More

    ಇಂಡಿಯನ್ ಮುಜಾಹಿದ್ದೀನ್​​, ಈಸ್ಟ್​ ಇಂಡಿಯಾ ಕಂಪನಿ: ಇಂಡಿಯಾ ಒಕ್ಕೂಟದ ವಿರುದ್ಧ ಪ್ರಧಾನಿ ವಾಗ್ದಾಳಿ​

    ನವದೆಹಲಿ: ಮಣಿಪುರ ಹಿಂಸಾಚಾರ ಸಂಬಂಧ ಸಂಸತ್ತಿನಲ್ಲಿ ಗದ್ದಲ ಸೃಷ್ಟಿಸಿರುವ ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಹರಿಹಾಯ್ದಿದ್ದು, ನಾನು ಇಂತಹ ದಿಕ್ಕಿಲ್ಲದ ವಿಪಕ್ಷಗಳನ್ನು ನೋಡಿಯೇ ಇಲ್ಲ ಎಂದಿದ್ದಾರೆ. ಅಲ್ಲದೆ, ವಿಪಕ್ಷಗಳ ಇಂಡಿಯಾ ಒಕ್ಕೂಟವನ್ನು ಈಸ್ಟ್​ ಇಂಡಿಯಾ ಕಂಪನಿ ಎಂದು ಜರಿದಿದ್ದಾರೆ.

    ಇಂದು ಬೆಳಗ್ಗೆ ನಡೆದ ಬಿಜೆಪಿಯ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇಂಡಿಯಾ ಹೆಸರನ್ನು ಬಳಸಿದ ಮಾತ್ರಕ್ಕೆ ಕೆಲಸ ಆಗುವುದಿಲ್ಲ. ಈಸ್ಟ್​ ಇಂಡಿಯಾ ಕಂಪನಿ ಕೂಡ ಇಂಡಿಯಾ ಹೆಸರನ್ನು ಬಳಸಿತ್ತು ಮತ್ತು ಇಂಡಿಯನ್​ ಮುಜಾಹಿದ್ದೀನ್​​​ (ಉಗ್ರ ಸಂಘಟನೆ)ನಲ್ಲೂ ಇಂಡಿಯಾ ಇದೆ ಎಂದು ವಾಗ್ದಾಳಿ ನಡೆಸಿದರು.

    ವಿಪಕ್ಷಗಳು ಚದುರಿಹೋಗಿವೆ ಮತ್ತು ಹತಾಶವಾಗಿವೆ ಎಂದು ಜರಿದ ಪ್ರಧಾನಿ ಮೋದಿ, ವಿಪಕ್ಷಗಳ ಧೋರಣೆಯನ್ನು ನೋಡಿದರೆ ಹೆಚ್ಚು ಕಾಲ ಅಧಿಕಾರದಲ್ಲಿ ಇರಬೇಕೆಂಬ ಹಂಬಲ ಅವರಲ್ಲಿ ಇಲ್ಲದಂತಿದೆ ಎಂದರು.

    ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯಲ್ಲಿ ದುಡ್ಡು ಪಡೆದರೆ ಕ್ರಿಮಿನಲ್ ಪ್ರಕರಣ: ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಕೆ 

    ಮಣಿಪುರ ಹಿಂಸಾಚಾರ ಮೇಲಿನ ಚರ್ಚೆಯಿಂದ ಸಂಸತ್ತಿನ ಎರಡೂ ಸದನಗಳಲ್ಲೂ ಕೋಲಾಹಲ ಎದ್ದಿದೆ. ಮಣಿಪುರ ವಿಚಾರವಾಗಿ ಸದನದಲ್ಲಿ ಮಾತನಾಡುವಂತೆ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿ ವಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿವೆ. ಆದರೆ, ಸದನದಲ್ಲಿ ಬೇರೆ ವಿಚಾರಗಳು ಚರ್ಚೆಯಾಗದೇ ಇರುವುದರಿಂದ ಚರ್ಚೆಗೆ ಬೂಸ್ಟ್​ ನೀಡಲು ಸರ್ಕಾರ ಪ್ಲ್ಯಾನ್​ ಮಾಡುತ್ತಿರುವ ಸಂದರ್ಭದಲ್ಲೇ ಲೋಕಸಭೆಯಲ್ಲಿ ಮಣಿಪುರದ ವಿಚಾರವಾಗಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ವಿಪಕ್ಷಗಳ ಇಂಡಿಯಾ ಒಕ್ಕೂಟ ಇಂದು ನಿರ್ಧಾರ ಮಾಡಿದೆ.

    ಎರಡೂ ಸದನದಲ್ಲೂ ಗದ್ದಲ ಏರ್ಪಟ್ಟಿದ್ದರಿಂದ 12 ಗಂಟೆಯವರೆಗೆ ರಾಜ್ಯಸಭೆಯನ್ನು ಮತ್ತು ಮಧ್ಯಾಹ್ನ 2 ಗಂಟೆಯವರೆಗೆ ಲೋಕಸಭೆಯ ಕಲಾಪವನ್ನು ಮುಂದೂಡಲಾಗಿದೆ. ಸದನದಲ್ಲಿ ಪ್ರಧಾನಿ ಮೋದಿ ಮಣಿಪುರ ಘಟನೆಯ ಬಗ್ಗೆ ಮಾತನಾಡಬೇಕು ಎಂಬ ಒತ್ತಾಯದಿಂದ ವಿಪಕ್ಷಗಳು ಹಿಂದೆ ಸರಿದಿದ್ದಲ್ಲಿ, ರಾಜ್ಯಸಭೆಯಲ್ಲಿ ಇಂದು ರೂಲ್​ ನಂಬರ್​ 267ರ ಅಡಿಯಲ್ಲಿ ಮಣಿಪುರ ವಿಚಾರ ಚರ್ಚೆಯಾಗಲಿದೆ. ಪ್ರಧಾನಿ ಮೋದಿ ಮಾತನಾಡದಿದ್ದಲ್ಲಿ ಮತ್ತೆ ಸದನದಲ್ಲಿ ಗದ್ದಲ ಉಂಟಾಗುವ ಸಾಧ್ಯತೆ ಇದೆ. (ಏಜೆನ್ಸೀಸ್​)

    ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಮುಂದಾದ ವಿಪಕ್ಷಗಳ ಇಂಡಿಯಾ ಒಕ್ಕೂಟ

    ತುಮಕೂರಿನಲ್ಲಿ ವಾಕಥಾನ್ ನಾಳೆ; ಕಾರ್ಗಿಲ್ ಯುದ್ಧ ಗೆಲುವಿನ 25ನೇ ವಿಜಯೋತ್ಸವ ಆಚರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts