More

    ಗಮನ ಸೆಳೆದ ಯುಗಾದಿ ಕವಿಗೋಷ್ಠಿ

    ಮದ್ದೂರು: ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜು ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ಯುಗಾದಿ ಕವಿಗೋಷ್ಠಿ ಆಯೋಜಿಸಲಾಗಿತ್ತು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಿ.ಪಿ. ಸ್ವಾಮಿ, ಇತ್ತೀಚಿನ ದಿನಗಳಲ್ಲಿ ಕವಿಗಳು, ಸಾಹಿತಿಗಳು ಕಡಿಮೆ ಆಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಸಾಹಿತ್ಯ ಪರಿಷತ್ತು ಹೆಚ್ಚಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸಬೇಕಿದೆ ಎಂದು ಸಲಹೆ ನೀಡಿದರು.

    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ದಸರಗುಪ್ಪೆ ಧನಂಜಯ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಸುಮಾರು 17ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ, ಯುಗಾದಿ ವಿಶೇಷತೆ, ನಾಡು, ನುಡಿ, ತಂದೆ ತಾಯಿ, ಬರ ಪರಿಸ್ಥಿತಿ ಕುರಿತು ಹಲವು ನೂತನ ಕವನಗಳನ್ನು ವಾಚಿಸಿದ್ದಾರೆ. ಅದರಲ್ಲಿ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಸಹಾ ಭಾಗವಹಿಸಿರುವುದು ಸಂತಸದ ವಿಚಾರ ಎಂದರು.

    ಪ್ರಾಂಶುಪಾಲ ಪ್ರೊ.ಕೆ.ಬಿ. ನಾರಾಯಣ್ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಾಹಿತ್ಯಕವಾಗಿ ಮುಂದುವರಿಯಲು ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದರು. ಕವಿಗಳು ಉತ್ತಮ ಕವನಗಳನ್ನು ರಚಿಸುತ್ತಿರುವುದು ಪ್ರಶಂಸನೀಯ. ಇದು ಹೀಗೇ ಮುಂದುವರಿಯಲಿ ಎಂದು ಆಶಿಸಿದರು.

    ಕಾರ್ಯಕ್ರಮಕ್ಕೂ ಮುನ್ನ ಪ್ರಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿದ್ದ ದಿ. ರವಿಕುಮಾರ್ ಚಾಮಲಾಪುರ ಹಾಗೂ ಕನ್ನಡ ಚಲನಚಿತ್ರ ನಟ ದ್ವಾರಕೀಶ್ ಅವರಿಗೆ ಒಂದು ನಿಮಿಷ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು. ಕಾರ್ಯಕ್ರಮದಲ್ಲಿ ಹಲವು ಕವಿಗಳು ತಮ್ಮ ಕವನಗಳನ್ನು ವಾಚಿಸಿದರು. ರೈತ ಕವಿ ದೂ. ಚಿ.ಗೌಡ, ಕಸಾಪ ತಾಲೂಕು ಅಧ್ಯಕ್ಷ ಕೋಣಸಾಲೆ ಸುನಿಲ್ ಕುಮಾರ್, ಪದಾಧಿಕಾರಿಗಳಾದ ಬಿ.ಎಂ. ಅಪ್ಪಾಜಪ್ಪ, ಧನಂಜಯ ದಸರಗುಪ್ಪೆ, ಸಿ. ಅಪೂರ್ವಚಂದ್ರ, ಸುಜಾತಾ ಕೃಷ್ಣ, ಕುದುರಗುಂಡಿ, ಶ್ರೀಧರ್, ಎಸ್.ಸಿ. ರಮೇಶ್ ಡಾ. ಡಿ.ಈರಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts