More

    ಇಸ್ರೇಲ್​ನಲ್ಲಿ ಹಮಾಸ್ ಉಗ್ರರ ದಾಳಿ: ಹತ್ಯಾಕಾಂಡದ ನಕ್ಷೆ, ದಾಳಿಯ ಜಾಡಿನ ಚಿತ್ರಣ ಬಿಡುಗಡೆ

    ನವದೆಹಲಿ: ಇಸ್ರೇಲ್​ನಲ್ಲಿ ಹಮಾಸ್ ಉಗ್ರರ ದಾಳಿಯಿಂದ ಸೃಷ್ಟಿಯಾಗಿರುವ ರಣಾಂಗಣ ಹಾಗೂ ರಣಭೀಕರ ಪರಿಸ್ಥಿತಿ ಇನ್ನೂ ಪೂರ್ತಿಯಾಗಿ ಶಮನಗೊಂಡಿಲ್ಲ. ಅಂದಿನ ಹತ್ಯಾಕಾಂಡದ ಘಟನೆ ನಡೆದ ಮೂರು ವಾರಗಳ ಬಳಿಕ ಅದರ ಚಿತ್ರಣ ಇವರು ನಕ್ಷೆಯನ್ನು ಬಿಡುಗಡೆ ಮಾಡಲಾಗಿದೆ.

    ಇಸ್ರೇಲ್ ವಿದೇಶಾಂಗ ಸಚಿವಾಲಯದ ಅಧಿಕೃತ ಎಕ್ಸ್ ಹ್ಯಾಂಡಲ್​ನಲ್ಲಿ ಹತ್ಯಾಕಾಂಡಗಳ ನಕ್ಷೆ ಎಂಬ ಶೀರ್ಷಿಕೆಯಲ್ಲಿ ಈ ‘ರಕ್ತಸಿಕ್ತ’ ಚಿತ್ರಣವನ್ನು ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 7ರ ಹತ್ಯಾಕಾಂಡದಲ್ಲಿ ಏನೇನಾಯ್ತು, ಎಲ್ಲಿ ಎಷ್ಟು ಮಂದಿಯನ್ನು ಹತ್ಯೆ ಮಾಡಲಾಯಿತು ಎಂಬ ವಿವರವನ್ನು ಈ ನಕ್ಷೆ ಮೂಲಕ ತಿಳಿಸಲಾಗಿದೆ.

    ಇದನ್ನೂ ಓದಿ: ಗಾಜಾ ಪಟ್ಟಿಯಲ್ಲಿ 400 ಕಿ.ಮೀ.ಗೂ ಉದ್ದದ ಸುರಂಗ!; ಆರ್ಮಿ ಮೇಜರ್ ಜನರಲ್ ಹೇಳಿಕೆ

    ಈ ಹತ್ಯಾಕಾಂಡದಲ್ಲಿ ಹಿಂಸೆ, ಹಲ್ಲೆ, ಅತ್ಯಾಚಾರ ಸೇರಿ 1,400ಕ್ಕೂ ಅಧಿಕ ಕೊಲೆ, 239 ಅಪಹರಣ ನಡೆದಿದ್ದು, 40 ಮಂದಿ ನಾಪತ್ತೆ ಆಗಿದ್ದಾರೆ. ಅಲ್ಲದೆ 4834ಕ್ಕೂ ಅಧಿಕ ಮಂದಿ ಗಾಯಾಳುಗಳಾಗಿದ್ದಾರೆ ಎಂಬ ಮಾಹಿತಿಯೊಂದಿಗೆ ಇಸ್ರೇಲ್ ವಿದೇಶಾಂಗ ಸಚಿವಾಲಯ ಈ ಹತ್ಯಾಕಾಂಡದ ನಕ್ಷೆಯನ್ನು ಹಂಚಿಕೊಂಡಿದೆ. ಅದರಲ್ಲಿ ಹಮಾಸ್ ಉಗ್ರರ ಕ್ರೌರ್ಯದ ಜಾಡನ್ನು ಕೆಂಪು ಚುಕ್ಕೆಗಳೊಂದಿಗೆ ಗುರುತಿಸಲಾಗಿದೆ.

    ಎಷ್ಟು ಗಂಟೆ ಕೆಲಸ ಎಂಬುದೇ ಮುಖ್ಯವಲ್ಲ, ಈಗ ವಾರಕ್ಕೆ 5 ಕೆಲಸದ ದಿನ ಎಂಬುದೂ ಇಲ್ಲ: ಮೂರ್ತಿ ಹೇಳಿಕೆಗೆ ಗೋಯೆಂಕಾ ಪ್ರತಿಕ್ರಿಯೆ

    ಸಾಫ್ಟ್​ವೇರ್​ ಉದ್ಯೋಗ: ಫ್ರೆಷರ್ಸ್​ಗೆ ಭಾರತದಲ್ಲೇ ಕಡಿಮೆ ಸಂಬಳ, ಜಾಸ್ತಿ ಕೆಲಸ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts