More

    ಲೋಕಸಭೆ ಚುನಾವಣೆಗೆ ಯಾರ ಜತೆಯೂ ಮೈತ್ರಿ ಇಲ್ಲ: ಫಲಿತಾಂಶದ ಬಳಿಕ ಮುಂದಿನ ತೀರ್ಮಾನವೆಂದ ಎಚ್​ಡಿಡಿ

    ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ನಾವು ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ, ಬದಲಾಗಿ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ ಎಂದು ಹೇಳುವ ಮೂಲಕ ಬಿಜೆಪಿ-ಜೆಡಿಎಸ್​ ಮೈತ್ರಿ ಕುರಿತಾದ ಊಹಾಪೋಹಳಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್​ ವರಿಷ್ಠ ಎಚ್​.ಡಿ. ದೇವೇಗೌಡ ಅವರು ತೆರೆ ಎಳೆದರು.

    ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಎಚ್​ಡಿಡಿ, ನೈಸ್​ ಹಗರಣ ಹಾಗೂ ಜೆಡಿಎಸ್​ ಮೈತ್ರಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದರು.

    ಇದನ್ನೂ ಓದಿ: ಇವರ ಅವಧಿಯಲ್ಲಿ ಯಾರಿಗೂ ನ್ಯಾಯ ಸಿಗಲ್ಲ; 2 ತಿಂಗಳಲ್ಲಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ: ಬಸವರಾಜ ಬೊಮ್ಮಾಯಿ

    ಎಚ್​ಡಿಡಿ ಸಲಹೆ 

    ಟಿ. ಬಿ. ಜಯಚಂದ್ರ ಅವರು ನೈಸ್ ಸಂಸ್ಥೆಯ ಬಗ್ಗೆ ಕೊಟ್ಟಿರುವ ಸದನ ಸಮಿತಿಯ ವರದಿಯನ್ನು ಜಾರಿಗೊಳಿಸುವ ಬಗ್ಗೆ ಸಿದ್ದರಾಮಯ್ಯ ಅವರು ಇಲ್ಲಿಯವರೆಗೂ ತೀರ್ಮಾನವನ್ನೇ ಕೈಗೊಂಡಿಲ್ಲ. ಬೊಮ್ಮಾಯಿಯವರ ಸರ್ಕಾರದಲ್ಲಿ ಸಮಿತಿ ಮಾಡಿದರು. ಹೆಚ್ಚುವರಿ ಭೂಮಿಯನ್ನು ವಶಕ್ಕೆ ಪಡೆಯಬೇಕೆಂದು ಹೇಳಿದರು. 11660 ಎಕರೆ ವಶಕ್ಕೆ ಪಡೆಯುವಂತೆ ವರದಿ ನೀಡಿದ್ದಾರೆ. ಇದು ಯಾರ ಭೂಮಿ? ಇದರಲ್ಲಿ ಬರುವ ಹಣವನ್ನು ನಿಮ್ಮ ಗ್ಯಾರಂಟಿಗೆ ಬಳಸಿಕೊಳ್ಳಿ, ಕೋಟ್ಯಂತರ ರೂಪಾಯಿ ಹಣ ಇದರಲ್ಲಿ ಬರುತ್ತೆ ಎಂದು ಎಚ್​ಡಿಡಿ ಸಲಹೆ ನೀಡಿದರು.

    ಅದು ಅವರ ಭ್ರಮೆ 

    ಸಿದ್ದರಾಮಯ್ಯನವರೇ ಅಧಿಕಾರ ಶಾಶ್ವತ ಅಲ್ಲ. ಆದರೆ ನಿಮ್ಮ ಮಾತು ಹೃದಯದ ಅಂತರಾಳದಿಂದ ಬರಬೇಕು. ಪತ್ರಕರ್ತರಿಗೆ ಎಥಿಕ್ಸ್ ಬಗ್ಗೆ ಸಿದ್ದರಾಮಯ್ಯ ಹೇಳ್ತಾರೆ, ಆದರೆ ಅವರು ತಮ್ಮ ಎಥಿಕ್ಸ್ ಏನು ಎಂದು ತೋರಿಸಬೇಕು. ನಿಮಗೆ ಬೇಕಾದಾಗ ಕಮಲದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ, ನಾವು ಮಾಡಿಕೊಂಡರೆ ಸೆಕ್ಯುಲರ್​ ಬಗ್ಗೆ ಮಾತನಾಡುತ್ತಾರೆ. ನೀವು ನೀತಿವಂತರು ಮತ್ತು ಸತ್ಯವಂತರು ನೀವು ಮಾತ್ರ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ಟೀಕಿಸಿದ ಎಚ್​ಡಿಡಿ, ರಾಜ್ಯದಲ್ಲಿ ಮೊದಲಿಗೆ ಕಾಂಗ್ರೇಸ್ಸೇತರ ಸರ್ಕಾರ ಬಂದಿದ್ದು 1983 ರಲ್ಲಿ. ಆಗ ಜನತಾ ಪಾರ್ಟಿ ಸರ್ಕಾರ ಬಂದಿತ್ತು. 18 ಬಿಜೆಪಿ, 8 ಕಮ್ಯುನಿಸ್ಟ್ ಹಾಗೂ 10 ಪಕ್ಷೇತರರು ಇದ್ದರು. ಆಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿಲ್ವಾ? ಸಿದ್ದರಾಮಯ್ಯನವರು ಕಾವಲು ಸಮಿತಿಯ ಅಧ್ಯಕ್ಷರಾಗಿರಲಿಲ್ವಾ? ಬಿಜೆಪಿಯ ಬೆಂಬಲದೊಂದಿಗೆ ರಚನೆಯಾದ ದಿವಂಗತ ರಾಮಕೃಷ್ಣ ಹೆಗ್ಗಡೆಯವರ ಸರ್ಕಾರದಲ್ಲಿ ನಾನು ಲೋಕೋಪಯೋಗಿ ಸಚಿವನಾಗಿದ್ದೆ ಮತ್ತು ಸಿದ್ದರಾಮಯ್ಯ ಅವರು ಕಾವಲು ಸಮಿತಿ ಅಧ್ಯಕ್ಷರಾಗಿದ್ದರು. ಹಾಗಾಗಿ ರಾಜಕಾರಣದದಲ್ಲಿ ಯಾವಾಗ ಏನೇನಾಗಿದೆ ಎಂದು ಜಿ.ಟಿ. ದೇವೆಗೌಡ ಹೇಳಿದ್ದಾರೆ. 1983 ರಿಂದ ಇಂದಿನವರೆಗೂ ಜೆಡಿಎಸ್‌ ಅಸ್ತಿತ್ವದಲ್ಲಿದೆ. ನಾನು ಸಿಎಂ ಆದೆ, ಪ್ರಧಾನಿ ಕೂಡ ಆದೆ. ಕುಮಾರಸ್ವಾಮಿ ಅವರು ಕೂಡ ಸಿಎಂ ಆದರು. ಯಾರಾದ್ರು ನಾಳೆ ಬೆಳಗ್ಗೆ ಈ ಪಕ್ಷವನ್ನು ಅಳಿಸಿ ಹಾಕ್ತೀವಿ ಎಂದು ತಿಳಿದಿದ್ರೆ ಅದು ಅವರ ಭ್ರಮೆ ಎಂದು ಎಚ್​ಡಿಡಿ ಗುಡುಗಿದರು.

    ಸ್ವತಂತ್ರವಾಗಿ ಸ್ಪರ್ಧೆ ಮಾಡ್ತೀವಿ

    ಮೈತ್ರಿಯ ಬಗ್ಗೆ ನಿಮಗೆ ಅನುಮಾನ ಬರುತ್ತೆ ನಿಜ, ನಾನು ಅದನ್ನು ನಿಮಗೆ ಬಿಡುತ್ತೇನೆ. ಹೆಗ್ಗಡೆಯವರು ಬಿಜೆಪಿಯ ಜೊತೆ ಸೇರಿ ಸಿಎಂ ಆಗಿಲ್ವೆ? ಕುಮಾರಸ್ವಾಮಿಯವರ ಬಗ್ಗೆ ಮಾತ್ರ ಏಕೆ ಮಾತನಾಡುತ್ತಾರೆ. ಜೆಡಿಎಸ್‌ ಮುಳುಗಿ ಹೋಗುತ್ತೆ ಎಂದು ಹೇಳ್ತಾರೆ. ಲೋಕಸಭೆ ಚುನಾವಣೆಯಲ್ಲಿ ನಾವು 5 ಗೆಲ್ತಿವೋ? ಅಥವಾ 6 ಗೆಲ್ತಿವೋ ಗೊತ್ತಿಲ್ಲ. ಆದರೆ, ನಾವು ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ. ಚುನಾವಣೆ ಬಳಿಕ ತೀರ್ಮಾನ ಮಾಡ್ತೀವಿ. ಮನಮೋಹನ್ ಸಿಂಗ್ 3 ಸ್ಥಾನ ಕಡಿಮೆ ಇದೆ ಬೆಂಬಲ ಕೊಡಿ ಎಂದು ಕೇಳಿದ್ದರು. ಆಗ ನಾವು ಬೆಂಬಲ ಕೊಟ್ಟೆದ್ದೆವು. ಅಂದು ಯಾವುದಾದ್ರೂ ಷರತ್ತು ಹಾಕಿದ್ದನಾ? ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಏನು ಪರಿಸ್ಥಿತಿ ಬರುತ್ತದೋ, ನೋಡಿಕೊಂಡು ನಾವು ತೀರ್ಮಾನ ಮಾಡ್ತೀವಿ. ನಾವು ಯಾವುದೇ ಪಕ್ಷದ ಜೊತೆ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲ್ಲ. ಬದಲಾಗಿ ಸ್ವತಂತ್ರವಾಗಿ ಸ್ಪರ್ಧೆ ಮಾಡ್ತೀವಿ. ಎಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಶಕ್ತಿ ಇದೆಯೋ ಅಲ್ಲಿ ಹಾಕುತ್ತೇವೆ ಎಂದರು.

    ಇದನ್ನೂ ಓದಿ: ಎರಡನೇ ಬಾರಿಗೆ ಬೆಂಗಳೂರು ಮೈಸೂರು ಹೆದ್ದಾರಿ ಪರಿಶೀಲಿಸಿದ ಎಡಿಜಿಪಿ ಅಲೋಕ್ ಕುಮಾರ್

    ಒಂದಕ್ಕೊಂದು ಹೊಂದಾಣಿಕೆ ಬೇಡ

    ಅಧಿಕೃತ ವಿಪಕ್ಷ ಬಿಜೆಪಿ. ನಮ್ಮದು ಅನಧಿಕೃತ ವಿಪಕ್ಷ. ಬಿಜೆಪಿಯವರು ನಿಲುವಳಿ ಸೂಚನೆ ಕೊಟ್ಟಿರ್ತಾರೆ, ನಾವೂ ಕೂಡ ನಿಲುವಳಿ ಸೂಚನೆ ಕೊಟಿರ್ತೇವೆ. ಆದರೆ ಸ್ಪೀಕರ್ ಅಧಿಕೃತ ವಿಪಕ್ಷ ಸ್ಥಾನವನ್ನು ಬಿಜೆಪಿಗೆ ಕೊಡ್ತಾರೆ. ಅವರು ಪ್ರತಿಭಟನೆ ಮಾಡ್ತಾರೆ. ಅವರದು ಒಂದೇ ವಿಷಯ ಇರುತ್ತೆ ಮತ್ತು ನಮ್ಮದು ಕೂಡ ಒಂದೇ ವಿಷಯ ಇರುತ್ತದೆ. ಅದಕ್ಕೆ ನಾವು ಏನು ಮಾಡೋದು ಹೇಳಿ. ಅದಕ್ಕಾಗಿ ಒಂದಕ್ಕೊಂದು ಹೊಂದಾಣಿಕೆ ಬೇಡ. ಇದಕ್ಕೆ, ಅದಕ್ಕೆ ಹೋಲಿಕೆ ಮಾಡಬೇಡಿ ಎಂದು ಮನವಿ ಮಾಡಿದರು.

    ಆ ಗುಂಪು ಯಾರೆಂದು ನಿಮಗೂ ಗೊತ್ತು

    ಇತ್ತೀಚೆಗೆ 26 ವಿಪಕ್ಷ ಸಭೆ ಸೇರಿದ್ರು, ದೇವೆಗೌಡರನ್ನು ಕರೆದ್ರೆ ನಾವು ಬರುವುದಿಲ್ಲ ಎಂದು ಒಂದು ಗುಂಪು ಧಮಕಿ ಹಾಕಿದರು. ಅದಕ್ಕಾಗಿ ನನ್ನನ್ನು ಕರೆಯಲಿಲ್ಲ. ನಿತೀಶ್ ಕುಮಾರ್ ನನ್ನ ಸ್ನೇಹಿತ, ಶರದ್ ಪವಾರ್ ಇಲ್ಲಿ ಬಂದು ಹೋದರು. ಆ ಗುಂಪು ಯಾರೆಂದು ನಿಮಗೂ ಗೊತ್ತು. ಇದನ್ನು ಜಾಸ್ತಿ ಎಳೆಯಬೇಡಿ ಎನ್ನುವ ಮೂಲಕ ಪರೋಕ್ಷವಾಗಿ ಹೆಸರೇಳದೆ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. (ದಿಗ್ವಿಜಯ ನ್ಯೂಸ್​)

    ಇಂಡಿಯನ್ ಮುಜಾಹಿದ್ದೀನ್​​, ಈಸ್ಟ್​ ಇಂಡಿಯಾ ಕಂಪನಿ: ಇಂಡಿಯಾ ಒಕ್ಕೂಟದ ವಿರುದ್ಧ ಪ್ರಧಾನಿ ವಾಗ್ದಾಳಿ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts