದ್ದಾರೆ ಎನ್ನಲಾಗಿದೆ.

    VIDEO| ‘ಇದಪ್ಪಾ ನಿಜವಾದ ಕ್ರಿಕೆಟ್​ !’ ಮೈಕೆಲ್ ವಾಘನ್ ಶೇರ್​ ಮಾಡಿದ ವಿಡಿಯೋ ನೋಡಿ

    ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿಗೆ ಬೆಂಬಿಡದ ನಂಬರ್ 36..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts