ಎರಡನೇ ಬಾರಿಗೆ ಬೆಂಗಳೂರು ಮೈಸೂರು ಹೆದ್ದಾರಿ ಪರಿಶೀಲಿಸಿದ ಎಡಿಜಿಪಿ ಅಲೋಕ್ ಕುಮಾರ್

IMG-20230725-WA0086.jpg
Published on

ಬಿಡದಿ; ಎರಡನೇ ಬಾರಿ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ವೀಕ್ಷಣೆ ಮಾಡಿದ ರಸ್ತೆ ಸುರಕ್ಷತಾ ಹಾಗೂ ಸಂಚಾರಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್.

ಕುಂಬಳಗೂಡಿನ ವಿಶ್ವ ಒಕ್ಕಲಿಗ ಮಠದ ಬಳಿ ಹೆದ್ದಾರಿ ವೀಕ್ಷಣೆ ಮಾಡಿದ ಅಲೋಕ್ ಕುಮಾರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದರು. ಕಳೆದ ಒಂದು ತಿಂಗಳ ಹಿಂದೆಯಷ್ಡೆ ಅಲೋಕ್ ಕುಮಾರ್ ಹೆದ್ದಾರಿ ವೀಕ್ಷಣೆ ಮಾಡಿದ್ದರು. ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಕೆಲವು ನಿದರ್ಶನಗಳನ್ನ ನೀಡಿದ್ದರು.

ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕುವಂತೆ ಪೊಲೀಸರಿಗು ಅಲೋಕ್ ಕುಮಾರ್ ಸೂಚನೆ ನೀಡಿದ್ದರು. ಕುಂಬಳಗೂಡಿನಿಂದ ಚನ್ನಪಟ್ಟಣದ ಗಡಿ ಭಾಗ ಕೋಲೂರು ವರೆಗು ಹೆದ್ದಾರಿ ವೀಕ್ಷಣೆ ಮಾಡಿದರು.

ಈ ವೇಳೆ ಎಡಿಜಿಪಿಗೆ ಐಜಿಪಿ ರವಿಕಾಂತೇಗೌಡ, ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪಿಡಿ ರಾಹುಲ್ ಗುಪ್ತಾ ಸೇರಿದಂತೆ ಹಲವ ಅಧಿಕಾರಿಗಳು ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net