More

    ತಾತ ಅಜ್ಜಿಯ 66ನೇ ವಿವಾಹ ವಾರ್ಷಿಕೋತ್ಸವಕ್ಕೆ ನಿಖಿಲ್​ ಶುಭಾಶಯ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಮನೆಯಲ್ಲಿ ಇತ್ತೀಚೆಗಷ್ಟೇ ಪುತ್ರನ ಮದುವೆ ಕಾರ್ಯ ನಡೆದಿತ್ತು. ಇಡೀ ಕುಟುಂಬ ಸಂತಸದಿಂದ ಕಲ್ಯಾಣ ಕಾರ್ಯವನ್ನು ನೆರವೇರಿಸಿತ್ತು. ಇದೀಗ ಇನ್ನೊಂದು ಸಂಭ್ರಮಕ್ಕೆ ತಯಾರಿ ನಡೆದಿದೆ. ಅಂದರೆ, ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಮತ್ತು ಪತ್ನಿ ಚೆನ್ನಮ್ಮ ಇಂದಿಗೆ (ಮೇ 24) ಮದುವೆಯಾಗಿ 66 ವರ್ಷಗಳಾದವು. ಆ ಖುಷಿಯ ಗಳಿಗೆಯನ್ನು ಮೊಮ್ಮಗ ನಿಖಿಲ್​ ಕುಮಾರ್​ ನೆನಪು ಮಾಡಿಕೊಂಡಿದ್ದು, ಜಾಳತಾಣದಲ್ಲಿ ತಾತ ಅಜ್ಜಿಗೆ ವಿವಾಹ ವಾರ್ಷಿಕೋತ್ಸದ ಶುಭಾಶಯ ಕೋರಿದ್ದಾರೆ.

    ಇದನ್ನೂ ಓದಿ: ಹೇಗಿವೆ ಗೊತ್ತಾ ನಿಖಿಲ್​- ರೇವತಿ ಮದುವೆ ಫೋಟೋಸ್​?

    ‘ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 66 ವಸಂತಗಳನ್ನು ಪೂರೈಸಿರುವ ನಾಡಿನ ಆದರ್ಶ ದಂಪತಿಗಳಾಗಿರುವ ಪ್ರೀತಿಯ ತಾತ ಎಚ್​.ಡಿ ದೇವೇಗೌಡ ಹಾಗೂ ಅಜ್ಜಿ ಚೆನ್ಮಮ್ಮ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು‘ ಎಂದಿದ್ದಾರೆ.

    ಇದನ್ನೂ ಓದಿ: 2021ಕ್ಕೆ ಬಿಡುಗಡೆ ಭಾಗ್ಯ! ಸಾಲು ಸಾಲು ಸಿನಿಮಾಗಳು ಪೋಸ್ಟ್​ಪೋನ್

    ಈ ಖುಷಿಯ ದಿನವನ್ನು ಸಂಭ್ರಮಿಸಲು ಇಡೀ ಕುಟುಂಬ ಸಜ್ಜಾಗಿದ್ದು, ಮನೆಯಲ್ಲೇ ಸರಳವಾಗಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಇನ್ನು ಮಾಜಿ ಪ್ರಧಾನಿ ವಿವಾಹ ವಾರ್ಷಿಕೋತ್ಸವಕ್ಕೆ ರಾಜಕೀಯ ಮುಖಂಡರು, ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಶುಭಾಶಯಗಳನ್ನು ಕೋರುತ್ತಿದ್ದಾರೆ.

    ಜೂನ್​ನಿಂದ ಸಿನಿಮಾ ಚಿತ್ರೀಕರಣಕ್ಕೆ ಅನುವು!; ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಸ್ಟಾರ್​ಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts