More

    ಕೃಷಿ ಕಾಯ್ದೆ ವಿಚಾರದಲ್ಲಿ ಮುನಿಸಿಕೊಂಡು ರಾಜೀನಾಮೆ ನೀಡಿದ ಮೈತ್ರಿ ನಾಯಕ!

    ಜೈಪುರ: ಕೃಷಿ ಕಾಯ್ದೆ ವಿಚಾರದಲ್ಲಿ ಶಿರೋಮಣಿ ಅಕಾಲಿ ದಳದ ಸಚಿವೆ ಸಂಪುಟವನ್ನು ಬಿಟ್ಟು ಹೊರನಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಮತ್ತೋರ್ವ ಸಂಸದ, ಕೃಷಿ ಕಾಯ್ದೆಯ ಬಗ್ಗೆ ಮುನಿಸು ತೋರಿದ್ದು, ಮೂರು ಸಂಸದೀಯ ಸಮಿತಿಗಳಿಗೆ ರಾಜೀನಾಮೆ ನೀಡಿದ್ದಾರೆ.

    ಇದನ್ನೂ ಓದಿ:  ಮದುವೆಯಾದ ಅಕ್ಕನ ಮೇಲೇ ಲೈಂಗಿಕ ದೌರ್ಜನ್ಯವೆಸಗಿದ ತಮ್ಮ! ಪ್ರಶ್ನಿಸಿದ್ದಕ್ಕೆ ಅಮ್ಮನ ಮೇಲೂ ಹಲ್ಲೆ!

    ರಾಜಸ್ಥಾನದ ನಾಗೌರ್​ ಸಂಸದ ಮತ್ತು ರಾಷ್ಟ್ರೀಯ ಲೋಕ್​ತಾಂತ್ರಿಕ ಪಕ್ಷದ (ಆರ್​ಎಲ್​ಪಿ) ಮುಖ್ಯಸ್ಥ ಹನುಮಾನ್​ ಬೇನಿವಾಲ್​ ರಾಜೀನಾಮೆ ನೀಡಿರುವ ಸಂಸದ. ಅವರು ಕೈಗಾರಿಕೆಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಘೂ ಅರ್ಜಿಗಳ ಕುರಿತು ಸಂಸದೀಯ ಸಮಿತಿಗಳಲ್ಲಿ ಸದಸ್ಯರಾಗಿದ್ದು, ಈಗ ಮೂರೂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ಲೋಕಸಭೆಯ ಸ್ಪೀಕರ್​ ಓಂ ಬಿರ್ಲಾ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.

    ಸಂಸತ್ತಿನ ಭಾಗವಾಗಿದ್ದ ನಾನು ಜನ ಕೇಂದ್ರಿತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೆ. ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ. ಕ್ರಮ ಕೈಗೊಳ್ಳದಿದ್ದರೆ ಸಂಸದೀಯ ವ್ಯವಸ್ಥೆಯಲ್ಲಿ ಸಮಿತಿಗಳಿಗೆ ಯಾವುದೇ ಸಮರ್ಥನೆ ಇಲ್ಲ. ಅದೇ ನೋವಿನಿಂದಾಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹನುಮಾನ್​ ಅವರು ಹೇಳಿದ್ದಾರೆ.

    ಇದನ್ನೂ ಓದಿ: VIDEO| ಟ್ರಾಫಿಕ್​ ಪೊಲೀಸರ ಲಂಚದ ಕರಾಮತ್ತು! ಹೇಗೆಲ್ಲ ದುಡ್ಡನ್ನ ಜೇಬಿಗಿಳಿಸ್ತಾರೆ ನೋಡಿ!

    ಸರ್ಕಾರವು ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಮನಸ್ಥಿತಿ ತೋರುತ್ತಿದೆ. ಆದ್ದರಿಂದ, ಡಿಸೆಂಬರ್ 26 ರಂದು ರಾಜಸ್ಥಾನದಿಂದ ದೆಹಲಿ ಕಡೆಗೆ 2 ಲಕ್ಷ ರೈತರು ಮತ್ತು ಯುವಕರ ಮೆರವಣಿಗೆಯನ್ನು ಮುನ್ನಡೆಸಲು ನಮ್ಮ ಪಕ್ಷ ನಿರ್ಧರಿಸಿದೆ ಎಂದು ಆರ್‌ಎಲ್‌ಪಿ ಮುಖ್ಯಸ್ಥರು ತಿಳಿಸಿದ್ದಾರೆ. (ಏಜೆನ್ಸೀಸ್​)

    ವಿಡಿಯೋ ಕಾಲ್ ಮೂಲಕವೇ ಯುವಕನ ಬಟ್ಟೆ ಬಿಚ್ಚಿಸಿದ ಚಾಲಾಕಿ ಹುಡುಗಿಯರು!

    ಪೊಲೀಸ್​ ಪೇದೆ ಮತ್ತು ಹೆಂಡತಿಯ ಕೊಲೆ! ಅಪ್ಪ ಅಮ್ಮ ಚೀರಿಕೊಳ್ಳುತ್ತಿದ್ದರೆ ಏನೂ ಗೊತ್ತಿಲ್ಲದವಳಂತೆ ಸುತ್ತಾಡಿದ ಮಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts