ಸತ್ಯ ಮತ್ತು ಸುಳ್ಳಿನ ನಡುವಿನ ‘ಗ್ರೇ ಗೇಮ್ಸ್​’; ಟೀಸರ್​ ಬಿಡುಗಡೆ

blank

ಬೆಂಗಳೂರು: ವಿಜಯ್​ ರಾಘವೇಂದ್ರ ಇತ್ತೀಚಿನ ದಿನಗಳಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಿದ್ದು, ಈಗ ಅವರು ‘ಗ್ರೇ ಗೇಮ್ಸ್​’ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಮನಶ್ಶಾಸ್ತ್ರಜ್ಞನ ಪಾತ್ರ ಮಾಡಿದ್ದಾರೆ. ಕಳೆದ ವರ್ಷ ಪ್ರಾರಂಭವಾದ ಈ ಚಿತ್ರ ಇದೀಗ ಮುಕ್ತಾಯವಾಗಿದ್ದು, ಇತ್ತೀಚೆಗೆ ಚಿತ್ರದ ಟೀಸರ್​ ಸಹ ಬಿಡುಗಡೆಯಾಗಿದೆ.

ಇದನ್ನೂ ಓದಿ: ‘ಎಕ್ಸ್​​​ಕ್ಯೂಸ್​ ಮಿ ಕೇಳಿ ನನ್ನ ಲೆಕ್ಚರು …’; ‘ಜಸ್ಟ್​ ಪಾಸ್​’ ಚಿತ್ರಕ್ಕೆ ಶರಣ್​ ಹಾಡು

‘ಗ್ರೇ ಗೇಮ್ಸ್​’ ಒಂದು ಸೈಕಲಾಜಿಕಲ್​ ಥ್ರಿಲ್ಲರ್​ ಚಿತ್ರವಾಗಿದ್ದು, ವಿಜಯ್​ ರಾಘವೇಂದ್ರ ಜತೆಗೆ ಶ್ರುತಿ ಪ್ರಕಾಶ್, ಭಾವನಾ ರಾವ್, ಅಪರ್ಣಾ, ರವಿ ಭಟ್, ಜೈ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸತ್ಯ ಮತ್ತು ಸುಳ್ಳಿನ ನಡುವಿನ ಕುರಿತಾದ ಚಿತ್ರ ಇದಾಗಿದ್ದು, ಆನ್‌ಲೈನ್ ಗೇಮಿಂಗ್​ಗೆ ಸಂಬಂಧಿಸಿದ ಅಪರಾಧಗಳ ವಿಷಯಗಳ ಸುತ್ತ ಸುತ್ತುತ್ತದೆ. ವಿಜಯ್ ರಾಘವೇಂದ್ರ ಇಲ್ಲಿ ಮನಶ್ಶಾಸ್ತ್ರಜ್ಞನಾಗಿ ಕಾಣಿಸಿಕೊಂಡರೆ, ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಭಾವನಾ ರಾವ್​ ಮತ್ತು ಚಿತ್ರನಟಿಯಾಗಿ ಶ್ರುತಿ ಪ್ರಕಾಶ್​ ಅಭಿನಯಿಸಿದ್ದಾರೆ. ತಂತ್ರಜ್ಞಾನ ಯುಗದಲ್ಲಿ ನಮ್ಮ ಮೇಲಾಗುವ ಮಾನಸಿಕ ಒತ್ತಡವನ್ನು ಆಧರಿಸಿದೆ.

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಸಾಲಿಮಠ, ‘ರಿಯಾಲಿಟಿ ಮತ್ತು ವರ್ಚುವಾಲಿಟಿ ಜಗತ್ತಿನ ಕಥೆಯುಳ್ಳ ಈ ಚಿತ್ರವು ಮನರಂಜನೆಯ ಜತೆಗೆ, ಗ್ರಹಿಕೆಗೆ ಸವಾಲು ಹಾಕುತ್ತದೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ.

ಇದನ್ನೂ ಓದಿ: ಈ ಚಿತ್ರದಲ್ಲಿರೋದು ಒಂದೇ ಪಾತ್ರ; ‘ರಾಘು’ ಬಿಡುಗಡೆ ದಿನಾಂಕ ಫಿಕ್ಸ್​

ಗಂಗಾಧರ ಸಾಲಿಮಠ್ ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ಕಥೆ-ಚಿತ್ರಕಥೆಯನ್ನೂ ಬರೆದಿದ್ದಾರೆ. ವರುಣ್​ ಡಿ.ಕೆ ಛಾಯಾಗ್ರಹಣವಿರುವ ಈ ಚಿತ್ರವನ್ನು ಆನಂದ ಹೆಚ್.ಮುಗದ್ ನಿರ್ಮಿಸಿದ್ದಾರೆ.

‘ರಾಮನ ಅವತಾರ’ದಲ್ಲಿ ರಿಷಿ … ಚಿತ್ರದ ಮೊದಲ ಲುಕ್​ ಬಿಡುಗಡೆ

Share This Article

Summer Tips: ಬೇಸಿಗೆಯಲ್ಲಿ ಕೆಟ್ಟ ಬೆವರು ವಾಸನೆಯಿಂದ ತೊಂದರೆ ಅನುಭವಿಸುತ್ತಿದ್ದೀರಾ? ಈ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ

Summer Tips: ಬೇಸಿಗೆಯಲ್ಲಿ ಬೆವರು ವಾಸನೆಯನ್ನು ತಪ್ಪಿಸಲು, ನೀವು ಪ್ರತಿದಿನ ಸ್ನಾನ ಮಾಡುವುದು ಮತ್ತು ನಿಯಮಿತವಾಗಿ…

ಈ ಬೇಸಿಗೆಯಲ್ಲಿ ಯಾವ ರೀತಿಯ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು ಗೊತ್ತಾ? Summer Clothes

Summer Clothes: ಬೇಸಿಗೆಯಲ್ಲಿ ಸುಡುವ ಬಿಸಿಲು ಮತ್ತು ಬೆವರಿನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಆಹಾರ ಕ್ರಮವನ್ನು ಬದಲಿಸಿಕೊಳ್ಳುತ್ತೇವೆ.…

ಹೆಚ್ಚಾದರೆ ದೇಹದ ಬೊಜ್ಜು ಭವಿಷ್ಯವಾದೀತು ನಜ್ಜುಗುಜ್ಜು

‘ಏನಾದ್ರೂ ಮಾಡಿ ಹೇಗಾದ್ರೂ ಮಾಡಿ ಸಾರ್, ಈ ಹೊಟ್ಟೆ ಕರಗಿ ಮೊದಲಿನಂತಾದರೆ ಸಾಕು. ನನಗಿನ್ನೂ ಮದುವೆಯಾಗಿಲ್ಲ.…