More

    ಹಂಪನಾ ಮೊದಲಿಗರಲ್ಲ; ಕುವೆಂಪುಗೆ ನೋಟಿಸ್ ನೀಡಿತ್ತು ಆಗಿನ ಕಾಂಗ್ರೆಸ್ ಸರ್ಕಾರ!

    ಬೆಂಗಳೂರು: ಈಗಿನ ಆಳುವ ಸರ್ಕಾರವನ್ನು ತಮ್ಮ ಭಾಷಣದಲ್ಲಿ ಟೀಕಿಸಿದ್ದಕ್ಕೆ ಸಾಹಿತಿ ಹಂ.ಪ. ನಾಗರಾಜಯ್ಯ ಅವರನ್ನು ಮಂಡ್ಯ ಪೊಲೀಸರು ವಿಚಾರಣೆಗೆ ಒಳಪಡಿಸಿದರು ಎನ್ನುವುದು ಈಗ ರಾಜ್ಯದೆಲ್ಲೆಡೆ ಚರ್ಚೆಯಾಗುತ್ತಿರುವ ಸಂಗತಿ. ಆದರೆ ಆ ರೀತಿ ವಿಚಾರಣೆ ಎದುರಿಸಿದವರಲ್ಲಿ ಸಾಹಿತಿ ಹಂಪನಾ ಅವರೇ ಮೊದಲಿಗರಲ್ಲ; ಹಿಂದೆ ಕುವೆಂಪು ಅವರಿಗೆ ಆಗಿನ ಕಾಂಗ್ರೆಸ್ ಸರ್ಕಾರ ನೋಟಿಸ್ ನೀಡಿತ್ತು ಎಂಬ ಸಂಗತಿ ನಿಮಗೆ ಗೊತ್ತೆ?

    ಇದನ್ನೂ ಓದಿ: ಮಂಡ್ಯ ಪೊಲೀಸರಿಂದ ಸಾಹಿತಿ ಹಂಪನಾ ವಿಚಾರಣೆ: ಸಾಹಿತ್ಯ ವಲಯದಲ್ಲಿ ಆಕ್ರೋಶ

    ಕರ್ನಾಟಕದ ಏಕೀಕರಣಕ್ಕೆ ಸಂಬಂಧಿಸಿದಂತೆ ಆಗಿನ ಸರ್ಕಾರವನ್ನು ಕುವೆಂಪು ಟೀಕಿಸಿದ್ದರು. ಏಕೀಕರಣದ ವಿಷಯದಲ್ಲಿ ಸರ್ಕಾರ ತುರ್ತು ನಿರ್ಧಾರಗಳನ್ನು ಕೈಗೊಳ್ಳುತ್ತಿಲ್ಲ, ವಿನಾಕಾರಣ ವಿಳಂಬ ಮಾಡುತ್ತಿದೆ ಎಂಬುದು ಕುವೆಂಪು ಅವರ ಟೀಕೆಯ ತಿರುಳಾಗಿತ್ತು. ಆಗ ಅವರಿಗೆ ಅಂದು ಅಧಿಕಾರದಲ್ಲಿದ್ದ ಕೆ. ಚೆಂಗಲರಾಯರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ನೋಟಿಸ್ ನೀಡಿತ್ತು.

    ಇದನ್ನೂ ಓದಿ: ಶಿವಮೊಗ್ಗದ ಕ್ರಷರ್​ನಲ್ಲಾದ ಭೀಕರ ಸ್ಫೋಟಕ್ಕೆ ಬಲಿಯಾದವರು ಜಿಲ್ಲೆಯವರೇ..!

    ಆದರೆ ಕುವೆಂಪು ಈ ನೋಟಿಸ್‌ಗೆ ಜಗ್ಗಲೂ ಇಲ್ಲ, ಬಗ್ಗಲೂ ಇಲ್ಲ. ಸರ್ಕಾರದ ಕ್ರಮಕ್ಕೆ ತಿರುಗೇಟು ಎಂಬಂತೆ ಒಂದು ಕವನ ಬರೆದು ಪ್ರಕಟಿಸಿದರು. ‘‘ಇಂದು ಬಂದು ನಾಳೆ ಸಂದು ಹೋಹ ಸಚಿವ ಮಂಡಲ…’’ ಎಂಬ ವಾಕ್ಯ ಅದರಲ್ಲಿತ್ತು. ಆ ಕವನ ಅತ್ಯಲ್ಪ ಕಾಲದಲ್ಲೇ ಜನಪ್ರಿಯವೂ ಆಯಿತು. ಸರ್ಕಾರದ ಮಂತ್ರಿಮಂಡಲವನ್ನೇ ಟೀಕಿಸುವ ಆ ಕವನದಿಂದ ಮತ್ತಷ್ಟು ಕ್ರುದ್ಧರಾದ ಕೆಲವು ಕಾಂಗ್ರೆಸ್ಸಿಗರು ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರಿಗೆ ದೂರು ಒಯ್ದರು. ಕುವೆಂಪು ಅವರಿಗೆ ಮತ್ತೊಂದು ನೋಟಿಸ್ ನೀಡಿ ಕಠಿಣ ವಿಚಾರಣೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು. ಆದರೆ ಅದಕ್ಕೆ ಕೆ.ಸಿ. ರೆಡ್ಡಿ ಒಪ್ಪಲಿಲ್ಲ. ‘‘ಇನ್ನೊಂದು ನೋಟಿಸ್ ನೀಡಿದರೆ ಕುವೆಂಪು ಮತ್ತೆ ಮೂರು ಕವನ ಬರೆದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ’’ ಎಂದು ಕೆ.ಸಿ. ರೆಡ್ಡಿ ಹೇಳಿ ಅವರನ್ನೆಲ್ಲ ವಾಪಸ್ ಕಳಿಸಿದರು. ಹಂಪನಾ ಅವರನ್ನು ವಿಚಾರಣೆಗೆ ಒಳಪಡಿಸಿದ ಘಟನೆ ಚರ್ಚೆಗೆ ಒಳಗಾಗುತ್ತಿರುವ ಈ ಸಂದರ್ಭದಲ್ಲಿ ಕುವೆಂಪು ಅವರ ಕಾಲದ ಆ ಘಟನೆಯನ್ನು ಹಿರಿಯ ಸಾಹಿತಿಗಳು ಈಗ ನೆನಪಿಸಿಕೊಳ್ಳುತ್ತಿದ್ದಾರೆ.

    ಮೋದಿ ಸರ್ಕಾರದಲ್ಲಿ ಡಬಲ್​ ಆದ ಸೆನ್ಸೆಕ್ಸ್​! ಏಳೇ ವರ್ಷದಲ್ಲಿ 25 ಸಾವಿರದಿಂದ 50 ಸಾವಿರಕ್ಕೆ ಜಂಪ್​

    ಬಿಎಸ್ಸಿ ವಿದ್ಯಾರ್ಥಿನಿಗೆ ಮುಖ್ಯಮಂತ್ರಿ ಪಟ್ಟ! ಹಳ್ಳಿ ಹುಡುಗಿಯ ರಾಜಕೀಯ ದರ್ಬಾರ ನೋಡಲು ಸಜ್ಜಾದ ರಾಜ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts