blank

‘ರಾಮನ ಅವತಾರ’ದಲ್ಲಿ ರಿಷಿ … ಚಿತ್ರದ ಮೊದಲ ಲುಕ್​ ಬಿಡುಗಡೆ

blank

ಬೆಂಗಳೂರು: ‘ರಾಮನ ಅವತಾರ’ ಎಂಬ ಚಿತ್ರದಲ್ಲಿ ರಿಷಿ ನಟಿಸುತ್ತಾರೆ ಎಂಬ ಸುದ್ದಿ ಈ ಹಿಂದೆಯೇ ಕೇಳಿಬಂದಿತ್ತು. ಆದರೆ, ಆ ನಂತರ ಚಿತ್ರದ ಸುದ್ದಿಯೇ ಇರಲಿಲ್ಲ. ಈಗ ಆ ಚಿತ್ರ ಸದ್ದಿಲ್ಲದೆ ಮುಗಿರುವುದಷ್ಟೇ ಅಲ್ಲ, ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಮಧ್ಯೆ, ಇತ್ತೀಚೆಗೆ ಚಿತ್ರದ ಫಸ್ಟ್​​ಲುಕ್​ ಬಿಡುಗಡೆಯಾಗಿದೆ.

ಇದನ್ನೂ ಓದಿ: ರಾಜಕೀಯದ ‘ದರ್ಬಾರ್’​ನಲ್ಲಿ ವಿ. ಮನೋಹರ್​; 23 ವರ್ಷಗಳ ನಂತರ ನಿರ್ದೇಶನಕ್ಕೆ …

ಈ ಪೋಸ್ಟರ್​ನಲ್ಲಿ ರಿಷಿ, ರಾಮನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜತೆಗೆ ಅರುಣ್​ ಸಾಗರ್​ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶುಭ್ರ ಅಯ್ಯಪ್ಪ ಮತ್ತು ಪ್ರಣೀತಾ ಸುಭಾಷ್​ ನಾಯಾಕಿಯರಾಗಿ ಅಭಿನಯಿಸಿದ್ದಾರೆ.

ಈ ಹಿಂದೆ ಸಿಂಪಲ್​ ಸುನಿ ಕ್ಯಾಂಪ್​ನಲ್ಲಿ ಸಹಾಯಕ ನಿರ್ದೇಶಕರಾಗಿ ಮತ್ತು ಬರಹಗಾರರಾಗಿ ಕೆಲಸ ಮಾಡಿದ ಅನುಭವವಿರುವ ವಿಕಾಸ್​ ಪಂಪಾಪತಿ, ಈ ಚಿತ್ರ ನಿರ್ದೇಶಿಸುವುದರ ಜತೆಗೆ ಕಥೆ-ಚಿತ್ರಕಥೆಯನ್ನು ಸಹ ರಚಿಸಿದ್ದಾರೆ. ಇದು ಅವರು ನಿರ್ದೇಶಿಸುತ್ತಿರುವ ಮೊದಲ ಚಿತ್ರ. ಇನ್ನು, ಈ ಹಿಂದೆ ರಿಷಿ ಅಭಿನಯದ ‘ಆಪರೇಷನ್​ ಅಲಮೇಲಮ್ಮ’ ಚಿತ್ರವನ್ನು ನಿರ್ಮಿಸಿದ್ದ ಅಮರೇಜ್​ ಸೂರ್ಯವಂಶಿ ಈ ಚಿತ್ರದ ನಿರ್ಮಾಪಕರು.

ಇದನ್ನೂ ಓದಿ: ಸತ್ಯ ಪಿಕ್ಚರ್ಸ್​ ಚಾನಲ್​ನಲ್ಲಿ ಬಿಡುಗಡೆಯಾಯ್ತು ‘ಬ್ಲಾಕ್​ ಅಂಡ್​ ವೈಟ್​’ …

‘ರಾಮನ ಅವತಾರ’ ಒಂದು ರೊಮ್ಯಾಂಟಿಕ್​ ಕಾಮಿಡಿ ಚಿತ್ರವಾಗಿದ್ದು, ಬೆಂಗಳೂರು, ಉಡುಪಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದು, ಜೂನ್​ ಮೊದಲ ವಾರದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ಬಾಲಿವುಡ್​ನಲ್ಲಿ ಮೌಲ್ಯ, ಶಿಸ್ತು ಇಲ್ಲ … ಕಾಜಲ್​ ಅಗರ್​ವಾಲ್ ಅಭಿಪ್ರಾಯ

Share This Article

ಈ ಬೇಸಿಗೆಯಲ್ಲಿ ಒಂದು ತಿಂಗಳು ಟೀ ಕುಡಿಯೋದು ಬಿಟ್ರೆ ಏನಾಗುತ್ತದೆ ಗೊತ್ತಾ? Quitting tea

Quitting tea:  ಅನೇಕ ಜನರು ಪ್ರತಿದಿನ ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಚಹಾ ಕುಡಿಯುವ ಮೂಲಕ…

Summer Foods: ಬೇಸಿಗೆಯಲ್ಲಿ ಬಿಸಿಲನ್ನು ತಡೆದುಕೊಳ್ಳಲು ಯಾವ ಆಹಾರಗಳನ್ನು ಸೇವಿಸಬೇಕು ಗೊತ್ತಾ?

Summer Foods: ದಿನೇ ದಿನೇ ಬಿಸಿಲಿನ ತೀವ್ರತೆ ಹೆಚ್ಚುತ್ತಲೇ ಇದೆ. ಬೆಳಿಗ್ಗೆ 10 ಗಂಟೆಯ ನಂತರ…

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ?; ಮನೆಯಲ್ಲಿರುವ ಈ ಒಂದು ವಸ್ತುವಿನಿಂದ ಸಿಗಲಿದ ಪರಿಹಾರ | Health Tips

ಇಂದಿನ ಕಾರ್ಯನಿರತ ಜೀವನ ಮತ್ತು ಅಸಮತೋಲಿತ ಆಹಾರ ಪದ್ಧತಿಯಿಂದಾಗಿ ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿದೆ. ಇದು ಇಡೀ…