More

    ಶತಮಾನ ಪೂರೈಸಿದ ಕಸಾಪ ಕನ್ನಡಿಗರ ಹೆಮ್ಮೆ

    ಶಿವಮೊಗ್ಗ: ಪ್ರಸ್ತುತ ದಿನಮಾನದಲ್ಲಿ ಜನರ ಮನಸ್ಥಿತಿ ವಿಚಿತ್ರವಾಗುತ್ತಿದ್ದು ಒಂದು ಸಂಘಟನೆ ಉದಯಿಸಿದಷ್ಟೇ ವೇಗವಾಗಿ ಅಂತ್ಯಗೊಳ್ಳುತ್ತಿವೆ. ಇಂತಹ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉದಯಿಸಿ ಶತಮಾನ (109 ವರ್ಷ) ಪೂರೈಸಿ ಸಶಕ್ತವಾಗಿ ಮುನ್ನಡೆಯುತ್ತಿರುವುದು ಕನ್ನಡಿಗರಾದ ನಾವೆಲ್ಲರೂ ಹೆಮ್ಮೆ ಪಡಬೇಕಾದ ಕ್ಷಣವಾಗಿದೆ ಎಂದು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಪ್ರೊ. ಎನ್.ರಾಜೇಶ್ವರಿ ಹೇಳಿದರು.

    ಚಾಲುಕ್ಯನಗರದ ಸಾಹಿತ್ಯ ಗ್ರಾಮದಲ್ಲಿ ಭಾನುವಾರ ಸಂಜೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕಸಾಪ 109ನೇ ಸಂಸ್ಥಾಪನಾ ದಿನಾಚರಣೆ ಮತ್ತು ಮತ ಹಾಕೋಣ ಬನ್ನಿ ಜಾಗೃತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕನ್ನಡಪರ ಸಂಘಟನೆಗಳು ನಿರಂತರವಾಗಿ, ವೈವಿಧ್ಯಮಯವಾಗಿ ಗುಣಮಟ್ಟದ ಚಟುವಟಿಕೆಗಳನ್ನು ನಡೆಸುತ್ತಿವೆ. ಅದಕ್ಕಾಗಿ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಮತ್ತು ಅವರ ತಂಡ ಸಿದ್ಧಹಸ್ತವಾಗಿ ಹೊರಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಕಸಾಪ ಸದಸ್ಯರಾದ ನಾವೆಲ್ಲರೂ ಕಾರ್ಯಚಟುವಟಿಕೆಗಳಲ್ಲಿ ಸಹಭಾಗಿತ್ವ ಪಡೆಯುವುದು ಮುಖ್ಯ. ಅಳಿವಿನಂಚಿನಲ್ಲಿರುವ ಜನಪದ ಕಲೆ ಉಳಿಸಬೇಕು. ಕಾಡಿಲ್ಲದೆ ಪರಿಸರ ನಾಶವಾಗುತ್ತಿದೆ. ಮನುಷ್ಯ ಬದುಕು ಸಂಕಷ್ಟಕ್ಕೆ ಒಳಗಾಗಿದೆ. ಕುಡಿಯುವ ನೀರು ಸಂರಕ್ಷಣೆ ಮಾಡಿಕೊಳ್ಳಬೇಕಿದೆ. ಈ ಎಲ್ಲ ವಿಚಾರವಾಗಿ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಅವರು ಸಲಹೆ ನೀಡಿದರು.
    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಪರಿಷತ್ ತನ್ನದೇ ಭವನ ಹೊಂದಿದೆ. ವಿಶಾಲ ನಿವೇಶನದಲ್ಲಿ ಕನಸಿನ ಸಾಹಿತ್ಯ ಗ್ರಾಮ ಯೋಜನೆ ನೀಲನಕ್ಷೆಯಂತೆ ಪೂರೈಸಬೇಕಿದೆ. ಸರ್ಕಾರದ, ಜನಪ್ರತಿನಿಧಿಗಳ ಸಹಕಾರಬೇಕು. ಸಮುದಾಯದತ್ತ ತೋರಿಸುವ ಒಲವು ಭಾಷೆ, ಸಾಹಿತ್ಯ, ಸಂಸ್ಕೃತಿಯಕಡೆ ನಿರಾಸಕ್ತಿ ತಾಳಿರುವುದು ದುರಂತ ಎಂದು ವಿವರಿಸಿದರು.
    ಕಸಾಪ ಸದಸ್ಯರಾಗಲು ತೋರಿಸುವ ಆಸಕ್ತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವಿಚಾರದಲ್ಲಿ ನಿರಾಸಕ್ತಿ ಹೊಂದಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಇದಾಗಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದರು.
    ಗಾಯಕಿಯರಾದ ಲಕ್ಷ್ಮಿ ಮಹೇಶ್, ನಳಿನಾಕ್ಷಿ, ದೀಪ್ತಿ ಶಿವಕುಮಾರ್, ಸುಶೀಲಾ ಷಣ್ಮುಗಂ ಕನ್ನಡ ಗೀತೆಗಳನ್ನು ಹಾಡಿದರು. ಮತದಾನ ಜಾಗೃತಿ ಕುರಿತು ಕವಿಗಳಾದ ಡಾ. ಕೆ.ಎನ್.ಗುರುದತ್ತ, ಬಿ.ಟಿ.ಅಂಬಿಕಾ, ಡಿ.ಗಣೇಶ್ ಕವನ ವಾಚಿಸಿದರು. ಕಸಾಪ ಹಿರಿಯ ಸದಸ್ಯರಾದ ಸೊಪ್ಪುಗುಡ್ಡೆ ಲೋಕಯ್ಯ, ನಿವೃತ್ತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಿ.ಎಂ.ಚಂದ್ರಶೇಖರ, ಆರ್.ಹನುಮಂತಪ್ಪ, ನಳಿನಾಕ್ಷಿ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts